20 C
Bengaluru
Wednesday, January 22, 2025

ಕೃಷಿ ಪ್ರಶ್ನೆಗಳಿಗೆ ಒಂದು ಕಾಲ್ ಸೆಂಟರ್,ರೈತ ಕರೆ ಕೇಂದ್ರ’ಕ್ಕೆ ಸಚಿವ ಚಲುವರಾಯಸ್ವಾಮಿ

#minister #Chaluvarayaswamy #call center #agricultural

ಬೆಂಗಳೂರು;ಕೃಷಿ ಇಲಾಖೆಯಲ್ಲಿ ರೈತರಿಗೆ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡಲು ಏಕೀಕೃತ ರೈತ ಕರೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಶುಕ್ರವಾರ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,’ಈ ಹಿಂದೆ ಬೆಳೆ ಸಮೀಕ್ಷೆ, ಪಿ.ಎಂ. ಕಿಸಾನ್,ರೈತ ವಿದ್ಯಾನಿಧಿ,ಬೆಳೆ ವಿಮೆ ಕೃಷಿ ಸಂಜೀವಿನಿ, ಕೆ-ಕಿಸಾನ್ ಮತ್ತು ರೈತರ ಸಹಾಯವಾಣಿ ಎಂಬ ಏಳು ದೂರವಾಣಿ ಸಂಖ್ಯೆಗಳು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದರು.ಕೃಷಿಗೆ ಸಂಬಂಧಿತ ಮಾಹಿತಿ,ಸಲಹೆ ಮಾರ್ಗದರ್ಶನ‌ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.ಕೃಷಿ ಇಲಾಖೆಯ ಕೃಷಿ ಆಯುಕ್ತಾಲಯದಲ್ಲಿ ರೈತ ಕರೆ ಕೇಂದ್ರ ಉದ್ಘಾಟಿಸಿ,ನಂತರ ಸಂಗಮ ಸಭಾಂಗಣದಲ್ಲಿ 2023-24 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಭೀಮಾ ಪಲ್ಸ್ ತೊಗರಿ ಬೇಳೆ,ಬ್ರಾಂಡ್ ಬಿಡುಗಡೆ ಮಾಡಿ ಸಚಿವರು ಮಾತನಾಡಿದರು.ರೈತರಿಗೆ ಸರ್ಕಾರದ ‌ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ . ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ.ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮ‌ದಲ್ಲಿಟ್ಟು ಸಮೀಕ್ಷೆ ನಡೆಸಬೇಕು ಎಂದು ಅವರು ಹೇಳಿದರು.ಕಂದಾಯ ,ಕೃಷಿ ,ತೋಟಗಾರಿಕೆ,ರೇಷ್ಮೆ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ‌ತೊಡಗುತ್ತಿವೆ ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿ ಕೊಂಡರೆ ಉತ್ತಮ ಎಂದು ಸಚಿವರು ಹೇಳಿದರು.

ವಿಭಿನ್ನ ಯೋಜನೆಗಳಿಗೆ ಈ ಹಿಂದೆ ಗೊತ್ತುಪಡಿಸಿದ ಸಂಪರ್ಕ ಸಂಖ್ಯೆಗಳನ್ನು ಒಂದೇ ಘಟಕವಾಗಿ ಸಂಯೋಜಿಸಲಾಗಿದೆ – ರೈತರ ಕರೆ ಕೇಂದ್ರ. ನೆರವು ಬಯಸುವ ರೈತರು ಈಗ ತಮ್ಮ ಪ್ರಶ್ನೆಗಳು ಮತ್ತು ಕಾಳಜಿಗಳಿಗಾಗಿ ಸಹಾಯವಾಣಿ ಸಂಖ್ಯೆ 1800-425-3553 ನೂತನ ಏಕೀಕೃತ ಸಹಾಯವಾಣಿ ಕರೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ,ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್, ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ ಎಸ್ ರಮೇಶ್, ರೇಷ್ಮೆ ಅಭಿವೃದ್ಧಿ ಆಯುಕ್ತ ರಾಜೇಶ್ ಗೌಡ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೆಶಕ ಮಾಧುರಾಮ್ ಸೇರಿದಂತೆ ಇತರರು ಇದ್ದರು.

 

Related News

spot_img

Revenue Alerts

spot_img

News

spot_img