27.4 C
Bengaluru
Monday, July 8, 2024

ವಿನಾಶ ಚಕ್ರ – ಸೃಷ್ಠಿ ಚಕ್ರ ಎಂದರೇನು?: ಮನೆಯಲ್ಲಿ ವಸ್ತುಗಳು ಇಡೋದ್ರ ಬಗ್ಗೆ ಪಂಚ ಭೂತಗಳ ಸ್ನೇಹತತ್ವ ತಿಳಿದುಕೊಳ್ಳಿ!

ವಾಸ್ತು ಶಾಸ್ತ್ರ ಎಂದರೆ ಕಲ್ಪನೆ ಮೇಲೆ ಕಟ್ಟಿರುವ ಶಾಸ್ತ್ರವಲ್ಲ. ವಾಸ್ತು ಶಾಸ್ತ್ರ ಪಂಚತತ್ವಗಳ ಮೇಲೆ ನಿಂತಿದೆ.
ಭೂಮಿಯ ಆಯಸ್ಕಾಂತ ಶಕ್ತಿಯ ಅನ್ವಯ ನಿವೇಶನ ಹಾಗೂ ಕಟ್ಟಡಗಳ ಹೆಚ್ಚಳ, ಪ್ರೊಜೆಕ್ಷನ್ , ಕಟ್ಟಡ ಗೋಡೆಗಳ ಗಾತ್ರ ಮತ್ತು ಭೂಮಿಯ ಇಳಿಜಾರು ಮತ್ತಿತರ ಮಹತ್ವದ ವಿಷಯಗಳನ್ನು ವಾಸ್ತು ಶಾಸ್ತ್ರ ಆಧರಿಸಿದೆ.
ಇನ್ನು ವಾಸ್ತುಶಾಸ್ತ್ರ ಪಂಚತತ್ವಗಳನ್ನು ಹೇಗೆ ನಿರ್ವಹಿಸುತ್ತದೆ. ಸೃಷ್ಟಿ ಚಕ್ರ ಎಂದರೆ ಏನು ? ವಿನಾಶ ಚಕ್ರ ಎಂದರೆ ಏನು ? ಇವುಗಳಿಗೆ ಇರುವ ಸಂಬಂಧ ಹಾಗೂ ಪಂಚತತ್ವಗಳು ಹಾಗೂ ವಾಸ್ತುವಿಗೆ ಇರುವ ಸಂಬಂಧದ ಇಲ್ಲಿ ವಿವರಿಸಲಾಗಿದೆ.

ಪೃಥ್ವಿ, ಗಾಳಿ, ಜಲ, ಅಗ್ನಿ, ಆಕಾಶ ಇವು ಪಂಚತತ್ವಗಳು. ಪಂಚಭೂತಗಳು ಅಂತಲೂ ಕರೆಯುತ್ತಾರೆ. ಇವುಗಳು ಸರಿಯಾದ ಪ್ರಮಾಣದಲ್ಲಿ ಇದ್ದರೆ ಆ ಮನೆಯಲ್ಲಿ ವಾಸಿಸುವರು ಆರೋಗ್ಯವಾಗಿ ಎಲ್ಲಾ ರೀತಿಯ ಅಭಿವೃದ್ಧಿ ಕಾಣುತ್ತಾರೆ. ಇವುಗಳಲ್ಲಿ ವ್ಯತ್ಯಾಸವಾದರೆ ಕುಂಠಿತವಾಗುತ್ತಾರೆ. ಇನ್ನು ಪಂಚಭೂತಗಳು ಅವುಗಳ ನಡುವಿನ ಸ್ನೇಹ ತತ್ವ, ಶತೃ ತತ್ವದ ಬಗ್ಗೆಯೂ ವಾಸ್ತುಶಾಸ್ತ್ರ ಹೇಳುತ್ತದೆ.

ಸೃಷ್ಟಿ ಚಕ್ರ: ಅಕಾಶ ತತ್ವ. ಬ್ರಹ್ಮನಿಂದ ಆಕಾಶ ತತ್ವ ಸೃಷ್ಟಿಯಾಗುತ್ತದೆ. ಆಕಾಶ ತತ್ವದಿಂದ ವಾಯು ತತ್ವ ಸೃಷ್ಟಿಯಾಗುತ್ತದೆ. ವಾಯು ತತ್ವದಿಂದ ಅಗ್ನಿ ತತ್ವ ಸೃಷ್ಠಿಯಾಗುತ್ತದೆ. ಅಗ್ನಿ ತತ್ವದಿಂದ ಜಲ ತತ್ವ ಸೃಷ್ಟಿಯಾಗುತ್ತದೆ. ಜಲ ತತ್ವದಿಂದ ಪೃಥ್ವಿ ತತ್ವ ಸೃಷ್ಟಿಯಾಗುತ್ತದೆ. ಇದನ್ನು ಸೃಷ್ಟಿ ಛಕ್ರ ಎಂದು ಕರೆಯುತ್ತಾರೆ.
ಈ ಮೇಲಿನ ತತ್ವಗಳ ಅನ್ವಯ ಒಂದು ಮನೆಯಲ್ಲಿ ಆಯಾ ವಸ್ತುಗಳನ್ನು ಆಯಾ ಭಾಗಕ್ಕೆ ಇಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಆಯಾ ಪಂಚತತ್ವಗಳ ಸ್ನೇಹ ತತ್ವ ಆಧಾರದ ಮೇಲೆಯೇ ಗೃಹ ವಾಸ್ತು ನಿರ್ಮಾಣ ಮಾಡಲಾಗಿದೆ. ಸಂಬಂಧಪಟ್ಟ ವಸ್ತುಗಳು ಸೂಕ್ತ ಜಾಗದಲ್ಲಿ ಇದ್ದರೆ ಆರೋಗ್ಯ ಸಮೇತ ಕುಟುಂಬ ನೆಮ್ಮದಿಯಿಂದ ಇರುತ್ತದೆ.

ವಿನಾಶ ಚಕ್ರ: ಭೂ ತತ್ವವು ನೀರಿನಲ್ಲಿ ನಾಶವಾಗುತ್ತದೆ. ನೀರು ಅಗ್ನಿ ತತ್ವವನ್ನು ನಾಶ ಮಾಡುತ್ತದೆ. ಅಗ್ನಿ ತತ್ವವು ಗಾಳಿ ತತ್ವದಿಂದ ನಾಶವಾಗುತ್ತದೆ. ಗಾಳಿ ತತ್ವವು ಆಕಾಶ ತತ್ವದಿಂದ ನಾಶವಾಗುತ್ತದೆ. ಆಕಾಶ ತತ್ವವು, ಬ್ರಹ್ಮನಾದದೊಡನೆ ಸೇರಿಕೊಳ್ಳುತ್ತದೆ. ಇದನ್ನು ವಿನಾಶ ತತ್ವ ಎಂದು ಕರೆಯುತ್ತೇವೆ.

ತತ್ವಗಳ ನಡುವೆ ಸ್ನೇಹ ಮತ್ತು ವೈರತ್ವ: ಭೂ ತತ್ವವು ಜಲ ತತ್ವದೊಡನೆ ಸ್ನೇಹ ಹೊಂದುತ್ತದೆ. ಗಾಳಿ ಮತ್ತು ಅಗ್ನಿ ತತ್ವದೊಡನೆ ವೈರತ್ವ ಹೊಂದುತ್ತದೆ. ಅಂದರೆ ಗಾಳಿ ಮತ್ತು ಅಗ್ನಿಯಿಂದ ಭೂಮಿ ನಾಶವಾಗುತ್ತದೆ.
ಜಲ ತತ್ವವು ಭೂ ತತ್ವದೊಡನೆ ಸ್ನೇಹ ಹೊಂದುತ್ತದೆ.

ಗಾಳಿ ಮತ್ತು ಅಗ್ನಿ ತತ್ವದೊಡನೆ ವೈರತ್ವ ಹೊಂದುತ್ತದೆ. ಅಂದರೆ ನೀರಿಗೆ ಅಗ್ನಿ ಮತ್ತು ಗಾಳಿ ಕಂಡರೆ ಆಗುವುದಿಲ್ಲ.

ಅಗ್ನಿ ತತ್ವವು ಗಾಳಿ ತತ್ವದೊಡನೆ ಸ್ನೇಹ ಹೊಂದಿರುತ್ತದೆ. ಹಾಗೂ ಭೂ ತತ್ವ ಜಲ ತತ್ವದೊಡನೆ ವೈರತ್ವ ಹೊಂದರುತ್ತದೆ.

ಗಾಳಿ ತತ್ವವು ಬೆಂಕಿ ತತ್ವದೊಡನೆ ಸ್ನೇಹ ಹೊಂದಿರುತ್ತದೆ. ಭೂ ತತ್ವ ಮತ್ತು ಜಲ ತತ್ವದೊಡನೆ ವೈರತ್ವ ಹೊಂದಿರುತ್ತದೆ.

ಆಕಾಶ ತತ್ವವು ಎಲ್ಲಾ ತತ್ವಗಳೊಡನೆ ಸಮಾನತೆ ಹೊಂದುತ್ತದೆ.
ಈ ಮೇಲಿನ ರೀತಿಯಲ್ಲಿ ತತ್ವಗಳು ಕೆಲಸ ಮಾಡುತ್ತವೆ. ಅದೇ ಪ್ರಕಾರ ಮನೆಯಲ್ಲಿ ವಸ್ತುಗಳು ಮತ್ತು ಜಾಗವನ್ನು ಹೊಂದಿಸಿ ಇಟ್ಟರೆ, ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯವರು ಆರೋಗ್ಯ ಸಮೇತ ಕ್ಷೇಮವಾಗಿರುತ್ತಾರೆ.  ವೈರತ್ವ ತತ್ವದೊಡನೆ ಹೊಂದಿಸಿ ವಾಸ್ತು ನಿರ್ವಹಿಸಿದರೆ ಅಭಿವೃದ್ಧಿ ಕುಂಟಿತಗೊಂಡು ನೆಮ್ಮದಿ ಹಾಳಾಗುತ್ತದೆ. ದುರಂತಗಳು ಸಂಭವಿಸುತ್ತವೆ.

Related News

spot_img

Revenue Alerts

spot_img

News

spot_img