28.2 C
Bengaluru
Wednesday, July 3, 2024

ಫೋಡಿ ನಂತರ RTC ಯಲ್ಲಿ P ನ ಅರ್ಥ.?

ಇದನ್ನು ಪ್ರಾಥಮಿಕವಾಗಿ ಅನುದಾನ ಭೂಮಿಗಾಗಿ ಬಳಸಲಾಗುತ್ತದೆ ಮತ್ತು ಇದು Pಸಂಖ್ಯೆಯನ್ನು (ಬಾಕಿಯಿರುವ ಸಂಖ್ಯೆ) ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಧರಕಾಸ್ಥ್ ಭೂಮಿ, ಸರ್ಕಾರದಿಂದ ಅನುದಾನ ಅಥವಾ ಗ್ರ್ಯಾಂಟೆಡ್ ಲ್ಯಾಂಡ್ ಗಳಲ್ಲಿ ಬಳಸಲಾಗುತ್ತದೆ. ಕಾರ್ಯವಿಧಾನವು ದೀರ್ಘವಾಗಿದೆ ಮತ್ತು ಕಡತವನ್ನು ಗ್ರಾಮ ಕಾರ್ಯದರ್ಶಿಯಿಂದ ತಹಶೀಲ್ದಾರ್‌ಗೆ, ನಂತರ ಸಹಾಯಕ ಆಯುಕ್ತರಿಗೆ, ನಂತರ ಜಿಲ್ಲಾಧಿಕಾರಿಗೆ ರವಾನಿಸಲಾಗುತ್ತದೆ. ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಸುಮಾರು ಐದಾರು ತಿಂಗಳು ಅಥವಾ ಕೆಲವು ವೇಳೆ ವರ್ಷಗಳು ಸಹ ಆಗಬಹುದು.

P ಸರ್ವೇ ನಂಬರ್ ತೆಗೆಸಲು ಪೋಡಿಗಾಗಿ ಬೇಕಾದ ಸಮಾನ್ಯ ಹಾಗೂ ಅತ್ಯವಶ್ಯಕ ದಾಖಲೆಗಳು

*ಆಕಾರ್ ಬಂದ್ , ಕರ್ದಾ, ಸಾಗುವಳಿ‌ಚೀಟಿ ವಿತರಣವಹಿ, ಮ್ಯುಟೇಷನ್ , ಆರ್ ಟಿಸಿ, ಒಮ್ ಪತ್ರಗಳು, ರೆವಿನ್ಯೂ ನಕ್ಷೆ ಧೃಡಿಕೃತ ನಕಲು ಪ್ರತಿಗಳು, ಗ್ರಾಮ ನಕ್ಷೆ, ಸೇರಿದಂತೆ ದಾಖಲೆಗಳನ್ನು ಧೃಡಿಕರಿಸಿದ ನಂತರ VI ಮೂಲಕ ಸಂಬಂಧಪಟ್ಟ ಉಪ ತಹಶಿಲ್ದಾರರ ಮೂಲಕ ಮೇಲಧಿಕಾರಿಗಳಿಗೆ ಅರ್ಜಿ ನೀಡ ಬೇಕಾಗುತ್ತದೆ. ಬಳಿಕ ಗ್ರಾಮಲೆಕ್ಕಿಗರು ಎಲ್ಲಾ ದಾಖಲೆಗಳನ್ನು ಮತ್ತು ಅವುಗಳ ನಂಬರ್ ಗಳನ್ನು ದಾಖಲಿಸಿ, ಧೃಡಪಡಿಸಿಕೊಂಡು ಮುಂದಿನ ‌ಆದೇಶಕ್ಕೆ ಕಳುಹಿಸಬೇಕಾಗುತ್ತದೆ.

ಸಾಮಾನ್ಯವಾಗಿ ಅಧಿಕಾರಿಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದರೆ ರೈತರಿಗೆ ಅತ್ಯಂತ ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ. ಸದ್ಯ ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಭೂಮಿ ನೊಂದಣಿ ಸೇರಿದಂತೆ ಅನೇಕ ಕೆಲಸಗಳು ಸರ್ಕಾರದ ಅಧಿಕೃತ ಅನ್ ಲೈನ್ ವೆಬ್ಸೈಟ್ ಗಳ ಮೂಲಕವೇ ಎಲ್ಲಾ ಕೆಲಸಗಳು ಸಹ ನಡೆಯುತ್ತವೆ. ಆದ್ರೆ ಕೆಲವೊಮ್ಮೆ ಅಧಿಕಾರಿಗಳು ಕೆಲವೊಮ್ಮೆ ಒತ್ತಡದ ನೆಪ ಹೇಳಿಕೊಂಡು ಸಾಮಾನ್ಯವಾಗಿ ಅರ್ಜಿಗಳ ವಿಲೇರಿ ಕೆಲಸವನ್ನು ವಿಳಂಬ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ, ಹಾಗಾಗಿ ರೈತರು ತಮ್ಮ ಭೂಮಿಗೆ ಸಂಬಂಧಪಟ್ಟ ಕಡತಗಳ ವಿಲೇವಾರಿ ಬಗ್ಗೆ ಕಾಲ ಕಾಲಕ್ಕೆ ಅವುಗಳ ಮಾಹಿತಿನಪಡೆಯುವುದು, ಕೆಲವೊಮ್ಮೆ ಉನ್ನತಮಟ್ಟದ ಅಧಿಕಾರಿಗಳ ಗಮನಕ್ಕೆ ತರುವು ಮೂಲಕ ಸಕಾಲಕ್ಕೆ ತಮ್ಮ ಕೆಲಸವನ್ನು ನಿರ್ವಹಣೆ ಮಾಡುವುದು ಸಹ ಉತ್ತಮವಾಗಿರುತ್ತದೆ…

Related News

spot_img

Revenue Alerts

spot_img

News

spot_img