ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಭಾರಿ ಸುದ್ದಿಯಲ್ಲಿದೆ. ವಿಶ್ವದ ಅತಿ ಐಶಾರಾಮಿ ಬಂಗಲೆ ಅಂಟಿಲಿಯಾಯಲ್ಲಿ 600 ಮಂದಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅಡುಗೆ ಭಟ್ಟನ ತಿಂಗಳ ವೇತನ 2 ಲಕ್ಷ ಎಂಬ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ. ಅಂಟಿಲಿಯಾ ಮನೆಗೆ 55 ಬಾಡಿಗಾರ್ಡ್ ಗಳನ್ನು ನೇಮಿಸಿದೆ. ಅಂಬಾನಿ ತನ್ನ ಐಶರಾಮಿ ಮನೆಗೆ ಅಂಟಿಲಿಯಾ ಹೆಸರು ಇಟ್ಟಿದ್ದಾರೆ. ಆದರೆ ಈ ಹೆಸರಿನ ಮೂಲ ಹುಡುಕಿದರೆ ಭಯ ಆಗುತ್ತದೆ. ಯಾಕೆಂದರೆ ಅಂಟಿಲಿಯಾ ಎಂಬುದು ಒಂದು ಐಲ್ಯಾಂಡ್‌ನ ಹೆಸರು! ಅಂಟಿಲಿಯಾ ಐಲ್ಯಾಂಡ್ ಹಿಂದೆ ಘನ ಘೋರ ಇತಿಹಾಸವಿದೆ.
ಅಂಬಾನಿಯ ಅಂಟಿಲಿಯಾ ಬಂಗಲೆ ಇಪ್ಪತ್ತೇಳು ಹಂತಸ್ತು ಇದೆ. 173 ಮೀಟರ್ ಎತ್ತರವಿರುವ ಈ ಕಟ್ಟಡದಲ್ಲಿ ಮೂರು ಹೆಲಿಪ್ಯಾಡ್ ಇವೆ. 168 ಕಾರು ನಿಲ್ಲುವ ಪಾರ್ಕಿಂಗ್ ಇದೆ. ಮಿಗಿಲಾಗಿ 9 ಹೈ ಸ್ಪೀಡ್ ಎಲಿವೇಟರ್ ಇದೆ. ಟೆರೇಸ್ ಗಾರ್ಡನ್, ಸ್ವಿಮ್ಮಿಂಗ್ ಫೂಲ್ ಸ್ಪಾ , ಹೆಲ್ತ್ ಕೇರ್, ದೇಗುಲ ಕೂಡ ಇದೆ. 2012 ರಲ್ಲಿ ಅಂಬಾನಿ ಈ ಮನೆಗೆ ಪ್ರವೇಶ ಮಾಡಿದ್ದರು. ವಿಶ್ವದ ಅತಿ ದುಬಾರಿ ಬಂಗಲೆ ಎಂಬ ಖ್ಯಾತಿ ಈ ಬಂಗಲೆಯದ್ದು. ಇನ್ನು 1.20 ಎಕರೆ ಜಾಗದಲ್ಲಿ ಅಂಟಿಲಿಯಾ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಇಲ್ಲಿ ಅನಾಥಾಶ್ರಮವಿತ್ತು. 2002 ರಲ್ಲಿ ಟ್ರಸ್ಟ್ ಜಾಗವನ್ನು ಅಂಬಾನಿ ಒಡೆತನದ ಅಂಟಿಲಿಯಾ ಕಮರ್ಷಿಯಲ್ ಪ್ರೆ. ಲಿ. 21 ಕೋಟಿ ರೂ.ಗೆ ಖರೀದಿ ಮಾಡಿತ್ತು. 2011 ರಲ್ಲಿ ಐವತ್ತು ಪೂಜಾರಿಗಳು ವಾಸ್ತು ನೋಡಿ ಪೂಜೆ ನೆರವೇರಿಸಿದ್ದರು. ಇವತ್ತಿಗೆ ಅಂಬಾನಿಯ ಅಂಟಿಲಿಯಾ 200 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಅಚ್ಚರಿ ಏನೆಂದರೆ, 2017 ಜು. 10 ರಂದು ಅಂಟಿಲಿಯಾದ 9 ನೇ ಪ್ಲೋರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕೆಲವೇ ಕ್ಷಣಗಳಲ್ಲಿ ಬೆಂಕಿಯನ್ನು ನಂದಿಸಲಾಗಿತ್ತು. ಇದಾದ ಬಳಿಕ 2021 ಫೆ. 25 ರಲ್ಲಿ ಜಿಲೆಟಿನ್ ಸ್ಫೋಟಕ ಕಡ್ಡಿಗಳು ಇದ್ದ ಕಾರನ್ನು ಅಂಬಾನಿ ಮನಿ ಸಮೀಪ ಜಪ್ತಿ ಮಾಡಲಾಗಿತ್ತು. ಅಂದರೆ 2012 ರಿಂದ ಈವರೆಗೆ ಎರಡು ಅವಘಡಗಳು ಸಂಭವಿಸಿವೆ. ಎರಡು ಅವಘಡಗಳು ಕೂಡ ಭಾರಿ ಚರ್ಚೆಯಾಗಿದ್ದವು.
ಅಂಟಿಲಿಯಾ ಏನಿದು?
ಅಂಬಾನಿ ಬಂಗಲೆಗೆ ಇಟ್ಟಿರುವ ಹೆಸರು ಅಂಟಿಲಿಯಾ. ಇದರ ಇತಿಹಾಸದ ಘನಘೋರವಾಗಿದೆ. ಮೋಂಟೆಗೋ ಅಂಟಿಲಿಯಾ ಎಂಬ ಸಿಟಿ ಈಗಲೂ ಇಟಲಿಯಲ್ಲಿದೆ. ಆದ್ರೆ, ಅಂಟಿಲಿಯಾ ಎಂಬುದು ಹದಿನೈದನೇ ಶತಮಾನದಲ್ಲಿ ಬೆಳಕಿಗೆ ಬಂದಿದ್ದ ಇಂದೊಂದು ಫ್ಯಾಂಥಮ್ ಐಲ್ಯಾಂಡ್. ಫ್ಯಾಂಥಮ್ ಅಂದ್ರೆ ಕನ್ನಡದಲ್ಲಿ ಬೇತಾಳ, ಪಿಶಾಚಿಗಳು, ಮಾಯೆ, ಸುಳ್ಳು ಎಂದರ್ಥ. ಇದು ಅಂಟ್ಲಾರ್ಟಿಕ್ ಸಾಗರದ ಪೋರ್ಚುಗಲ್ ಮತ್ತು ಸ್ಪೈನ್ ನ ಪಶ್ಚಿಮ ದಿಕ್ಕಿನಲ್ಲಿ ಬರುತ್ತದೆ. ಇಸ್ಲೇ ಆಫ್ ಸೆವೆನ್ ಸಿಟಿ ಎಂಥಲೂ ಕರೆಯುತ್ತಾರೆ. ಐಬೇರಿಯನ್ ದಂತಕಥೆಯಿಂದ ಹುಟ್ಟಿಕೊಂಡಿದೆ. ಇಸ್ಪಾನಿಯಾದ ಮುಸ್ಲಿಂ ದೊರೆಯ ವಿಜಯದ ಬಳಿಕ ಇಲ್ಲಿಂದ ಪಲಾಯನಗೊಳ್ಳಲು ಏಳು ಕ್ರಿಶ್ಚಿಯನ್ ವಿಸಿಗೋಥಿಕ್ ಬಿಷಪ್ ಗಳು ತಮ್ಮ ಹಿಂಡುಗಳೊಂದಿಗೆ ಹಡಗುಗಳಲ್ಲಿ ಹೊರಟರು. ಪಶ್ಚಿಮಕ್ಕೆ ಅಂಟ್ಲಾಟಿಕ್ ಮಹಾ ಸಾಗರಕ್ಕೆ ಪ್ರಯಾಣಿಸಿ ಅಲ್ಲಿ ಏಳು ವಸಹಾತುಗಳನ್ನು ಸ್ಥಾಪಿಸಿದರು. ಈ ಏಳು ಬಿಷಪ್ ಗಳು ಮೊದಲು ಇಳಿದಿದ್ದೇ ಪ್ರೇತಗಳ ಐಲ್ಯಾಂಡ್ ಅಂಟಿಲಿಯಾದಲ್ಲಿ ಎನ್ನುತ್ತದೆ ಇತಿಹಾಸ. ಇದೊಂದು ಆಯುತಾಕಾರದ ದೊಡ್ಡ ದ್ವೀಪ. ಅಂಟ್ಲಾಟಿಕಾ ಮಹಾಸಾಗರದಲ್ಲಿ ನೌಕಯಾನ ಮಾಡಲು ಪ್ರಾರಂಭಿಸಿದಾಗ ಅಂಟಿಲಿಯಾ ಚಿತ್ರಣ ಕ್ರಮೇಣ ಕಣ್ಮರೆ ಆಯಿತು.
ಕೆಲವು ವಾಸ್ತು ತಜ್ಞರು ಹೇಳುವ ಪ್ರಕಾರ ಅಂಬಾನಿಯ ಬಂಗಲೆಗೆ ಅಂಟಿಲಿಯಾ ಹೆಸರು ಇಟ್ಟಿರುವುದು ಒಳ್ಳೆದಲ್ಲ. ಯಾಕೆಂದರೆ ಅಂಟಿಲಿಯಾ ನಕಾರಾತ್ಮಕ ಪ್ರಭಾವ ಬೀರುವ ಐಲ್ಯಾಂಡ್ ಆಗಿದ್ದು, ಅಂಬಾನಿ ಈ ಐಲ್ಯಾಂಡ್ ಹೆಸರು ಇಡಲು ಕಾರಣವೇನು ಎಂಬುದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.
ಅಂತೂ ಅಂಟೀಲಿಯಾ ದ್ವೀಪ ಅವಘಡಗಳಿಗೆ ಹೆಸರುವಾಸಿ. ಇತಿಹಾಸದಲ್ಲಿ ಅಂಟಿಲಿಯಾ ಐಲ್ಯಾಂಡ್ ಭೂತ ಪ್ರೇತಗಳಿಗೆ ಸಾಕ್ಷಿಯಾಗಿತ್ತು ಎಂದು ದಂತಕಥೆಗಳು ಹೇಳುತ್ತವೆ.