25 C
Bengaluru
Monday, December 23, 2024

ಭಾರತದಲ್ಲಿ ವಿವಾಹ ನೋಂದಣಿ ನಿಯಮಗಳು: ಹಿಂದೂ- ಮುಸ್ಲಿಂ, ಕ್ರಿಶ್ಚಿಯನ್- ಪಾರ್ಸಿ ವಿವಾಹ ನೋಂದಣಿ ಕಾನೂನು

#Marriage #Hindu Marriage act 1955 #Special Marriage act 1954 #Marriage certificate,
ಬೆಂಗಳೂರು, ನ. 24: ಭಾರತದ ಸಂಪ್ರದಾಯದ ಪ್ರಕಾರ ವಿವಾಹಕ್ಕೆ ಮಹತ್ವದ ಸ್ಥಾನವಿದೆ. ಪತಿ ಪತ್ನಿಯರ ನಡುವಿನ ಸುರಕ್ಷಿತ ಬಾಂಧವ್ಯದ ಸಂಕೇತ. ಬಹುಮುಖ್ಯವಾಗಿ ಭಾರತ ಹಿಂದೂ- ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಕ್ ರನ್ನು ಒಳಗೊಂಡಿರುವ ಜಾತ್ಯತೀತ ರಾಷ್ಟ್ರ. ಒಂದೊಂದು ಧರ್ಮದ್ದೂ ಒಂದೊಂದು ನಿಯಮವಿದೆ. ಅದರಂತೆ ವಿವಾಹನಗಳ ನೋಂದಣಿ ನಿಯಮಗಳಲ್ಲಿ ಸಹ ಬಿನ್ನತೆಯಿದೆ.

ಒಂದು ಕುಟುಂಬಕ್ಕೆ ವಿವಾಹ ನೋಂದಣಿ ಪ್ರಮಾಣ ಪತ್ರ ಅತಿ ಮುಖ್ಯ. ಸರ್ಕಾರದ ಯಾವುದೇ ಸೇವೆ ಪಡೆಯಲು, ವಿದೇಶಿ ಪ್ರವಾಸ, ಸರ್ಕಾರಿ ದಾಖಲೆಗಳಲ್ಲಿ ಪತಿಯ ಹೆಸರು ಸೇರಿಸಲು ವಿವಾಹ ನೋಂದಣಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಬಹುಮುಖ್ಯವಾಗಿ ದಂಪತಿಯ ವಿವಾಹವನ್ನು ಖಾತ್ರಿ ಪಡೆಸುವುದು

ವಿವಾಹ ನೋಂದಣಿ ಪ್ರಮಾಣ ಪತ್ರ.
ಭಾರತದಲ್ಲಿ ವಿವಿಧ ಧರ್ಮೀಯ ವಿವಾಹಗಳ ನೊಂದಣಿ ಬಗ್ಗೆ ಪ್ರತ್ಯೇಕ ಕಾಯ್ದೆಗಳಿದ್ದು ಅವುಗಳ ಅನುಸಾರ ವಿವಾಹ ನೋಂದಣಿ ಪ್ರಕ್ರಿಯೆ ಮಾಡಲಾಗುತ್ತದೆ.

Hindu Marriage act : Marriage Registration
ಹಿಂದೂ ವಿವಾಹ ಕಾಯ್ದೆ 1955 ಮತ್ತು ವಿಶೇಷ ವಿವಾಹ ಕಾಯ್ದೆ- 1954:
ಪತಿ ಮತ್ತು ಪತ್ನಿ ಒಂದೇ ಧರ್ಮಕ್ಕೆ ಸೇರಿದವರಾಗಿದ್ದರೆ ಅಂತಹ ದಂಪತಿಯ ವಿವಾಹ ನೋಂದಣಿಯನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ. ಬುದ್ಧ ಧರ್ಮ, ಜೈನ ಅಥವಾ ಸಿಕ್‌ ಧರ್ಮೀಯ ದಂಪತಿಗಳ ವಿವಾಹವನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ. ದಂಪತಿಗಳು ಅನ್ಯ ಧರ್ಮೀಯರಾಗಿದ್ದರೆ ಅವರ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ.

Hindu Marriage Act 1955 :
ಹಿಂದೂ ವಿವಾಹ ಕಾಯ್ದೆ 1955 ರ ಅಡಿಯಲ್ಲಿ ವಿವಾಹ ನೋಂದಣಿ ಮಾಡಲು ಹಲವು ಷರತ್ತುಗಳನ್ನು ಪೂರೈಸಬೇಕು. ಮದುವೆಯನ್ನು ಕಾನೂನು ಮಾನ್ಯ ಮಾಡಬೇಕು. ಅಂದರೆ ಮಹಿಳೆಗೆ 18 ವರ್ಷ ಪುರುಷರಿಗೆ 21 ವರ್ಷ ವಯಸ್ಸಾಗಿರಬೇಕು. ಪತಿ ಮತ್ತು ಪತ್ನಿ ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು. ಒಂದು ವೇಳೆ ದಂಪತಿಯಲ್ಲಿ ಒಬ್ಬರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಸೇರಿದ್ದರೆ ಅಂತಹ ವಿವಾಹವನ್ನು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡುವುದಿಲ್ಲ! ಆ ವಿವಾಹವನ್ನು ಹಿಂದೂ ವಿವಾಹ ಕಾಯ್ದೆ ಮಾನ್ಯ ಮಾಡುವುದಿಲ್ಲ.

Hindu Marriage act : Marriage Registration
Case Study: ಎಂ. ವಿಜಯಕುಮಾರಿ ಮತ್ತು ಕ. ದೇವಬಾಲನ್ ಪ್ರಕರಣದಲ್ಲಿ ಹಿಂದೂ ಪುರುಷ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದ ಮಹಿಳೆಯ ವಿವಾಹವನ್ನು ಹಿಂದೂ ವಿವಾಹ ಎಂದು ನ್ಯಾಯಾಲಯ ಮಾನ್ಯ ಮಾಡಲಿಲ್ಲ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 5 ರ ಪ್ರಕಾರ ದಂಪತಿ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು.ಹಿಂದೂ ವಿವಾಹ ಮಾನ್ಯ ಮಾಡಲು ಪತ್ನಿ ಪತಿಯೊಂದಿಗೆ ವಾಸವಾಗಿರಬೇಕು.ಬುದ್ಧಿ ಹೀನತೆ ಇಲ್ಲದೇ ತಿಳುವಳಿಕೆಯವರಾಗಿ ವಿವಾಹಕ್ಕೆ ಸಮ್ಮತಿ ನೀಡಿರಬೇಕು.ಮಾನಸಿಕ ಅಸ್ವಸ್ಥರಾಗಿರಬಾರದು. ಮಕ್ಕಳನ್ನು ಪಡೆಯಲು ಅಹರ್ನರಾಗಿರಬಾರದು.ಮದುವೆ ಆಗುವ ದಿನಕ್ಕೆ ವಧುವಿಗೆ 18 ವರ್ಷ , ವರನಿಗೆ 21 ವರ್ಷ ವಯಸ್ಸು ಪೂರ್ಣಗೊಂಡಿರಬೇಕು.ಸರ್ಕಾರದಿಂದ ನಿಷೇದಿತ ಸಂಬಂಧ ಹೊಂದಿರಬಾರದು. ( ಅಣ್ಣ ತಮ್ಮ, ಅಕ್ಕ ತಮ್ಮ ಈ ತರದ ಸಂಬಂಧವುಳ್ಳವರು ಮದುವೆಯಾಗುವಂತಿಲ್ಲ. ಅಂತಹ ಮದುವೆ ರದ್ದಾಗುತ್ತದೆ)ವಿವಾಹಿತರು ಸಪಿಂಡದವರು ಆಗಿರಬಾರದು. ಹಿಂದೂ ಸಂಪ್ರದಾಯವಾಗಿ ಮದುವೆಯಾಗಿರಬೇಕು.

Marriage act : Marriage Registration

ಶಿಕ್ಷೆ: ನಿಷೇಧಿತ ಸಂಬಂಧದಲ್ಲಿ ವಿವಾಹವಾದರೆ ಅಂತಹ ವಿವಾಹ ಕಾನೂನು ದೃಷ್ಟಿಯಲ್ಲಿ ಸಮ್ಮತ ಆಗುವುದಿಲ್ಲ. ಅದು ನಿಷೇಧವಾಗುತ್ತದೆ. ಅಂತಹ ನಿಷೇಧಿತ ಸಂಬಂಧದಲ್ಲಿ ವಿವಾಹವಾದರೆ, ಒಂದು ತಿಂಗಳ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ವಿಶೇಷ ವಿವಾಹ ಕಾಯ್ದೆ 1954: ಅಂತರ ಧರ್ಮೀಯ ವಿವಾಹಗಳನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೆಕ್ಷನ್‌ 4 ರ ಪ್ರಕಾರ ಹಲವು ಷರತ್ತುಗಳನ್ನು ಪೂರೈಸಿರಬೇಕು.
ಯಾವುದೇ ಧರ್ಮದ ಸಂಪ್ರದಾಯದ ಪ್ರಕಾರ ವಿವಾಹ ಆಗಿರಬಹುದು. ಆದರೆ ವಿಶೇಷ ವಿವಾಹ ಕಾಯ್ದೆ ಸೆಕ್ಷನ್ 4 ರ ಪ್ರಕಾರ ಈ ಷರತ್ತುಗಳನ್ನು ಪೂರೈಸಿರಬೇಕು.

1.ಒಂದು ಮದುವೆ ನೋಂದಣಿ ವೇಳೆ ಪತಿಯ ಜತೆ ಪತ್ನಿ ವಾಸವಾಗಿರಬೇಕು.

2.ಮಾನಸಿಕ ಹಾಗೂ ದೈಹಿಕವಾಗಿ ದಂಪತಿಗಳು ದಾಂಪತ್ಯ ನಡೆಸಲು ಅರ್ಹವಾಗಿರಬೇಕು.

3.ವಧು 18 ವರ್ಷ, ವರ 21 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ಸರ್ಕಾರದ ನಿಷೇಧಿತ ಸಂಬಂಧದವರ ಆಗಿರಬಾರದು.

4.ಹಿಂದೂಗಳು, ಬುದ್ಧರುಉ, ಸಿಖ್, ಜೈನ ಧರ್ಮಿಯರು ಈ ನಾಲ್ಕು ಧರ್ಮೀಯರ ಒಳಗಿನ ಅಂತರ ಧರ್ಮೀಯ ಮದುವೆಗಳನ್ನು ವಿಶೇ‍ಷ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತದೆ.

Marriage act : Marriage Registration

ಮುಸ್ಲಿಂಮರ ಮದುವೆ:
ಮುಸ್ಲಿಂಮರು ಮಸ್ಲಿಂಮರನ್ನು ವಿವಾಹವಾದರೆ, ಅವರು ವಿಶೇಷ ವಿವಾಹ ಕಾಯ್ದೆ ಅಥವಾ ವಿಶೇಷ ವಿವಾಹ ಕಾಯ್ದೆ ಅಡಿ ಯಾವುದರಲ್ಲಾದರೂ ನೋಂದಣಿ ಮಾಡಿಸಬಹುದು.

ವಿವಾಹ ನೋಂದಣಿ ಮಾಡುಸುವುದೇಗೆ ?: ವಿವಾಹ ನೋಂದಣಿ ಮಾಡಲು ದಂಪತಿ ಆರು ತಿಂಗಳು ವಾಸವಾಗಿರುವ ವ್ಯಾಪ್ತಿಯ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಬಹುದು. ಕರ್ನಾಟಕದಲ್ಲಿ ಕಂದಾಯ ಇಲಾಖೆಯ ಉಪ ನೋಂದಣಾಧಿಕಾರಿಗಳೇ ವಿವಾಹ ನೋಂದಣಾಧಿಕಾರಿಗಳಾಗಿರುತ್ತಾರೆ.

ವಿವಾಹ ನೋಂದಣಿಗೆ ಬೇಕಾಗುವ ದಾಖಲೆಗಳು:
*ವಿವಾಹ ನೋಂದಣಿ ಅರ್ಜಿ ಪೂರ್ಣಗೊಳಿಸಿ ದಂಪತಿ ಸಹಿ ಮಾಡಿರಬೇಕು.
*ಇಬ್ಬರ ವಯಸ್ಸಿನ ದೃಢೀಕರಿಸುವ ಪ್ರಮಾಣ ಪತ್ರ ( ಎಸ್‌ಎಸ್‌ಎಲ್ ಸಿ ಮಾರ್ಕ್ಸ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ, ಇನ್ನಿತರೆ)
*ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ ( ರೇಷನ್‌ ಕಾರ್ಡ್‌, ಎಲೆಕ್ಟ್ರಿಕ್ ಬಿಲ್‌, ಆಧಾರ್‌ ಕಾರ್ಡ್‌, ವೋಟರ್ ಐಡಿ ಅಥವಾ ಪಾನ್‌ ಕಾರ್ಡ್‌ )
*ಎರಡು ಪಾಸ್‌ ಪೋರ್ಟ್‌ ಸೈಜ್ ಪೋಟೋ ( ದಂಪತಿ ಇಬ್ಬರು ಇಳಿದಿರುವ ಬಿ ಸೈಜ್‌ ) ಮತ್ತು ವಿವಾಹವಾದ ಬಗ್ಗೆ ದಂಪತಿಯ ಪೋಟೋಗಳು.
*ವಿವಾಹ ಆಹ್ವಾನ ಪತ್ರಿಕೆ
*ದೇವಸ್ಥಾನದಲ್ಲಿ ಮದುವೆಯಾಗಿದ್ದರೆ ಅಲ್ಲಿನ ಪೂಜಾರಿಯಿಂದ ವಿವಾಹವಾದ ಬಗ್ಗೆ ದೃಢೀಕೃತ ಪತ್ರ.
*ವಿವಾಹ ನೋಂದಣಿ ಮಾಡಲು ಸರ್ಕಾರದ ನಿಗದಿತ ಶುಲ್ಕ ಪಾವತಿ.
ವಿಚ್ಛೇಧಿತ ಮದುವೆಯಾಗುತ್ತಿದ್ದರೆ ಅ ವ್ಯಕ್ತಿಯ ಡೈವೋರ್ಸ್ ಪತ್ರ ಅಥವಾ ಮೃತ ಪತ್ನಿಯ ಮರಣ ಪ್ರಮಾಣ ಪತ್ರ ನೀಡಬೇಕು. ಇದು ಇಬ್ಬರಿಗೂ ಅನ್ವಯ.
*ಅನ್ಯ ಧರ್ಮೀಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರೆ, ಮತಾಂತರದ ಪ್ರಮಾಣ ಪತ್ರ ಸಲ್ಲಿಸಬೇಕು.
*ದಂಪತಿಯ ವಾಸ ಸ್ಥಳ, ಮದುವೆಯಾದ ದಿನಾಂಕ, ಜನ್ಮ ದಿನಾಂಕ, ವಿವಾಹ ಸ್ಥಿತಿ, ರಾಷ್ಟ್ರೀಯತೆ ಕುರಿತ ಅಫಿಡವಿಟ್ ಸಲ್ಲಿಸಬೇಕು.
*ನ್ಯಾಯಾಲಯದಲ್ಲಿ ಮದುವೆಯಾಗಿದ್ದರೆ ನೋಂದಣಿ ಹೇಗೆ ? : ವಿಶೇಷ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ವಿವಾಹ ವಾಗಿದ್ದರೆ, ಅಂತಹ ಮದುವೆಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಕಡ್ಡಾಯವಾಗಿ ಅಫಿಡವಿಟ್ ಸಲ್ಲಿಸಬೇಕು.
*ಅಧಿಸೂಚಿತ ಅರ್ಜಿ ನಮೂನೆ ತುಂಬಿರಬೇಕು.
*ವಯಸ್ಸಿನ ಆಧಾರ ದೃಢಪಡಿಸುವ ಪ್ರಮಾಣ ಪತ್ರಗಳು,
*ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ.
*ಪತಿ ಅಥವಾ ಪತ್ನಿ ಡಿವೋರ್ಸಿ ಅಗಿದ್ದರೆ ಹಿಂದಿನ ಡೈವೋರ್ಸ್‌ ಪ್ರಮಾಣ ಪತ್ರ.
*ಮೂವರು ಸಾಕ್ಷಿಗಳ ಸಹಿ.. ದಾಖಲೆಗಳು ಸರಿಯಾಗಿದ್ದರೆ ವಿವಾಹ ನೋಂದಣಾಧಿಕಾರಿ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ನೀಡುತ್ತಾರೆ.

ವಿಶೇಷ ವಿವಾಹ ನೋಂದಣಿ ಪ್ರಕ್ರಿಯೆ: ಹಿಂದೂ ವಿವಾಹ ನೋಮದಣಿ ಪ್ರಕ್ರಿಯೆದಂತೆ ಮೇಲಿನ ದಾಖಲೆಗಳನ್ನು ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ವಿವಾಹ ನೋಂದಣಿ ಬಗ್ಗೆ 30 ದಿನಗಳ ನೋಟಿಸ್‌ ನೀಡಲಾಗುತ್ತದೆ. ಯಾರಾದರೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಕ್ಷೇಪಣೆ ಮುಗಿದ ಬಳಿಕ ಯಾರೂ ಆಕ್ಷೇಪಣೆ ಸಲ್ಲಿಸದಿದ್ದರೆ ವಿವಾಹ ನೊಂದಣಿ ಬಗ್ಗೆ ದಂಪತಿಗಳಿಗೆ ಮಾಹಿತಿ ನಿಡಲಾಗುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳ ಬಳಿಕ ಯಾವುದೇ ಆಕ್ಷೇಪಣೆ ಬರದಿದ್ದರೆ ವಿವಾಹ ನೋಂದಣಿ ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img