#Marriage, #Foreigner Marriage, #Marriage between an Indian and a foreigner,
ಬೆಂಗಳೂರು, ನ. 24: ವಿದೇಶಕ್ಕೆ ಬರುವ ಮಹಿಳೆಯರನ್ನು ಭಾರತೀಯರೇ ಪಟಾಯಿಸಿ ವಿವಾಹ ಆಗುತ್ತಾರೆ. ಇನ್ನು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವರು ವಿದೇಶಿ ಯುವತಿಯರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಒಬ್ಬ ಭಾರತೀಯ ವಿದೇಶಿಯರನ್ನು ಮದುಎಯಾದರೆ ಅಂತಹ ಮದುವೆಗಳು ಕಾನೂನು ಬದ್ಧವೇ ? ಅಂತಹ ಮದುವೆಯನ್ನು ನೊಂದಣಿ ಮಾಡಿಸಲು ಅವಕಾಶವಿದೆಯೇ ? ಈ ಕುರಿತ ಕಾನೂನು ಅಂಶಗಳು ಇಲ್ಲಿವೆ.
ಒಬ್ಬ ಭಾರತೀಯ ವಿದೇಶಿಯರನ್ನು ಮದುವೆಯಾಗುವ ಬಗ್ಗೆ ಯಾವುದೇ ಕಾನೂನು ಇಲ್ಲ. ಭಾರತೀಯ ವ್ಯಕ್ತಿ ವಿದೇಶಿ ಮಹಿಳೆಯನ್ನು ಮದುವೆಯಾಗುವುದನ್ನು ಭಾರತದ ಯಾವುದೇ ಕಾನೂನು ನಿಷೇಧಿಸಿಲ್ಲ. ಆದರೆ, ಮದುವೆಯಾದವರು ದೈಹಿಕವಾಗಿ ಮಾನಸಿಕವಾಗಿ ವಿವಾಹವಾಗಲು ಅರ್ಹರಾಗಿದ್ದರೆ ಮದುವೆಯಾಗಬಹುದು. ಆದರೆ, ಭಾರತೀಯ ಮಹಿಳೆಯನ್ನು ವಿದೇಶಿ ಪ್ರಜೆ ಮದುವೆಯಾದರೆ, ಆ ದೇಶದ ಪ್ರಜೆ ನೆಲೆಸಿರುವ ವಿವಾಹ ಕಾಯ್ದೆಯ ನಿಯಮಗಳು ಅನ್ವಯ ಆಗುತ್ತವೆ!
ಪ್ರಥಮವಾಗಿ ವಿದೇಶಿ ಮಹಿಳೆ ಭಾರತೀಯ ಪ್ರಜೆಯನ್ನು ಮದುವೆಯಾಗಲು ಸಂಬಂಧಪಟ್ಟ ದೇಶದ ರಾಯಬಾರಿ ಕಚೇರಿಯಿಂದ ಎನ್‌ಓಸಿ ಪಡೆಯಬೇಕು ಹಾಗೂ ವೀಸ ಪಡೆದಿರಬೇಕು. ಉಳಿದಂತೆ ವಿಶೇಷ ವಿವಾಹ ಕಾಯಿದೆಗೆ ಅನ್ವಯಿಸುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.ವಿದೇಶಿ ಮಹಿಳೆಯನ್ನು ಒಬ್ಬ ಭಾರತೀಯ ಮದುವೆಯಾಗುವುದನ್ನು ನಿರ್ಬಂಧಿಸಿಲ್ಲ. ಆದರೆ ಮದುವೆಯನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗದು.
ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಬೇಕಾದರೆ, ವಿಶೇಷ ವಿವಾಹ ಕಾಯ್ದೆ 1954 ಅಡಿ ವಿವಾಹಿತ ನೆಲೆಸಿರುವ ವಿವಾಹ ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.ಹಿಂದೂ ವಿವಾಹ ನೋಂದಣಿ ಪ್ರಕ್ರಿಯೆದಂತೆ ವಯಸ್ಸಿನ, ವಾಸಸ್ಥಳ, ದೃಢೀಕರಣ ದಾಖಲೆಗಳೊಂದಿಗೆ ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ವಿವಾಹ ನೋಂದಣಿ ಬಗ್ಗೆ 30 ದಿನಗಳ ನೋಟಿಸ್ ನೀಡಲಾಗುತ್ತದೆ. ಯಾರಾದರೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಕ್ಷೇಪಣೆ ಮುಗಿದ ಬಳಿಕ ಯಾರೂ ಆಕ್ಷೇಪಣೆ ಸಲ್ಲಿಸದಿದ್ದರೆ ವಿವಾಹ ನೊಂದಣಿ ಬಗ್ಗೆ ದಂಪತಿಗಳಿಗೆ ಮಾಹಿತಿ ನಿಡಲಾಗುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳ ಬಳಿಕ ಯಾವುದೇ ಆಕ್ಷೇಪಣೆ ಬರದಿದ್ದರೆ ವಿವಾಹ ನೋಂದಣಿ ಮಾಡಲಾಗುತ್ತದೆ.