ಬೆಂಗಳೂರ:ಯಾವುದೇ ಶುಲ್ಕವಿಲ್ಲದೇ ಆಧಾರ್ ಕಾರ್ಡ್(Aadharcard) ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(Unique Identification Authority of India) 2024ರ ಮಾರ್ಚ್ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶ ನೀಡಿದೆ. ಈ ಸೇವೆಯು ಹಿಂದಿನಂತೆ ಮೈ ಆಧಾರ್ ಪೋರ್ಟಲ್‌ನಲ್ಲಿ(My aadhar portal) ಮಾತ್ರ ಉಚಿತವಾಗಿದೆ. ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು.ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ 2024ರ ಮಾರ್ಚ್ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶ ನೀಡಿದೆ. ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. ಮಾ.14ರ ನಂತರ ನೀವು ಶುಲ್ಕ ಪಾವತಿಸಿ ಅಪ್‌ಡೇಟ್ ಮಾಡಬೇಕಾಗುತ್ತದೆ.ಆಧಾರ್ ದಾಖಲಾತಿ ಮತ್ತು ನವೀಕರಣ ನಿಯಂತ್ರಣ, 2016 ರ ಪ್ರಕಾರ, , ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಡೇಟಾಬೇಸ್‌ನಲ್ಲಿನ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು.
ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಹೇಗೆ ಅಪ್‌ಡೇಟ್ ಮಾಡುವ ವಿಧಾನ
*ಮೊದಲು uidai.gov.in ವೆಬ್‌ಸೈಟ್‌ಗೆ ಹೋಗಿ
*’My Aadhaar’ ಟ್ಯಾಬ್‌ಗೆ ಹೋಗಿ ಮತ್ತು ‘ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ.
*ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನೆ ಕೋಡ್ ಅನ್ನು ನಮೂದಿಸಿ. ನಂತರ “Send OTP” ಕ್ಲಿಕ್ ಮಾಡಿ.
*ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು “Login” ಕ್ಲಿಕ್ ಮಾಡಿ.
*ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, “Submit” ಕ್ಲಿಕ್ ಮಾಡಿ.
*ಅಗತ್ಯವಿರುವ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು “Submit Update Request” ಕ್ಲಿಕ್ ಮಾಡಿ.
*ಸರಿಯಾದ ವಿವರಗಳನ್ನು ನಮೂದಿಸಿದ ನಂತರ ವಿನಂತಿಯನ್ನು ಸಲ್ಲಿಸಿ.
*ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು, myaadhaar.uidai.gov.in/ಗೆ ಭೇಟಿ ನೀಡಿ ಮತ್ತು “Check Enrolment & Update Status” ಕ್ಲಿಕ್ ಮಾಡಿ.