ಮಂಗಳೂರು: ಶಾಲಾ ಸಂಚಾಲಕಿ ತನ್ನ ಶಾಲೆಯ ನಿವೃತ್ತಿಯಾಗುತ್ತಿರುವ ಶಿಕ್ಷಕಿಯೊಬ್ಬರಿಂದ ಪಿಂಚಣಿ ಸಿಗುವ ದಾಖಲೆಗೆ ಸಹಿ ಹಾಕಲು 20 ಲಕ್ಷ ಹಣ ಲಂಚಕ್ಕೆ ಬೇಡಿಕೆಯಿಟ್ಟಿದ್ದು. ಈ ಬಗ್ಗೆ ಶಾಲಾ ಶಿಕ್ಷಕಿ ಲೋಕಾಯಯಕ್ತಕ್ಕೆ ದೂರು ನೀಡಿದ್ದರು.ನಿವೃತ್ತ ಶಿಕ್ಷಕಿಯ ಪಿಂಚಣಿ ಹಣಕ್ಕೆ ಅಗತ್ಯವಾಗಿರುವ ದಾಖಲೆ ನೀಡಲು ಶಾಲೆಯ ಮಾಲೀಕರು ಲಂಚದ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಅಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಂಕದಕಟ್ಟೆಯ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಯಕ್ತ ಬಲೆಗೆ ಬಿದ್ದ ಆರೋಪಿ. ಶಾಲೆಯ ಶಿಕ್ಷಕಿ ಶೋಭಾರಾಣಿ ನಿವೃತ್ತಿ ಪಿಂಚಣಿ ಹಣ ಸಿಗುವ ದಾಖಲೆಗೆ ಶಾಲಾ ಸಂಚಾಲಕರು ಸಹಿ ಮಾಡಿ ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು. ಶಾಲೆಯ ಶಿಕ್ಷಕಿ ಶೋಭಾರಾಣಿ ಪಿಂಚಣಿ ಹಣ ಪಡೆಯಲು ಅಗತ್ಯ ದಾಖಲೆ ನೀಡಲು 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.ಶಿಕ್ಷಕಿ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದು, 5 ಲಕ್ಷ ರೂ.ಹಣ ಪಡೆಯುವ ವೇಳೆ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ಪಿ ಕಲಾವತಿ, ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು,ಶಾಲಾ ಮಾಲೀಕರಾದ ಜ್ಯೋತಿ ಅವರನ್ನು ಲೋಕಾಯುಕ್ತ ವಶಕ್ಕೆ ಪಡೆಯಲಾಗಿದೆ.