22.9 C
Bengaluru
Thursday, January 23, 2025

ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ: ಹೊಸ ಕಚೇರಿ ವಿಳಾಸ ಇಲ್ಲಿದೆ ನೋಡಿ

ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:28.12.2022 ರಂದು ನಡೆದ ಸಭಾ ನಡವಳಿಯಲ್ಲಿ ಮಂಡ್ಯ ತಾಲ್ಲೂಕು, ಮಂಡ್ಯ ಗ್ರಾಮದ ಸ.ನಂ.167,168 ಮತ್ತು ಸ.ನಂ.210 ರಲ್ಲಿನ 3.30 ಎಕರೆ ಜಮೀನಿನ ಪೈಕಿ 2.30 ಎಕರೆ ಜಮೀನನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸುವ ಸಂಬಂದ ಉಪನೋಂದಣಾಧಿಕಾರಿಗಳ ಕಚೇರಿ ಮತ್ತು ಕೃಷಿ ಇಲಾಖೆಗೆ ಸಂಬಂದಿಸಿದ ಜಮೀನು ಪ್ರಸ್ತುತ ಚಾಲ್ತಿ ಸಾಲಿನ ಅರ್.ಟಿ.ಸಿ. ಯಂತೆ “ಡಿಸ್ಟ್ರಿಕ್ಟ್ ಆಫೀಸ್ ಗೆ ಅಕ್ವೈರ್” ಎಂಬುದಾಗಿ ನಮೂದಾಗಿರುವುದರಿಂದ ಸದರಿ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.

ಆದುದರಿಂದ ಜಿಲ್ಲಾಧಿಕಾರಿಗಳು, ಮಂಡ್ಯ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:28.12.2022 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ, ಉಪನೋಂದಣಾಧಿಕಾರಿಗಳ ಕಛೇರಿ, ಮಂಡ್ಯವನ್ನು ತಾತ್ಕಾಲಿಕವಾಗಿ ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ ,ಮಂಡ್ಯ ಇವರ ವಸತಿ ಗೃಹಕ್ಕೆ ಸ್ಥಳಾಂತರಿಸುವಂತೆ ದಿನಾಂಕ:24.01.2023 ರಂದು ಜಿಲ್ಲಾಧಿಕಾರಿಗಳು, ಮಂಡ್ಯ ಇವರು ಸೂಚಿಸಿದ್ದಾರೆ.

Related News

spot_img

Revenue Alerts

spot_img

News

spot_img