23.9 C
Bengaluru
Sunday, December 22, 2024

ಈ ದೀಪಾವಳಿಗೆ ನಿಮ್ಮ ಮನೆ ಅಂದವಾಗಿ ಕಾಣಬೇಕಾ? ಇಲ್ಲಿವೆ ಟಿಪ್ಸ್..

ನಿಮ್ಮನ್ನು ಸಂತಸದ ಹೊನಲಿನಲ್ಲಿ ತೇಲಿಸಲು ಇನ್ನೇನು ದೀಪಾವಳಿ ಹಬ್ಬ ಬಂದೇಬಿಟ್ಟಿತು. ಜನರು ಪ್ರತಿ ವರ್ಷ ನಿರೀಕ್ಷಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಈ ಹಬ್ಬಕ್ಕೆ ಜನರು ತಮ್ಮ ಮನೆಗಳನ್ನು ಕಣ್ಣು ಕೋರೈಸುವಂತೆ ಅಲಂಕಾರ ಮಾಡಲು ಉತ್ಸುಕರಾಗಿರುತ್ತಾರೆ. ಸದ್ಯ ಟ್ರೆಂಡ್‌ನಲ್ಲಿ ಇರುವ ಯಾವ ಆಲಂಕಾರಿಕ ಸಾಮಗ್ರಿಗಳು ನಿಮ್ಮ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲಿವೆ ಎಂದು ನಾವು ನಿಮಗೆ ತಿಳಿಸುತ್ತೇವೆ.

ಜೇಬಿಗೆ ಹೊರೆಯಾಗದ, ಅತ್ಯುತ್ತಮ ಗುಣಮಟ್ಟದ ಬಜೆಟ್ ಸ್ನೇಹಿ ಆಲಂಕಾರಿಕ ಸಾಮಗ್ರಿಗಳಾದ ಮೊಂಬತ್ತಿ ಹೋಲ್ಡರ್, ಹಣತೆ, ವಿದ್ಯುದ್ದೀಪ, ವಿಗ್ರಹಗಳ ಆಯ್ಕೆಯನ್ನು ನಾವು ತಂದಿದ್ದೇವೆ. ನಿಮ್ಮ ಮನೆಯ ವಾತಾವರಣವನ್ನು ಸಂಪೂರ್ಣ ಆಕರ್ಷಣೀಯ ಮತ್ತು ಉಲ್ಲಾಸಕರವಾಗಿ ರೂಪಿಸಲು ಸರಳ ಅಲಂಕಾರ ಕಲ್ಪನೆಗಳು ಇಲ್ಲಿವೆ. ಇಲ್ಲಿ ತಿಳಿಸಲಾಗಿರುವ ಬಹುತೇಕ ವಸ್ತುಗಳು ಸ್ಥಳೀಯ ಮಳಿಗೆಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸುಲಭ ಲಭ್ಯವಾಗುವಂಥವು.

ಕ್ರಾಫ್ಟ್ವಟಿಕಾ: ಗೋಡೆಗೆ ನೇತುಹಾಕುವ ಮೊಂಬತ್ತಿ ಹೋಲ್ಡರ್
ಹೊರಾಂಗಣ ಅಲಂಕಾರಕ್ಕೆ ಸೊಗಸಾದ ಟೀಲೈಟ್‌ ಹೋಲ್ಡರ್ ಅತ್ಯುತ್ತಮವಾಗಿದೆ. ಮನೆಯ ಯಾವುದೇ ಮೂಲೆಗೆ ಅತ್ಯಾಧುನಿಕ ನೋಟ ನೀಡುವುದರಲ್ಲಿ ಅನುಮಾನವೇ ಇಲ್ಲ.

ಟೈಡ್ ರಿಬ್ಬನ್ಸ್: ಜೋಡಿ ವಾಲ್‌ ಹ್ಯಾಂಗಿಂಗ್‌ ಟೀಲೈಟ್‌ ಹೋಲ್ಡರ್
ಈ ಆಲಂಕಾರಿಕ ಗೋಡೆಯ ಸ್ಕಾನ್ಸ್ಗಳು ಉದ್ಯಾನ, ಲಿವಿಂಗ್ ರೂಮ್, ಊಟದ ಪ್ರದೇಶ, ಕೆಫೆ ಮತ್ತು ರೆಸ್ಟೋರೆಂಟ್ ಹೀಗೆ ಲೈಟಿಂಗ್ ಅಲಂಕಾರ ಅಗತ್ಯ ಇರುವ ಯಾವುದೇ ಜಾಗಕ್ಕೆ ಸೂಕ್ತ ನೋಟವನ್ನು ನೀಡುತ್ತದೆ.

ಇದೇ ಕಂಪನಿಯ, ಹ್ಯಾಂಡ್‌ಮೇಡ್ ಮೊಸಾಯಿಕ್‌ ಗ್ಲಾಸ್‌ ವೋಟಿವ್‌ ಟೀಲೈಟ್ ಮೊಂಬತ್ತಿ ಹೋಲ್ಡರ್ ಎರಡರ ಸೆಟ್ ತನ್ನ ವಿನ್ಯಾಸ ಮತ್ತು ಬಣ್ಣದ ಕಾರಣಕ್ಕೆ ನಿಮ್ಮ ನೋಟವನ್ನು ತನ್ನತ್ತ ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಜೆಎಚ್‌ ಗ್ಯಾಲರಿ: ಹ್ಯಾಂಡ್‌ಮೇಡ್‌ ಕೃತಕ ಚೆಂಡುಹೂವು
ಹಸ್ತ ನಿರ್ಮಿತ ಕೃತಕ ಚೆಂಡುಹೂವಿನ ಈ ಅಲಂಕಾರ ಸಾಮಗ್ರಿಯು ಕೋಣೆ, ಡ್ರಾಯಿಂಗ್ ರೂಮ್, ಲಿವಿಂಗ್ ರೂಮ್, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ವಾಣಿಜ್ಯ ಕಟ್ಟಡಗಳು, ಶಾಪಿಂಗ್ ಕೇಂದ್ರಗಳು ಇತ್ಯಾದಿಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಅಲಂಕಾರಕ್ಕೆ ಸೂಕ್ತವಾಗಿದೆ.

ಸೌಮಿಕ್ ಕ್ರಾಫ್ಟ್: ಗೌತಮ ಬುದ್ಧನ ಐದು ಚಿತ್ರಗಳ ಸೆಟ್
ಗೋಡೆಗೆ ಅಳವಡಿಸುವ ಗೌತಮ ಬುದ್ಧನ ಚಿತ್ರವವಿರುವ 3ಡಿ ವಾಲ್ ಪೇಂಟಿಂಗ್ಗಳ ಐದರ ಈ ಸೆಟ್ ನಿಮ್ಮ ಗೋಡೆಯ ಅಲಂಕಾರಕ್ಕೆ ಅತ್ಯುತ್ತಮವಾದ ಆಯ್ಕೆ. ಗೋಡೆಗೆ ಈ ಪೇಂಟಿಂಗ್ ಅನ್ನು ಅಳವಡಿಸುವುದರಿಂದ ಈ ದೀಪಾವಳಿಯ ವಾತಾವರಣವನ್ನು ಸಂಪೂರ್ಣವಾಗಿ ಧನಾತ್ಮಕ ವೈಬ್‌ಗಳಿಗೆ ಬದಲಾಯಿಸುತ್ತದೆ.

ವಿದ್ಯುದ್ದೀಪ ಸರಗಳು:
ದೇಸಿದಿಯಾ 12 ನಕ್ಷತ್ರಗಳ ಕರ್ಟನ್‌ ಸ್ಟ್ರಿಂಗ್‌ ಲೈಟ್: ಬಟನ್‌ ನಿಯಂತ್ರಿತ ಎಂಟು ಭಿನ್ನ ಮಾದರಿಯ ಈ ವಿದ್ಯುದ್ದೀಪಗಳ ಸರದ 138 ಎಲ್‌ಇಡಿ ಬಲ್ಬ್ಗಳು ಶಯನಗೃಹವನ್ನು ಜಗಮಗಿಸುವಂತೆ ಮಾಡುತ್ತದೆ.

ಸಿಟ್ರಾರವರ 300 ಎಲ್‌ಇಡಿ ಬಲ್ಬ್ಗಳ ಬಲೆ ಮಾದರಿಯ ಫೇರಿ ಸ್ಟ್ರಿಂಗ್‌ ಲೈಟ್‌ ಕೂಡ ಹೊರಾಂಗಣ, ಮಲಗುವ ಕೋಣೆ, ದೇವರ ಕೋಣೆಯಲ್ಲಿ ಸ್ಟೈಲಿಷ್‌ ಲುಕ್‌ ನೀಡುತ್ತದೆ.

ದೇವರ ಕೋಣೆಯ ಅಲಂಕಾರ:
ವೆಬೆಲ್‌ಕಾರ್ಟ್ ಹಣತೆಯ ಆಕಾರದ ಹೂವಿನ ಪಕಳೆಗಳನ್ನು ಹಾಕಬಹುದಾದ ದೀಪಾಲಂಕಾರವು ಖಂಡಿತವಾಗಿಯೂ ಹಬ್ಬಕ್ಕೆ ಭಕ್ತಿಯ ಭಾವವನ್ನು ಉದ್ದೀಪಿಸುತ್ತದೆ.

Related News

spot_img

Revenue Alerts

spot_img

News

spot_img