ಬೆಂಗಳೂರು;ಕೇಂದ್ರದ ಮೋದಿ ಸರ್ಕಾರ ಜನರಿಗಾಗಿ ವಿವಿಧ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ದೇಶದ ಜನರು ತಮ್ಮ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ ಹೂಡಿಕೆಯನ್ನು ಪ್ರಾರಂಭಿಸಿದ್ದಾರೆ.2014 ರಲ್ಲಿ, ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಇದರ ಅಡಿಯಲ್ಲಿ, ನಗರಗಳಲ್ಲಿ ವಾಸಿಸುವ ಜನರು ಮತ್ತು ದೂರದ ಹಳ್ಳಿಗಳು ಸಹ ಬ್ಯಾಂಕ್ ಖಾತೆಗಳನ್ನು ತೆರೆದರು. ಜನ್ ಧನ್ ಖಾತೆ ಬ್ಯಾಲೆನ್ಸ್ (Jan Dhan Account Balance) ಅನ್ನು ನೀವು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಇದರಲ್ಲಿ, ಮೊದಲ ದಾರಿ ಮಿಸ್ಡ್ ಕಾಲ್ ಮೂಲಕ ಮತ್ತು ಎರಡನೇ ದಾರಿ ಪಿಎಫ್ಎಂಎಸ್ ಪೋರ್ಟಲ್ ಮೂಲಕ. ನೀವು ಸಹ ಜನ್ ಧನ್ ಖಾತೆಯನ್ನು ಹೊಂದಿದ್ದರೆ, ನೀವು ಮನೆಯಲ್ಲಿ ಕುಳಿತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು,ಈ ಯೋಜನೆಯಲ್ಲಿ ಸಾಲದ ಸೌಲಭ್ಯವನ್ನು ಪಡೆಯಲು ನಿಮ್ಮ ಖಾತೆಯು 6 ತಿಂಗಳು ಹಳೆಯದಾಗಿರಬೇಕು. 6 ತಿಂಗಳ ಹಳೆಯ ಖಾತೆಗಳಿಗೆ ಮಾತ್ರ 10 ಸಾವಿರ ಸಾಲ ನೀಡಲಾಗುತ್ತದೆ. 6 ತಿಂಗಳ ಹಳೆಯ ಖಾತೆ ಆಗಿಲ್ಲದಿದ್ದರೆ ಕೇವಲ 2000 ಸಾಲ ದೊರೆಯುತ್ತದೆ. ಶೂನ್ಯ ಬ್ಯಾಲೆನ್ಸ್ ನ ಮೂಲಕ ನೀವು ಖಾತೆಯನ್ನು ನಿರ್ವಹಿಸಬಹುದು. ಈ ಯೋಜನೆಯಡಿಯಲ್ಲಿ ರೂಪೇ ಎಟಿಎಂ ಕಾರ್ಡ್ ನ ಸೌಲಭ್ಯ ದೊರೆಯುತ್ತದೆ. 2 ಲಕ್ಷ ರೂ. ಗಳ ಅಪಘಾತ ವಿಮೆಯ ಜೊತೆಗೆ 30 ಸಾವಿರ ಜೀವಾ ರಕ್ಷಣೆ ಕೂಡ ಲಭ್ಯವಿದೆ.ಇದಕ್ಕಾಗಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 18004253800 ಅಥವಾ 1800112211 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು,ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯಲು pmfs.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದು.ವೆಬ್ ಸೈಟ್ ಗೆ ಭೇಟಿ ನೀಡಿದ ಮೇಲೆ “ನಿಮ್ಮ ಪಾವತಿಯನ್ನು ತಿಳಿಯಿರಿ” ಆಯ್ಕೆಯನ್ನು ಕ್ಲಿಕ್ ಮಾಡಿ.ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿದ ನಂತರ ನಿಮ್ಮ ಖಾತೆ ಸಂಖ್ಯೆಯನ್ನು ಭಾರ್ತಿಮಾಡಿ ನಿಮ್ಮನು ದೃಡೀಕರಿಸಿಕೊಳ್ಳಿ.