22.1 C
Bengaluru
Friday, July 5, 2024

Makar Sankranti 2024: ಈ ವರ್ಷ ಮಕರ ಸಂಕ್ರಾಂತಿ ಆಚರಣೆ ಯಾವಾಗ, ಜನವರಿ 14 ಅಥವಾ 15?

ಬೆಂಗಳೂರು;ಮಕರ ಸಂಕ್ರಾಂತಿ(Makara sankranti) ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ ಸೂರ್ಯ ಧನುರ್ಮಾಸ ಮುಗಿಸಿ ಮಕರ ರಾಶಿ ಪ್ರವೇಶಿಸುವುದೇ ಮಕರ ಸಂಕ್ರಮಣವಾಗಿದೆ. ಪ್ರತೀ ವರ್ಷ ಜನವರಿ 14 ಅಥವಾ 15ರಂದು ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ.ಮಕರ ಸಂಕ್ರಾಂತಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.ಮಕರ ಸಂಕ್ರಾಂತಿಯನ್ನು ದೇಶಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ಚಾಂದ್ರ ಮತ್ತು ಸೌರಮಾಸ ಎಂಬ ಎರಡು ಪ್ರಕಾರಗಳಿವೆ. ಸಂಕ್ರಾಂತಿ ಸೌರಮಾಸವನ್ನು ಆಧರಿಸಿದೆ. ಪ್ರತೀ ತಿಂಗಳು ಸಂಕ್ರಾಂತಿ ಆಗುತ್ತದೆ. ಸೂರ್ಯ ಪ್ರವೇಶಿಸುವ ರಾಶಿಯನ್ನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯಲಾಗುತ್ತದೆ. ಪೊಂಗಲ್‌, ಎಳ್ಳುಂಡೆ ಸೇರಿದಂತೆ ಕೆಲವು ವಿಶೇಷ ಖಾದ್ಯಗಳನ್ನು ತಯಾರಿಸಿ ತಿನ್ನುವುದು ಈ ಹಬ್ಬದ ವಾಡಿಕೆ. ಉತ್ತರದ ರಾಜ್ಯಗಳಲ್ಲಿ ಗಾಳಿಪಟ ಹಾರಿಸುವ ಮೂಲಕ ಹಬ್ಬ ಆಚರಿಸುತ್ತಾರೆ.ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು ಕಿಚ್ಚು ಹಾಯಿಸುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.

ಮಕರ ಸಂಕ್ರಾಂತಿ ಯಾವಾಗ ? 

ಪ್ರತಿ ವರ್ಷ ಜನವರಿ 14ರಂದು ಸಾಮಾನ್ಯವಾಗಿ ಮಕರ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ ಆದರೂ ಅಧಿಕ ವರ್ಷಗಳು ಬಂದಾಗ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಅಧಿಕ ವರ್ಷ ಈ ವರ್ಷ ಆಗಿರುವ ಕಾರಣ ಮಕರ ಸಂಕ್ರಾಂತಿ ಆಚರಣೆ ಜನವರಿ 15ರಂದು ಇದೆ. ಬೆಳಿಗ್ಗೆ 7:15ಕ್ಕೆ ಪುಣ್ಯಕಾಲ ದೃಕು ಪಂಚಾಂಗದ ಪ್ರಕಾರ ಆರಂಭವಾಗಲಿದ್ದು ಅದರಂತೆ ಸಂಜೆ 17 46ಕ್ಕೆ ಪುಣ್ಯಕಾಲ ಮುಕ್ತಾಯಗೊಳ್ಳುತ್ತದೆ.

ಮಕರ ಸಂಕ್ರಾಂತಿ ಹಬ್ಬದ ಮಹತ್ವ :

ಮಕರ ಸಂಕ್ರಾಂತಿಯ ಮರುದಿನ ಶಂಕರ ಸುರ ಎಂಬ ರಾಕ್ಷಸನನ್ನು ದೇವತೆಗಳು ಕೊಲ್ಲುತ್ತಾರೆ ಎಂದು ಹಿಂದೂ ಪುರಾಣಗಳ ಪ್ರಕಾರ ಹೇಳಲಾಗುತ್ತದೆ ಇದರಿಂದ ಲೋಕಕಲ್ಯಾಣವಾಗುತ್ತದೆ. ಮಕರ ಸಂಕ್ರಾಂತಿ ಎಂದು ಸತ್ತರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಕೂಡ ಇನ್ನೊಂದು ನಂಬಿಕೆಯ ಪ್ರಕಾರ ನೋಡಬಹುದು ಆಗಿದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಮಕರ ಸಂಕ್ರಾಂತಿ ಎಂದು ಪ್ರವೇಶ ಪಡೆಯುತ್ತಾನೆ ಇದು ಸೂರ್ಯನ ಉತ್ತರ ದಿಕ್ಕಿಗೆ ಪ್ರಯಾಣ ಮಾಡುವುದರ ಜೊತೆಗೆ ಚಳಿಗಾಲದ ಅಂತ್ಯವನ್ನು ಸಹ ಸೂಚಿಸುತ್ತದೆ.ಹೀಗೆ ಮಕರ ಸಂಕ್ರಾಂತಿ ಎಂದು ಸಾಕಷ್ಟು ವಿಶೇಷತೆಗಳನ್ನು ನೋಡಬಹುದಾಗಿದ್ದು ಈ ಬಾರಿ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15ರಂದು ಮಾಡಲಾಗುತ್ತದೆ .

Related News

spot_img

Revenue Alerts

spot_img

News

spot_img