28.9 C
Bengaluru
Friday, July 5, 2024

ಮಕರ ಸಂಕ್ರಾಂತಿ ಹಬ್ಬಕ್ಕೆ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸಂದೇಶಗಳು,

Makar Sankranti

Makar Sankranti : ಮಕರ ಸಂಕ್ರಾಂತಿ ಎಂದರೆ ಸೌರಮಾನದ ಪರ್ವ,ಎಳ್ಳು – ಬೆಲ್ಲ, ಶೀತ – ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಎಳ್ಳು – ಬೆಲ್ಲ ತಿಂದು ಒಳ್ಳೆ ಮಾತಾಡುಷಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.ಕರ್ನಾಟಕದಲ್ಲಿ ಎಳ್ಳು, ಸಕ್ಕರೆ – ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ.

ಸಂಕ್ರಾಂತಿ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ, ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತವಾಗಿರುತ್ತದೆ.ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಕೂಡ ಒಂದಾಗಿದೆ.ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ.

2023ರ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದಂದು ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ಸಂದೇಶಗಳು.

*ಸುಗ್ಗಿಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು

*ಎಳ್ಳು ಬೆಲ್ಲ ತೆಗೆದುಕೊಂಡು ಎಳ್ಳು ಬೆಲ್ಲದಂಗಿರಿ.ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು.

*ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ.

*ಮಕರ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ. ಈ ಶುಭ ಸಂದರ್ಭದಲ್ಲಿ ಗಾಳಿಪಟಗಳ ಎತ್ತರೆತ್ತರಕ್ಕೆ ಹಾರಿದಂತೆ ನಿಮ್ಮ ಆಸೆ, ಕನಸುಗಳು ನನಸಾಗಲಿ

* ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.

*ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ.

* ಇದು ವರ್ಷದ ಮೊದಲ ಹಬ್ಬ ಆನಂದಿಸುವ ಸಮಯ. ನಿಮಗೆಲ್ಲರಿಗೂ ಸಮೃದ್ಧ ಮತ್ತು ಸಂತೋಷಕರ ಮಕರ ಸಂಕ್ರಾಂತಿಯ ಶುಭಾಶಯಗಳು

*ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ.

* ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ ನೀವು ಕೂಡಾ ಯಶಸ್ಸು, ಖುಷಿಯೊಂದಿಗೆ ಬದುಕಿನಲ್ಲಿ ಉನ್ನತಮಟ್ಟಕ್ಕೇರಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾನು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ.

* ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ, ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

*ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ ಎಳ್ಳುಬೆಲ್ಲದಂತೆ ಇರಿ.ಮಕರ ಸಂಕ್ರಮಣದ ಹಾರ್ದಿಕ ಶುಭಾಷಯಗಳು.

*ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…

*ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…

Related News

spot_img

Revenue Alerts

spot_img

News

spot_img