23 C
Bengaluru
Thursday, December 19, 2024

ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ: 76 ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಅಧಿಕಾರಿಗಳ ವರ್ಗಾವಣೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು 76 ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಕಂದಾಯ ಇಲಾಖೆಯ ತಹಶೀಲ್ದಾರ್ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತ ಹಾಗೂ ಮುಂದಿನ ಆದೇಶದವರೆಗೆ ತಹಶೀಲ್ದಾರ್ ಗಳನ್ನು ನಿಯೋಜಿಸಿದಂತ ಸ್ಥಳಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದಾರೆ.

ಅಂದಹಾಗೆ ಕುಷ್ಟಗಿ ತಾಲೂಕು ತಹಶೀಲ್ದಾರ್ ಗುರುರಾಜ ಎಂ ಚಲವಾದಿಯನ್ನು ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಲಿಂಗಸಗೂರು ತಹಶೀಲ್ದಾರ್ ಬಲರಾಮ ಕಟ್ಟೀಮನಿಯನ್ನು ಬಳ್ಳಾರಿ ತಾಲೂಕು ತಹಶೀಲ್ದಾರ್, ಚನ್ನಮಲ್ಲಪ್ಪ ಗುಡಿಗಂಟಿ ಅವರನ್ನು ಬಳ್ಳಾರಿಯ ಚುನಾವಣಾ ತಹಶೀಲ್ದಾರ್ ಆಗಿ ನಿಯೋಜಿಸಲಾಗಿದೆ.

ಮೊಹಮ್ಮದ್ ಮೊಹಸಿನ್ ಅಹ್ಮದ್ ಅವರನ್ನು ಗುರುಮಿಠಕಲ್ ತಾಲೂಕು ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ. ಶಿವರಾಜ್ ಅವರನ್ನು ಸೇಡಂ ತಾಲೂಕು ತಹಶೀಲ್ದಾರ್ ಗ್ರೇಡ್-1, ರಾಜೇಶ್ ಆರ್ ಬುರ್ಲಿ ಚಿತ್ತಾಪುರ ತಾಲೂಕು ತಹಶೀಲ್ದಾರ್ ಆಗಿ ನೇಮಿಸಿದೆ.
ಹೀಗಿದೆ 76 ತಹಶೀಲ್ದಾರ್ ಗಳ ವರ್ಗಾವಣೆ ಪಟ್ಟಿ

Related News

spot_img

Revenue Alerts

spot_img

News

spot_img