ಬೆಂಗಳೂರು, ಆ. 24 : ಮನೆ ಎಂದ ಮೇಲೆ ವಾಸ್ತು ಸರಿಯಾಗಿ ಇರಬೇಕು. ಆಗ ಮಾತ್ರವೇ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ. ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಲಿಲ್ಲ ಎಂದರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮನೆಯ ಏಳಿಗೆಗೆ ಅದಾಗಲೇ ನಿರ್ಮಾಣವಾಗಿರುವ ಮನೆಯ ಏಳಿಗೆಗೆ ವಾಸ್ತು ಶಾಸ್ತ್ರದಲ್ಲಿ ಒಂದಷ್ಟು ಪರಿಹಾರಗಳು ಇರುತ್ತವೆ. ಅದನ್ನು ಅನುಸರಿಸುವುದರಿಂದ ಮನೆಯಲ್ಲಿನ ಅಲ್ಪ-ಸ್ವಲ್ಪ ಸಮಸ್ಯೆಗಳು ಬಗೆ ಹರಿಯುತ್ತವೆ.
ಅದನ್ನು ಹೊರತು ಪಡಿಸಿದರೆ, ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿಲ್ಲ ಎಂದರೆ, ತೊಂದರೆಗಳು ಹೆಚ್ಚಾಗುತ್ತವೆಯೇ ಹೊರತು, ಕಡಿಮೆಯಂತೂ ಆಗುವುದಿಲ್ಲ. ಮನೆಯ ವಾಸ್ತು ಶಾಸ್ತ್ರ ಪ್ರಾರಂಭವಾಗುವುದೇ ಮುಖ್ಯದ್ವಾರದಿಂದ. ಹಾಗಾಗಿ ಮುಖ್ಯ ದ್ವಾರದ ದಿಕ್ಕು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲದೇ, ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರಬೇಕು ಎಂದರೆ, ಮನೆಯ ಮುಖ್ಯದ್ವಾರದಲ್ಲಿ ದಿನಾ ಬೆಳಗ್ಗೆದ್ದು ಈ ಒಂದು ಕೆಲಸವನ್ನು ಮಾಡಲೇಬೇಕು.
ಪ್ರತಿ ದಿನ ಬೆಳಗ್ಗೆ ಎದ್ದು ಹೆಣ್ಣು ಮಕ್ಕಳು ಮನೆಯ ಮುಂದೆ ಬಾಗಿಲಿಗೆ ನೀರು ಯಾಕೆ ಹಾಕುತ್ತಾರೆ ಎಂದು ಗೊತ್ತೆ. ಮನೆಯ ಮುಂದಿರುವ ಧೂಳು ಮನೆಯೊಳಗೆ ಬರದಿರಲಿ ಎಂದು ನೀರು ಹಾಕಿ ಸಾರಿಸುತ್ತಾರೆ. ಇದು ಮನೆಯಲ್ಲಿರುವವರ ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮನೆಯ ಮುಂದೆ ಅರಿಶಿಣದ ನೀರನ್ನು ಹಾಕುವುದರಿಂದ ಮನೆಗೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಗಂಜಲದ ನೀರು ಹಾಕುವುದರಿಂದ ಹುಳಗಳು, ಕ್ರಿಮಿ ಕೀಟಗಳು ಇದ್ದರೆ ನಾಶವಾಗುತ್ತವೆ. ಉಪ್ಪಿನ ನೀರನ್ನು ಚುಮುಕಿಸಿ, ಗುಡಿಸುವುದರಿಂದ ಇರುವೆಗಳು ಸಾಯುತ್ತವೆ.
ಹಾಗಾಘಿ ಮನೆಯ ಮುಂದೆ ತಪ್ಪದೇ ನೀರನ್ನು ಹಾಕಬೇಕು ಇದರಿಂದ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಹಾಗಾಗಿಯೇ ಹಿಂದಿನ ಕಾಲದಿಂದಲೂ ಮನೆಯ ಮುಂದೆ ಗುಡಿಸಿ, ನೀರು ಹಾಕಿ ಸಾರಿಸಲಾಗುತ್ತಿತ್ತು. ಬಳಿಕ ರಂಗೋಲಿ ಬಿಡಿಸಿ. ಅಎಇಶಿನ ಕುಂಕುಮ ಇಟ್ಟು ಹೂವಿಟ್ಟು ಪೂಜೆ ಮಾಡಲಾಗುತ್ತಿತ್ತು. ಆಗ ಲಕ್ಷ್ಮೀ ದೇವಿಗೆ ನಮ್ಮ ಮನೆ ಸುಂದರವಾಗಿಯೂ ಸ್ವಚ್ಛವಾಗಿಯೂ ಕಾಣುತ್ತದೆ. ಇದರಿಂದ ಲಕ್ಷ್ಮೀ ಮನೆಯೊಳಗೆ ಬಂದು ನೆಲೆಸಲು ಇಷ್ಟ ಪಡುತ್ತಾಳೆ.