ಹೊಸದಿಲ್ಲಿ: ಬಹುನಿರೀಕ್ಷಿತ ಕೇಂದ್ರ ಬಜೆಟ್ 2023 ಮಂಡನೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗಾಗಿ ಹೊಸ ಯೋಜನೆ ಘೋಷಿಸಿದ್ದಾರೆ. ಬಜೆಟ್ 2023ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಮಣಿಯರಿಗೆ ವಿಶೇಷ ಉಳಿತಾಯ ಯೋಜನೆ ಘೋಷಣೆ ಮಾಡಿದ್ದಾರೆ.ಬಜೆಟ್ ಮಂಡಿಸುವಾಗ ಹಣಕಾಸು ಸಚಿವರು ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದಾರೆ. . ಈ ಘೋಷಣೆಯಿಂದ ಸರ್ಕಾರದ ಪ್ರತಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಹಿಳಾ ಸಮ್ಮಾನ್ ಬಚತ್ ಪ್ರಮಾಣ ಪತ್ರ ಯೋಜನೆಯ ಮೂಲಕ ದೇಶದ ಮಹಿಳೆಯರು ಈಗ ಸಾಕಷ್ಟು ಉಳಿತಾಯ ಮಾಡಬಹುದು.
ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಗರಿಷ್ಠ ₹ 2 ಲಕ್ಷ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸಬಹುದು. ಭಾಗಶಃ ಹಿಂಪಡೆಯುವ ಸೌಲಭ್ಯವೂ ಯೋಜನೆಯಲ್ಲಿದೆ.ಮಹಿಳೆಯರಿಗೆ ಹಣ ಉಳಿತಾಯಕ್ಕೆ ಹೊಸ ಯೋಜನೆ ಇದಾಗಿದ್ದು, “ಮಹಿಳಾ ಸಮ್ಮಾನ್ ಸೇವಿಂಗ್ಸ್ ಪಾತ್ರ” ವನ್ನು ಸಚಿವೆ ಘೋಷಿಸಿದ್ದಾರೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗಾಗಿ ಈ ಯೋಜನೆ ಘೋಷಿಸಲಾಗಿದೆ.ಈ ಮಹಿಳಾ ಸಮ್ಮಾನ್ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಶೇಕಡಾ 7 ರಷ್ಟು ಬಡ್ಡಿ ದರದಲ್ಲಿ 2 ಲಕ್ಷದವರೆಗೆ ಮಹಿಳಾ ಸಮ್ಮಾನ್ ಪ್ರಮಾಣ ಪತ್ರದ ಅಡಿಯಲ್ಲಿ ಠೇವಣಿ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ.
2 ಲಕ್ಷಗಳ ಉಳಿತಾಯದ ಮೇಲೆ ಶೇಕಡಾ 7.5 ರಷ್ಟು ಬಡ್ಡಿಯ ಲಾಭ
ಈ ಮಹಿಳಾ ಸಮ್ಮಾನ್ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು,.ಮಹಿಳೆಯರಿಗಾಗಿ ಇರುವ ಈ ವಿಶೇಷ ಯೋಜನೆಯಡಿ ಇದೀಗ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ವಾರ್ಷಿಕ ಶೇ.7.5 ಬಡ್ಡಿಯನ್ನು ನೀಡಲಾಗುವುದು ಮತ್ತು ಎರಡು ವರ್ಷಗಳ ಅವಧಿಗೆ ಅಂದರೆ ಮಾರ್ಚ್ 2025ರ ವರೆಗೆ ಈ ಯೋಜನೆಯ ಅಡಿಯಲ್ಲಿ ಠೇವಣಿ ಮಾಡಬಹುದು. ಇದರಲ್ಲಿ 7.5% ಸ್ಥಿರ ಬಡ್ಡಿದರದೊಂದಿಗೆ ಎರಡು ವರ್ಷದವರೆಗೆ ಠೇವಣಿ ಇಡಬಹುದು ಅಥವಾ ವಾಪಸ್ ಪಡೆಯಬಹುದು. ಇದು ಮಹಿಳೆಯರಿಗೆ ಸಣ್ಣ ಉಳಿತಾಯವಾಗಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
ಅಂತೆಯೇ ‘ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ 2.25 ಲಕ್ಷ ಕೋಟಿ ರೂ ಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು 3 ಕೋಟಿ ಮಹಿಳಾ ರೈತರಿಗೆ 54 ಸಾವಿರ ಕೋಟಿ ರೂ ಒದಗಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಟ್ಟವನ್ನು 15 ಲಕ್ಷದಿಂದ 30 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಖಾತೆಗಳ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆಗಳಿಗೆ 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.