ಬೆಂಗಳೂರು, ಆ. 09 : ಈಗ ಮನೆಗಳ ಬೆಲೆ ಬಗ್ಗೆ ಯಾರೂ ಮಾತನಾಡುವಂತಿಲ್ಲ. ವಿವಿಧ ವರ್ಗಗಳಿಗೆ ಸೇರಿದ ಮನೆಗಳಲ್ಲಿ ಐಷಾರಾಮಿಯ ವಸತಿಗಳ ಬೆಲೆ ಕೈಗೆಟುಕದಂತಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮನೆಗಳ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ಆಸ್ತಿ ಸಲಹಾ ಸಂಸ್ಥೆ ಅನರಾಕ್ ಕಂಪನಿ ಅಧ್ಯಯನ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಪ್ರಮುಖವಾದ 7 ನಗರಗಳ ಪೈಕಿ ಮೂರು ವರ್ಗಗಳಿಗೆ ಸೇರಿದ ಮನೆಗಳ ಬೆಲೆಗಳು ಏರಿಕೆ ಆಗಿದೆ.
2018ರಿಂದ 2023ರ ನಡುವಿನ ಅವಧಿಯಲ್ಲಿ ಪ್ರತಿ ಚದರ ಅಡಿಗೆ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದರ ಪರಿಶೀಲನೆಯನ್ನು ಈ ಸಂಸ್ಥೆ ನಡೆಸಿದೆ. ಐಷಾರಾಮಿ ವರ್ಗಕ್ಕೆ ಸೇರಿದ, 71.5 ಕೋಟಿಗಿಂತ ಹೆಚ್ಚಿನ ಬೆಲೆಯ ಮನೆಗಳ ದರದಲ್ಲಿ ಸರಾಸರಿ ಶೇಕಡ 24ರಷ್ಟು ಏರಿಕೆಯಾಗಿದೆ. 740 ಲಕ್ಷಕ್ಕಿಂತ ಕಡಿಮೆ ಬೆಲೆಯ, ಕೈಗೆಟಕುವ ದರದ ವರ್ಗಕ್ಕೆ ಸೇರುವ ಮನೆಗಳ ಮೌಲ್ಯದಲ್ಲಿ ಶೇ 15ರಷ್ಟು ಹೆಚ್ಚಳ ಈ ಅವಧಿಯಲ್ಲಿ ಆಗಿದೆ. ಹಾಗೆಯೇ, ಮಧ್ಯಮ ಮತ್ತು ಪ್ರೀಮಿಯಂ ವರ್ಗದ ಮನೆಗಳ ದರದಲ್ಲಿ ಶೇ 18ರಷ್ಟು ಏರಿಕೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಭಾರತದ ಮೂಲೆ ಮೂಲೆಗಳಿಂದಲೂ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರೇ ಹೆಚ್ಚು. ಬೆಂಗಳೂರಿನ ರಿಯಲ್ ಎಸ್ಟೇಟ್ ಮೊದಲಿಗಿಂತಲೂ ಎರಡರಷ್ಟು ಹೆಚ್ಚಾಗಿದೆ. ಅದರಲ್ಲೂ ರಿಂಗ್ ರೋಡ್ ಹೊರವಲಯ, ಮಾನ್ಯತಾ ಟೆಕ್ ಪಾರ್ಕ್, ರಾಜಾಜಿನಗರ ಹಾಗೂ ವೈಟ್ ಫೀಲ್ಡ್ ನಲ್ಲಿ ಮನೆಗಳ ಬೆಲೆ ಹೆಚ್ಚಾಗುತ್ತಿದೆ. ಈಗ ಬೆಂಗಳೂರಿನಲ್ಲಿ ಮನೆಗಳ ಬೆಲೆ ಗಗನಕ್ಕೇರಿದೆ.
ಐಟಿ ಹಬ್ ಹಾಗೂ ಟೆಕ್ ಪಾರ್ಕ್ ಗಳ ಸುತ್ತ ಮುತ್ತ 2-3 ಕಿಲೋ ಮೀಟರ್ ದೂರದವರೆಗೂ ಶೇ. 40 ರಷ್ಟು ಮನೆಗಳ ಬೆಲೆಗಳು ಗಗನಕ್ಕೇರಿವೆ. ಈ ಬಗ್ಗೆ ಅನಾರಕ್ ನಿಂದ ವರದಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ ವೈಟ್ಫೀಲ್ಡ್ನಲ್ಲಿ ಶೇ. 18 ರಷ್ಟು, ರಾಜಾಜಿನಗರದಲ್ಲಿ ಶೇ. 16 ರಷ್ಟು ಹಾಗೂ ವರ್ತೂರಿನಲ್ಲಿ ಶೇ. 10 ರಷ್ಟು ಮನೆಗಳ ಬೆಲೆ ಹೆಚ್ಚಳವಾಗಿದೆ.