ಬೆಂಗಳೂರು;ಅಡುಗೆ ಅನಿಲ(Cooking gas) ಪಡೆಯುತ್ತಿರುವ ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿ(Subsidy) ಪಡೆಯಲು ಇ-ಕೆವೈಸಿ(E-KYC) ಮಾಡಿಸುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಗ್ಯಾಸ್ ಸಂಪರ್ಕ ಹೊಂದಿದ ಪ್ರತಿಯೊಬ್ಬರೂ ಡಿಸೆಂಬರ್ 31ರೊಳಗೆ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತಿಳಿಸಲಾಗಿತ್ತು. ಜನರಿಗೆ ವಿಷಯ ತಿಳಿಯದ ಕಾರಣ ನಿತ್ಯ ಗ್ಯಾಸ್ ಏಜೆನ್ಸಿ(Gas agency) ಕಚೇರಿಗಳಿಗೆ ದೌಡಾಯಿಸುತ್ತಿದ್ದಾರೆ. ಎಲ್ಲ ಗ್ಯಾಸ್ ಏಜೆನ್ಸಿಗಳ ಗ್ರಾಹಕರು ಕೂಡ ಇಕೆವೈಸಿ ಮಾಡಿಸಬೇಕು. ಇದಕ್ಕೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಡಿಸೆಂಬರ್ 31(December31) ಎಂಬುದು ಕೂಡ ಸುಳ್ಳಾಗಿದೆ, ಇದನ್ನು ಯಾರೂ ನಂಬಬೇಡಿ. ಅಲ್ಲದೆ ಈ ಕೆಲಸವನ್ನು ಗ್ಯಾಸ್ ವಿತರಕರ ಬಳಿಯೇ ಮಾಡಿಸಬಹುದಾಗಿದ್ದು ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.ಅನಿಲ ಸಂಪರ್ಕ(Gasconnection) ಹೊಂದಿರುವ ಗ್ರಾಹಕರ ನೈಜತೆಯನ್ನು ಪರಿಶೀಲಿಸಿ, ಅರ್ಹರಲ್ಲದವರನ್ನು ಕೈಬಿಡುವ ಉದ್ದೇಶದಿಂದ ಅನಿಲ ಸಂಪರ್ಕ ಗ್ರಾಹಕರ ಇ-ಕೆವೈಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇ-ಕೆವೈಸಿಯನ್ನು ಆಧಾರ್(Aadhar) ಆಧಾರಿತ ಬೆರಳಚ್ಚು ಮತ್ತು ಫೇಸ್ ಆರ್.ಡಿ. ಮೂಲಕ ಮಾಡಲಾಗುವುದು. ಸಾರ್ವಜನಿಕರು ಸಂಬಂಧಿಸಿದ ಗ್ಯಾಸ್ ಏಜೆನ್ಸಿ ಗೆ ತೆರಳಿ ಇ-ಕೆವೈಸಿ ಮಾಡಿಸಬಹುದು ಅಥವಾ ಭರ್ತಿ ಸಿಲಿಂಡರ್ ನೀಡಲು ಬರುವ ಡೆಲಿವರಿ ಹುಡುಗರ ಬಳಿಯೂ ಸಹ ಇ-ಕೆವೈಸಿ ಮಾಡಿಸಬಹುದು.