18.5 C
Bengaluru
Friday, November 22, 2024

LPG Cylinder; ಗ್ಯಾಸ್ ಬುಕ್ ಮಾಡುವಾಗ ಈ ಟಿಪ್ಸ್ ಅನುಸರಿಸಿ ಡಿಸ್ಕೌಂಟ್ ಪಡೆಯಿರಿ

LPG#cylinder#Filfcart#200#Discount#gas cylinder
ಅಡುಗೆ ಅನಿಲ ದರ ಹೆಚ್ಚಳ ನಿಜಕ್ಕೂ ಜನಸಾಮಾನ್ಯರ ಜೇಬನ್ನು ಸುಡುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಅದರಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಗ್ಯಾಸ್ ಬೆಲೆ 1000 ರೂ. ಗಡಿ ದಾಟಿದೆ.ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಮೊದಲು ಚಿಂತೆ ಆಗೋದು ಸಿಲಿಂಡರ್ ಬೆಲೆ ಬಗ್ಗೆಸಿಲಿಂಡರ್ (LPG Cylinder)ಬೆಲೆ ದಿನೇ ದಿನೇ ಏರಿಕೆ ಆಗುತ್ತಿದೆ. ಆದರೂ ಗ್ಯಾಸ್ ಬಳಕೆ ಇಂದಿನ ದಿನಗಳಲ್ಲಿಅನಿವಾರ್ಯ ಆಗಿದೆ.ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ರೂ. 200 ವರೆಗೆ ರಿಯಾಯಿತಿ ಪಡೆಯಬಹುದು. ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಬುಕ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಗ್ಯಾಸ್ ಸಿಲಿಂಡರನ್ನು 200 ರೂಪಾಯಿ ರಿಯಾಯಿತಿ ಮೇಲೆ ಖರೀದಿಸುವ ಹೊಸ ಮಾರ್ಗ ಒಂದು ಜನರಿಗೆ ಪಾರಿಚಯ ಆಗಲಿದೆ.200 ರೂಪಾಯಿ ರಿಯಾಯಿತಿಯಲ್ಲಿ ಗ್ಯಾಸ್ ಸಿಲಿಂಡರ್ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಅದನ್ನು ಬುಕ್ ಮಾಡುವ ವಿಧಾನವನ್ನು ನೀವು ಚೇಂಜ್ ಮಾಡಿದರೆ 200 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್ಕಾರ್ಟ್ (Flipkart) ನಲ್ಲಿ ಓರ್ಡರ್ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಅಂದರೆ 200 ರೂಪಾಯಿಯ ರಿಯಾಯಿತಿಯನ್ನು ಪಡೆಯಬಹುದು.

ರಿಯಾಯಿತಿ ದರದಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಫ್ಲಿಪ್‌ಕಾರ್ಟ್‌ ಆಪ್​ಗೆ ಹೋಗಿ ಸೂಪರ್ ಕಾಯಿನ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸೂಪರ್ ಕಾಯಿನ್ ಪೇ ಎಂಬ ಆಯ್ಕೆ ಇದೆ. ಅದನ್ನು ಆಯ್ಕೆ ಮಾಡಬೇಕು. ನಂತರ ಈಗ ನೀವು ವಿವಿಧ ಆಯ್ಕೆಗಳನ್ನು ಹೊಂದಿರುತ್ತದೆ.LPG ಬುಕಿಂಗ್ ಆಯ್ಕೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಹೊಸ ಪುಟದಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಬುಕ್ ಬಳಸುತ್ತಿದ್ದೀರಿ ಅನ್ನುವ ಮಾಹಿತಿಯನ್ನ ನೀಡಬೇಕಾಗುತ್ತದೆ.ಅದೇ ರೀತಿಯಲ್ಲಿ ಗ್ಯಾಸ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೆಕು. ಸರಿಯಾದ ನಂಬರ್ ಅನ್ನು ನೋಂದಾವಣೆ ಮಾಡುವುದು ಅವಶ್ಯಕವಾಗಿದೆ ನಂತರ ಮೇಕ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಸಿಲೆಂಡರ್ ಬೆಲೆ ಎಷ್ಟು ಕಾಣಿಸುತ್ತದೆ.ನಂತರ ಪಾವತಿ ಆಯ್ಕೆ ನಿಮ್ಮ ಮುಂದೆ ಬರುತ್ತದೆ. ಈಗ ನಿಮಗೆ ಎಷ್ಟು ರಿಯಾಯ್ತಿ ಸಿಗುತ್ತೆ ಅನ್ನೋದು ಕಾಣುತ್ತದೆ. ನಂತರ ಮುಂದುವರೆಯಲು ಕ್ಲಿಕ್ ಮಾಡಿ. ಮುಂದೆ ನೀವು ಎಷ್ಟು ಸೂಪರ್‌ಕಾಯಿನ್‌ಗಳನ್ನು ಹೊಂದಿದ್ದೀರಿ? ನೀವು ಎಷ್ಟು ರಿಯಾಯಿತಿ ಪಡೆದಿದ್ದೀರಿ? ಎಂಬುವುದು ತೋರಿಸುತ್ತದೆ. ನೀವು 700 ಸೂಪರ್ ಕಾಯಿನ್ ಹೊಂದಿದ್ದರೆ ನಿಮಗೆ 200 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ.

ನಿಮ್ಮ ಬಳಿ ಕಡಿಮೆ ಸೂಪರ್ ನಾಣ್ಯಗಳಿದ್ದರೆ ಕಡಿಮೆ ಡಿಸ್ಕೌಂಟ್ ಬರುತ್ತದೆ. ಸಿಲಿಂಡರ್ ಬೆಲೆ 1150 ರೂಪಾಯಿ ಆಗಿದೆ. ನೀವು 200 ರೂಪಾಯಿ ರಿಯಾಯಿತಿ ಪಡೆದುಕೊಂಡರೆ ನೀವು ಕೇವಲ 950 ರೂಪಾಯಿಯಲ್ಲಿ ಸಿಲಂಡರ್ ಬುಕ್ ಮಾಡಬಹುದು,ಉದಾಹರಣೆಗೆ ನೀವು 700 ಸೂಪರ್ ಕಾಯಿನ್ ಹೊಂದಿದ್ದರೆ ನಿಮಗೆ 200 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಈಗ ಸಿಲಿಂಡರ್ ಬೆಲೆ 1,150 ರೂಪಾಯಿ ಆಗಿದೆ. ನೀವು 200 ರೂಪಾಯಿ ರಿಯಾಯಿತಿ ಪಡೆದುಕೊಂಡರೆ ಕೇವಲ 950 ರೂಪಾಯಿಯಲ್ಲಿ ಸಿಲಿಂಡರ್ ಬುಕ್ ಮಾಡಬಹುದು.ಫ್ಲಿಪ್ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಜನರಿಗೆ ಮಾತ್ರ ಈ ಆಫರ್ ಲಭ್ಯ ಇರುತ್ತದೆ.

 

Related News

spot_img

Revenue Alerts

spot_img

News

spot_img