26.7 C
Bengaluru
Sunday, December 22, 2024

Lok Sabha :ಅಧೀರ್ ರಂಜನ್ ಚೌಧರಿ ಸೇರಿದಂತೆ 31 ಮಂದಿ ಸಂಸದರು ಇಂದು ಅಮಾನತು

ನವದೆಹಲಿ;ನಿಯಮ ಬಾಹಿರ ವರ್ತನೆ ತೋರಿದ್ದರಿಂದ ಕಳೆದ 2 ದಿನಗಳ ಹಿಂದಷ್ಟೇ ರಾಜ್ಯಸಭೆಯ ಓರ್ವ ಸದಸ್ಯರು ಸೇರಿ 14 ಸಂಸದರನ್ನು ಅಮಾನತು ಮಾಡಲಾಗಿತ್ತು. ಇಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ 31 ಮಂದಿಯನ್ನುಇಂದು ಅಮಾನತು ಮಾಡಿ ಸಭಾಧ್ಯಕ್ಷರು ಆದೇಶಿಸಿದ್ದಾರೆ. ಇದರೊಂದಿಗೆ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಅಮಾನತಾಗಿರುವ ಈ ಯಾರೊಬ್ಬರೂ ಸದನಕ್ಕೆ ಹಾಜರಾಗುವಂತಿಲ್ಲ. ಸ್ಪೀಕರ್(Speaker) ನಿರ್ಧಾರದ ವಿರುದ್ಧ ವಿಪಕ್ಷ ನಾಯಕರು(Opposition leaders) ತೀವ್ರ ಅಸಮಾಧಾನಗೊಂಡಿದ್ದಾರೆ,ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪದ(Security breach) ಹಿನ್ನೆಲೆಯಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಇವರೆಗೆ ಪ್ರತಿಪಕ್ಷ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.ಗೌರವ್ ಗೊಗೊಯ್, ಎ ರಾಜಾ, ಕಲ್ಯಾಣ್ ಬ್ಯಾನರ್ಜಿ, ದಯಾನಿಧಿ ಮುರಸೋಲಿ ಮಾರನ್, ಕೆ ಜಯಕುಮಾರ್, ವಿಜಯ್ ವಸಂತ್, ಪ್ರತಿಮಾ ಮೊಂಡಲ್, ಸೌಗತ ರಾಯ್ ಮತ್ತು ಸತಾಬ್ದಿ ರಾಯ್ ಸೇರಿದಂತೆ ಇತರ ನಾಯಕರು ಸೋಮವಾರ ಅಮಾನತುಗೊಂಡಿದ್ದಾರೆ.

ಅಶಿಸ್ತಿನ ನಡವಳಿಕೆಯಿಂದ ಕಳೆದ ವಾರ ಅಮಾನತ್ತಾಗಿರುವ 13 ಸಂಸದರು ಕುರಿತ ನಿರ್ಧಾರವನ್ನು ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಲೋಕಸಭೆಯಲ್ಲಿ ನಡೆದಿರುವ ಅತೀ ದೊಡ್ಡ ಭದ್ರತಾ ಲೋಪ ವಿಚಾರ ಕುರಿತು ಅಮಿತ್ ಶಾ(Amith sha) ಉತ್ತರ ನೀಡಬೇಕು. ಡಿಸೆಂಬರ್ 13 ರಂದು ಲೋಕಸಭಾ ಕಲಾಪದ ವೇಳೆ ಭದ್ರತಾ ಉಲ್ಲಂಘನೆ ನಡೆದ ನಂತರ ವಿಪಕ್ಷ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಗಳು ಅಡ್ಡಿಪಡಿಸಿವೆ. ಪ್ರತಿಪಕ್ಷಗಳು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದರೆ, ಹಲವರು ರಾಜೀನಾಮೆಗೆ ಒತ್ತಾಯಿಸಿದರು.ಅಮಾನತು(Suspend) ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್, ಸರ್ಕಾರ ಇಂದು ದಬ್ಬಾಳಿಕೆಯ ಉತ್ತುಂಗವನ್ನು ತಲುಪಿದೆ ಎಂದು ಕಿಡಿಕಾರಿದ್ದಾರೆ. ‘ನನ್ನನ್ನೂ ಒಳಗೊಂಡಂತೆ ಎಲ್ಲ ನಾಯಕರನ್ನು ಅಮಾನತುಗೊಳಿಸಲಾಗಿದೆ, ಹಿಂದೆ ಅಮಾನತುಗೊಂಡಿರುವ ನಮ್ಮ ಸಂಸದರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮತ್ತು ಗೃಹ ಸಚಿವರು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದೇವೆ,

Related News

spot_img

Revenue Alerts

spot_img

News

spot_img