ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಇಂಜಿನಿಯರ್ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ವೃತ್ತಿಯಲ್ಲಿ ಎಲೆಕ್ಟಿಕಲ್ ಗುತ್ತಿಗೆದಾರರಾಗಿರುವ ಶ್ರೀ. ಮಹೇಶ್ವರಪ್ಪ ಬೇವಿನಹಳ್ಳಿರವರು ಐ.ಪಿ. ಸೆಟ್‌ಗಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಅನುಮೋದನೆ ನೀಡುವಂತೆ ಹರಿಹರ ನಗರದ ಬೆಸ್ಕಾಂ ಕಛೇರಿಯಲ್ಲಿ. ಸಹಾಯಕ ಇಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ಕರಿಬಸವಯ್ಯ ಬಿ.ಎಂ.ರವರನ್ನು ಬೇಟಿ ಮಾಡಲಾಗಿ, ಮೊದಲಿಗೆ ಪ್ರತಿ ಸಂಪರ್ಕಕ್ಕೆ ರೂ.5,000/-ಗಳ ಲಂಚದ ಹಣವನ್ನು ನೀಡುವಂತೆ ಒತ್ತಾಯಿಸಿದ್ದು, ತದನಂತರ ಮಾತುಕತೆಯಾಗಿ, ಪ್ರತಿ ಸಂಪರ್ಕಕ್ಕೆ ರೂ.1,000/-ಗಳಂತೆ ಒಟ್ಟು ರೂ.8,000/-ಗಳ ಲಂಚದ ಹಣವನ್ನು ನೀಡಲೇ ಬೇಕು ಎಂದು ಆಪಾದಿತರು ದೂರುದಾರರನ್ನು ಒತ್ತಾಯಿಸಿ ಮುಂಗಡವಾಗಿ ರೂ.1,000/-ಗಳನ್ನು ಸ್ವೀಕರಿಸಿರುತ್ತಾರೆ. ದಿನಾಂಕ; 23.02.2023ರಂದು ದೂರುದಾರರಿಂದ ಆಪಾದಿತರು ರೂ.6,000/-ಗಳ ಲಂಚದ ಹಣವನ್ನು ಸ್ವೀಕಲಿಸುವ ಸಂದರ್ಭದಲ್ಲಿ ಅವರನ್ನು ಟ್ರ್ಯಾಪ್ ಮಾಡಲಾಗಿದ್ದು, ದಸ್ತಗಿರಿ ಮಾಡಿ ತನಿಖೆ ಮುಂದುವರೆಸಲಾಗಿದೆ.ಗೌರವಾನ್ವಿತ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ರವರ ಸೂಚನೆಯಂತೆ ಶ್ರೀಯುತ, ಪ್ರಶಾಂತ್ ಕುಮಾರ್ ಠಾಕೂರ್, ಐಪಿಎಸ್., ಅಪರ ಪೊಲೀಸ್ ಮಹಾನಿರ್ದೇಶಕರು ಹಾಗೂ ಶ್ರೀ. ಎಂ.ಎಸ್. ಕೌಲಾಪುರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾಳಿ ನಡೆಸಿದ್ದಾರೆ. ಕರಿಬಸವಯ್ಯ ಅವರನ್ನು ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀ. ಕೆ.ಜಿ. ರಾಮಕೃಷ್ಣ, ಪೊಲೀಸ್ ಉಪಾಧೀಕ್ಷಕರ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆಯನ್ನು ಜರುಗಿಸಿರುತ್ತಾರೆ.