21 C
Bengaluru
Tuesday, December 3, 2024

Lokayukta Raid In Bangalore; ಕೆ.ಆರ್.ಪುರಂ ಸರ್ವೆ ಸೂಪರ್ ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿ ಲೋಕಾಯುಕ್ತ ಬಲೆಗೆ

#Lokayukta #Raid #banglore #KR Puram #Survey Supervisor #KT Srinivas Murthy
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಹಿನ್ನಲೆಯಲ್ಲಿ, ಸರ್ವೇ ಸೂಪರ್ ವೈಸರ್ ಗೆ ಸೇರಿದಂತ ನಿವಾಸ, ಕಚೇರಿಯ ಮೇಲೆ ಬೆಂಗಳೂರು, ತುಮಕೂರಿನ 14 ಕಡೆಯಲ್ಲಿ ಇಂದು ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಿದೆ.ನಗರದ ಲೋಕಾಯುಕ್ತ ಪೊಲೀಸರು ಇಂದು ಮಂಗಳವಾರ ಕೆ ಆರ್ ಪುರಂ ತಾಲ್ಲೂಕು ಕಚೇರಿಯ ಸರ್ವೆ ಸೂಪರ್ ವೈಸರ್(Servey supervisor) ಕೆ ಟಿ ಶ್ರೀನಿವಾಸ ಮೂರ್ತಿಯವರ ಹಲವು ಮನೆಗಳ ಮೇಲೆ ದಾಳಿ ನಡೆಸಿ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ(Illegal property gain) ಆರೋಪದ ಮೇಲೆ ವಿಚಾರಣೆ ಕಾರ್ಯ ನಡೆಸುತ್ತಿದ್ದಾರೆ,

ಬೆಂಗಳೂರಿನ ಕೆ ಆರ್ ಪುರಂ ತಾಲೂಕು ಕಚೇರಿಯ ಸರ್ವೇ ಸೂಪರ್ ವೈಸರ್(Survey Supervisor) ಕೆ.ಟಿ ಶ್ರೀನಿವಾಸ್ ಮನೆ, ಕಚೇರಿ, ಸಂಬಂಧಿಕರ ಮನೆ ಮೇಲೆ 14 ಕಡೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ಬೆಂಗಳೂರಿನ ಅವರ ಕಚೇರಿ, ದಾಳಿ ವೇಳೆ ಕೆ ಟಿ ಶ್ರೀನಿವಾಸ್ ಆಂಧ್ರಹಳ್ಳಿಯಲ್ಲಿ ನಿವೇಶನ, ಅವರ ಪತ್ನಿ ರಾಯಪುರದಲ್ಲಿ ಭೋಗ್ಯಕ್ಕೆ ಪಡೆದಿರುವ ಜಮೀನು, ಪತ್ನಿ ಹಾಗೂ ಸಹೋದರಿಯ ಸಹಭಾಗಿತ್ವದಲ್ಲಿ ಹೊಂದಿರುವ ಹೋಟೆಲ್ ಮತ್ತು ಬೋರ್ಡಿಂಗ್ಸ್, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್, ಹೆಣ್ಣೂರು ಗ್ರಾಮದಲ್ಲಿ 2 ಸಾವಿರ ಚದರ್​ ಮೀಟರ್​ ವಿಸ್ತೀರ್ಣದ ಒಂದು ನಿವೇಶನ, ನಿರ್ಮಾಣ ಹಂತದ ಕಟ್ಟಡ, ಕೊತ್ತನೂರು ಗ್ರಾಮದಲ್ಲಿ ನಿವೇಶನ, ಲಕ್ಕೇನಹಳ್ಳಿಯಲ್ಲಿ ಒಂದು ಹೊಸ ಮನೆ, 5ಕ್ಕೂ ಅಧಿಕ ಅಬಕಾರಿ(Excise) ಪರವಾನಗಿ ಹೊಂದಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Related News

spot_img

Revenue Alerts

spot_img

News

spot_img