#Lokayukta # raid #Aranthodu #village administrator
ಸುಳ್ಯ: ವ್ಯಕ್ತಿಯೊಬ್ಬರಿಂದ ಲಂಚ ಸ್ವಿಕಾರ ಮಾಡುತ್ತಿದ್ದ ಗ್ರಾಮ ಆಡಳಿತಾಧಿಕಾರಿ(Village Administrator) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ. ಹಕ್ಕು ಖುಲಾಸೆಗೆ ಅರ್ಜಿ ವಿಲೇವಾರಿ ಮಾಡಲು ಹಣದ ಬೇಡಿಕೆ ಇಟ್ಟು ಲಂಚ (Bribe)ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಆಡಳಿತಾಧಿಕಾರಿ (Village Administrator) ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಆ.19ರ ಶನಿವಾರ ನಡೆದಿದೆ.ಮಿಯಾಸಾಬ್ ಮುಲ್ಲಾ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಆಡಳಿತಾಧಿಕಾರಿ ಬಂಧಿತ ಅಧಿಕಾರಿ.ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ತಲೆ ಎಂಬಲ್ಲಿ ಹರಿಪ್ರಸಾದ್ ಅಡ್ತಲೆ ಎಂಬವರಿಗೆ ಮಂಜೂರಾದ ಅಕ್ರಮ ಸಕ್ರಮ ಭೂಮಿಯ ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಇದರ ವರದಿ ಸಲ್ಲಿಕೆಗಾಗಿ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ 8 ಸಾವಿರ ರೂ ಬೇಡಿಕೆ ಇಟ್ಟಿದ್ದರು.
ಹರಿಪ್ರಸಾದ್ ಅವರಿಂದ ಮೂರು ಸಾವಿರ ಹಣ ಈ ಹಿಂದೆ ಪಡೆದಿದ್ದರು. ಉಳಿದ 5 ಸಾವಿರ ಹಣ ಹಣ ಸ್ವೀಕರಿಸುತ್ತಿದ್ದಾಗ ಗ್ರಾಮ ಆಡಳಿತಾಧಿಕಾರಿಯನ್ನು ಲೋಕಾಯುಕ್ತ ಬಂದಿಸಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಕಡತ ವಿಲೇವಾರಿಗೆ ಹಣ ಬೇಡಿಕೆ ಇರಿಸಿದ ಹಿನ್ನಲೆಯಲ್ಲಿ ಹರಿಪ್ರಸಾದ್ ಲೋಕಾಯುಕ್ತಕ್ಕೆ ದೂರುನೀಡಿದ್ದರು.ಈ ಹಿನ್ನಲೆಯಲ್ಲಿ ಇಂದು ದಾಳಿ ನಡೆಸಿದ ಲೋಕಾಯುಕ್ತ ತಂಡ ಹಣ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಯನ್ನು ರೆಡ್ ಹ್ಯಾಂಡಾಗಿ ಬಂಧಿಸಿದೆ.ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು, ಟ್ರ್ಯಾಕ್ ಲೇಯಿಂಗ್ ಆಫೀಸರ್ ಅಮಾರುಲ್ಲಾ ಸೇರಿದಂತೆ ಮತ್ತಿತರ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.