ದೆಹಲಿ;ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ಇಂದು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಟಿಕೆಟ್ ಘೋಷಿಸಲಾಗಿದ್ದು, ಮೂರನೇ ಬಾರಿಯೂ ಉತ್ತರ ಪ್ರದೇಶದ ವಾರಣಾಸಿಯಿಂದಲೇ ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ಗೆಲುವು ಮನಗಂಡಿರುವ ಪಕ್ಷ, ಪ್ರಧಾನಿಗೆ ಒಂದೇ ಕ್ಷೇತ್ರ ನೀಡಿದಂತಿದೆ. ಇನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಈ ಬಾರಿಯೂ ಗುಜರಾತಿನ ಗಾಂಧಿನಗರದಿಂದಲೇ ಕಣಕ್ಕಿಳಿಯಲಿದ್ದಾರೆಂದು ಪಕ್ಷ ಘೋಷಿಸಿದೆ.ಮುಂದಿನ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಹೈಕಮಾಂಡ್ 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಕೇಂದ್ರದ ೩೪ ಸಚಿವರಿಗೆ ಟಿಕೆಟ್ ಘೋಷಿಸಲಾಗಿದ್ದು, ಅದರಲ್ಲಿ ಇಬ್ಬರು ಮಾಜಿ ಸಿಎಂ, 50 ವರ್ಷದ 47 ಯುವಕರನ್ನು ಕಣಕ್ಕೆ ಇಳಿಸಲಾಗುತ್ತಿದೆ. ಅರುಣಾಚಲ ಪ್ರದೇಶದಿಂದ ಕಿರಣ್ ರಿಜಿಜು, ಚಾಂದಿನಿ ಚೌಕ್ ನಿಂದ ಪ್ರವೀಣ್, ಗಾಂಧಿ ನಗರದಿಂದ ಅಮಿತ್ ಷಾ, ರಾಜಕೋಟ್- ಪುರುಷೋತ್ತಮ ಸೇರಿದಂತೆ ಮಾಜಿ ಸಚಿವೆ ಸುಷ್ಮಾ ಪುತ್ರಿಗೂ ಟಿಕೆಟ್ ಘೋಷಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖ್ಯಮಂತ್ರಿಗಳು, ರಾಜ್ಯ ಅಧ್ಯಕ್ಷರು, ಉಸ್ತುವಾರಿಗಳು, ಸಹ ಉಸ್ತುವಾರಿಗಳು ಮತ್ತು ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು
ಉತ್ತರಪ್ರದೇಶ- 51 ಕ್ಷೇತ್ರಗಳು
ಪಶ್ಚಿಮ ಬಂಗಾಳ- 20
ಪಶ್ಚಿಮ ಬಂಗಾಳ -20
ಗುಜರಾತ್- 15
ರಾಜಸ್ಥಾನ- 15
ಕೇರಳ- 12
ತೆಲಂಗಾಣ -9
ಅಸ್ಸಾಂ -11
ಜಾರ್ಖಂಡ್ -11
ಛತ್ತೀಸಗಡ್- 11
ದೆಹಲಿ -5
ಉತ್ತರಖಂಡ್- 3
ಗೋವಾ- 1
ತ್ರಿಪುರ -1
ಅಂಡಮಾನ್ ನಿಕೋಬರ್- 1
ಮೊದಲ ಪಟ್ಟಿಯಲ್ಲಿರುವ ಪ್ರಮುಖರು
ವಾರಣಾಸಿ- ನರೇಂದ್ರ ಮೋದಿ
ಅರುಣಾಚಲ ವೆಸ್ಟ್- ಕಿರಣ್ ರಿಜಿಜು
ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್
ಚಾಂದನಿ ಚೌಕ್- ಪ್ರವೀಣ್
ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್
ಗಾಂಧಿನಗರ -ಅಮಿತ್ ಶಾ
ರಾಜ್ ಕೋಟ್- ಪುರುಷೋತ್ತಮ್ ರೂಪಾಲ್
ಪೋರ್ ಬಂದರ್- ಮನ್ಸೂಖ್ ಮಾಂಡವೀಯ
ಉಧಮಪುರ-ಜಿತೇಂದ್ರ ಸಿಂಗ್
ಗೊಡ್ಡಾ-ನಿಶಿಕಾಂತ್ ದುಬೆ
ಕಾಸರಗೊಡು- ಅಶ್ವಿನಿ
ಕೊಡರಮಾ-ಅನ್ನಪೂರ್ಣದೇವಿ
ತಿರುವನಂತಪುರಂ-ರಾಜೀವ್ ಚಂದ್ರಶೇಖರ್
ಖುಂಟಿ-ಅರ್ಜುನ್ ಮುಂಡಾ
ಹಜಾರಿಭಾಗ್-ಮನೀಶ್ ಜೈಸ್ವಾಲ್
ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ
ಪಾಲ್-ಅಲೋಕ್ ಶರ್ಮಾ
ಖಜುರಾಹೋ-ವಿ.ಡಿ.ಶರ್ಮಾ
ಅಲವರ-ಭೂಪೇಂದ್ರ ಯಾದವ್
ಅಂಡಮಾನ್ ನಿಕೋಬಾರ್- ವಿಷ್ಣು ಪಡರೆ
ಅರುಣಾಚಲ ಪೂರ್ವ- ತಾಪಿರ್ ಗಾವೋ
ಕರೀಂಗಂಜ್, ಅಸ್ಸಾಂ – ಕೃಪಾನಾಥ್ ಮಾಲಾ
ಸಿಲ್ಚಾರ್ – ಪರಿಮಳಾ ಶುಕ್ಲವೈದ್ಯ
ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್
ಕೋಟಾ-ಓಂ ಬಿರ್ಲಾ
ಚಿತ್ತೋಡಗಢ್-ಸಿ.ಪಿ.ಜೋಶಿ
ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್
ಅಲ್ಮೋಡಾ-ಅಜಯ್ ಟಮಟಾ
ಮುಜಫ್ಪರನಗರ-ಸಂಜೀವ್ ಬಲಿಯಾನ್
ಗೌತಮಬುದ್ಧನಗರ-ಮಹೇಶ್ ಶರ್ಮಾ
ಮಧುರಾ-ಹೇಮಾ ಮಾಲಿನಿ
ಕೈರಾನ್-ಪ್ರದೀಪ್ ಕುಮಾರ್
ಫತೇಪುರಸಿಕ್ರಿ-ರಾಜಕುಮಾರ್ ಚಹರ್
ಸೀತಾಪುರ-ರಾಜೇಶ್ ಶರ್ಮಾ
ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ
ರಾಂಪುರ್ – ಘನಶಾಮ್
ಮಥುರಾ – ಹೇಮಾಮಾಲಿನಿ
ಉನ್ನಾವ್- ಸಾಕ್ಷಿ ಮಹಾರಾಜ್
ಅಮೇಠಿ- ಸ್ಮೃತಿ ಇರಾನಿ
ಕನೌಜ್ – ಸುಬ್ರತ್ ಪಾಠಕ್
ಫತೇಪುರ್- ಸಾದ್ವಿ ನಿರಂಜನ್ ಜ್ಯೋತಿ
ಫೈಜಾಬಾದ್ (ಅಯೋಧ್ಯಾ)- ಲಲ್ಲು ಸಿಂಗ್
ಲಖನೌ-ರಾಜನಾಥ್ ಸಿಂಗ್
ಝಾನ್ಸಿ-ಅನುರಾಜ್
ಖುಷಿನಗರ-ವಿಜಯ್ ಕುಮಾರ್
ಗೋರಖಪುರ್-ರವಿ ಕಿಶನ್
ಪಶ್ಚಿಮ ಬಂಗಾಳ (ಕಾಂತಿ) – ಸುವೇಂದು ಅಧಿಕಾರಿ
ಹೂಗ್ಲಿ-ಲಾಕೆಟ್ ಚಟರ್ಜಿ
ಹರ್ದೋಯಿ-ಜಯಪ್ರಕಾಶ್
ಖೇರಿ-ಅಜಯ್ ಮಿಶ್ರಾ
ಅಂಬೇಡ್ಕರ ನಗರ-ರಿತೇಶ್ ಪಾಂಡೆ
ಹಜಾರಿಭಾಗ್-ಮನೀಶ್ ಜೈಸ್ವಾಲ್
ತ್ರಿಶೂರ್-ಸುರೇಶ್ ಗೋಪಿ
ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ
ಗುನಾ ಲೋಕಸಭಾ ಕ್ಷೇತ್ರ-ಜ್ಯೋತಿರಾದಿತ್ಯ ಸಿಂಧಿಯಾ
ಚಾಂದನಿಚೌಕ್ ಲೋಕಸಭಾ ಕ್ಷೇತ್ರ-ಪ್ರವೀಣ್ ಖಂಡೇಲವಾಲಾ