26.7 C
Bengaluru
Sunday, December 22, 2024

ಕಡಿಮೆ ಬಡ್ಡಿದರದಲ್ಲಿ ಸಾಲ; ಕೇಂದ್ರದಿಂದ ಶೀಘ್ರದಲ್ಲೇ ಮಹತ್ವದ ಘೋಷಣೆ

ದೆಹಲಿ: ದೇಶದ ನಗರ ಪ್ರದೇಶಗಳ ಬಡವರು, ಕಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳುವ ಯತ್ನಕ್ಕೆ ದೊಡ್ಡ ಸಹಾಯ ಹಸ್ತ ಚಾಚಲು ಕೇಂದ್ರ ಸರಕಾರ ಮುಂದಾಗಿದೆ. ಸಣ್ಣ ಮನೆಗಳನ್ನು ನಿರ್ಮಿಸಲು, ಖರೀದಿಸಲು ಬಯಸುವವರಿಗೆ ಕನಿಷ್ಠ ಶೇ.3ರಿಂದ ಗರಿಷ್ಠ ಶೇ.6.5 ಬಡ್ಡಿದರದಲ್ಲಿ ಗೃಹ ಸಾಲ ನೀಡಲು ಯೋಜಿಸಿದೆ. ಅದಕ್ಕಾಗಿ ಮುಂದಿನ 5 ವರ್ಷಗಳ ಅವಧಿಯಲ್ಲಿ 60 ಸಾವಿರ ಕೋಟಿ ರು.ಗಳನ್ನು ವಿನಿಯೋಜಿಸುವ ಬೃಹತ್ ಯೋಜನೆ  ರೂಪಿಸಿದೆ. ಕೇಂದ್ರ ಸಚಿವ ಸಂಪುಟದ ಅಂಕಿತ ಬೀಳುತ್ತಿದ್ದಂತೆಯೇ ಜಾರಿಗೆ ಬರಲಿದೆ.20 ವರ್ಷಗಳ ಅವಧಿಗೆ 50 ಲಕ್ಷ ರೂ.ಗಿಂತ ಕಡಿಮೆ ಇರುವ ಗೃಹ ಸಾಲಗಳು ಉದ್ದೇಶಿತ ಯೋಜನೆಗೆ ಅರ್ಹತೆ ಪಡೆಯುತ್ತವೆ ಎಂದು ಮೂಲಗಳು ತಿಳಿಸಿವೆ. ಬಡ್ಡಿ ರಿಯಾಯಿತಿಯನ್ನು ಫಲಾನುಭವಿಗಳ ಗೃಹ ಸಾಲದ ಖಾತೆಗೆ ಮುಂಗಡವಾಗಿ ಜಮಾ ಮಾಡಲಾಗುತ್ತದೆ. ನಗರ ಪ್ರದೇಶಗಳಲ್ಲಿ 50 ಲಕ್ಷ ರು.ಗಳಿಗಿಂತ ಕಡಿಮೆ ಬೆಲೆಯ ಸಣ್ಣ ಮನೆಗಳ ನಿರ್ಮಾಣ ಅಥವಾ ಖರೀದಿಗೆ ಈ ‘ಗೃಹಸಾಲ ಸಹಾಯಧನ ಯೋಜನೆ’ಯ ಪ್ರಯೋಜನ ದೊರೆಯಲಿದೆ.ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದೇ ಘೋಷಿಷಿಸಿದ್ರು, ಯೋಜನೆಯ ವಿವರಗಳನ್ನು ಅಂದು ಪ್ರಕಟಿಸಿರಲಿಲ್ಲ. ಈಗ ಯೋಜನೆ ಜಾರಿಗೆ ಸಿದ್ದವಾಗಿದೆ ಎಂದು ಅಧಿಕೃತವಾದ ಎರಡು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ಸುದ್ದಿಸಂಸ್ಥೆ ಸೋಮವಾರ ವರದಿ ಪ್ರಕಟಿಸಿದೆ.

Related News

spot_img

Revenue Alerts

spot_img

News

spot_img