20 C
Bengaluru
Wednesday, January 22, 2025

ನೊಂದಣಿ ಕಛೇರಿಗಳಲ್ಲಿ ಇಡಲೇಬೇಕಾದ ರಿಜಿಸ್ಟರ್ ಪುಸ್ತಕಗಳು ಯಾವುವು ಗೊತ್ತಾ?

ಬೆಂಗಳೂರು ಜುಲೈ 03:ನಮ್ಮ ಸುತ್ತಮುತ್ತ ಸರ್ಕಾರಕ್ಕೆ ಸಂಬಂದಪಟ್ಟ ಸಾಕಷ್ಟು ಇಲಾಖೆಗಳ ಕಛೇರಿಗಳನ್ನು ನಾವು ಪ್ರತಿ ದಿನ ನೋಡುತ್ತಿರುತ್ತೇವೆ. ಅದರಲ್ಲಿ ಜಮೀನು,ಸೈಟ್,ನಿವೇಶನದ ರಿಜಿಸ್ಟ್ರೇಶನ್ ಮತ್ತು ಇತರ ವಿಷಯಗಳ ಬಗ್ಗೆ ಮಾಹಿತಿ ಬೇಕಾದಾಗ ತುಂಬಾ ಜನ ಸಬ್-ರಿಜಿಸ್ಟ್ರಾರ್/ಡಿಸ [ಪುಸ್ತಕಗಳು ಅಥವಾ ಮಾಹಿತಿ] ಅಥವಾ ಸಂಗ್ರಹ ಸಾಧನಗಳನ್ನು ಈ ಮುಂದಿನಂತೆ ಹಲವು ಕಛೇರಿಗಳಲ್ಲಿ ಇಡತಕ್ಕದ್ದು, ಎಂದರೆ-

(ಎ) ಎಲ್ಲಾ ನೋಂದಣಿ ಕಛೇರಿಗಳಲ್ಲಿ ಇಡಲೇಬೇಕಾದ ರಿಜಿಸ್ಟರ್ ಪುಸ್ತಕಗಳು :-
ಪುಸ್ತಕ 1- “ಸ್ಥಿರಸ್ವತ್ತಿಗೆ ಸಂಬಂಧಿಸಿದ ಮರಣಶಾಸನೇತರ ದಸ್ತಾವೇಜುಗಳ ರಿಜಿಸ್ಟರು”;
ಪುಸ್ತಕ 2-“ರಿಜಿಸ್ಟರ್‌ನ್ನು ನಿರಾಕರಿಸುವುದಕ್ಕಾಗಿನ ಕಾರಣಗಳ ದಾಖಲೆ”;
ಪುಸ್ತಕ 3-“ಮರಣಶಾಸನಗಳ ಮತ್ತು ದತ್ತು ಮಾಡಿಕೊಳ್ಳುವ ಅಧಿಕಾರಗಳ ರಿಜಿಸ್ಟರು” ಮತ್ತು
ಪುಸ್ತಕ 4-“ಸಂಕೀರ್ಣ ರಿಜಿಸ್ಟರು”.

(ಬಿ) ರಿಜಿಸ್ಟ್ರಾರರ (ಜಿಲ್ಲಾ ನೋಂದಣಾಧಿಕಾರಿಯವರ) ಕಛೇರಿಗಳಲ್ಲಿ ಇಡಲೇಬೇಕಾದ ರಿಜಿಸ್ಟರ್ ಪುಸ್ತಕಗಳು:-
ಪುಸ್ತಕ 5-“ಮರಣಶಾಸನಗಳನ್ನು ಠೇವಣಿ ಇಟ್ಟ ಬಗ್ಗೆ ರಿಜಿಸ್ಟರು”.

ಪುಸ್ತಕ ರಲ್ಲಿ ಸ್ಥಿರಸ್ವತ್ತಿಗೆ ಸಂಬಂಧಿಸಿದಂಥ 17, 18 ಮತ್ತು 89ನೇ ಪ್ರಕರಣದ ಮೇರೆಗೆ ನೋಂದಾಯಿಸಲಾದ ಎಲ್ಲಾ ದಸ್ತಾವೇಜುಗಳನ್ನು ಅಥವಾ ವಿವರಣಾ ಪತ್ರಗಳನ್ನು ನಮೂದಿಸತಕ್ಕದ್ದು
ಅಥವಾ ಇಡತಕ್ಕದ್ದು ಮತ್ತು ಮರಣಶಾಸನಗಳನ್ನು ಅಲ್ಲ.

ಪುಸ್ತಕ 4ರಲ್ಲಿ ಸ್ಥಿರಸ್ವತ್ತಿಗೆ ಸಂಬಂಧಿಸಿದ 18ನೇ ಪ್ರಕರಣದ (ಡಿ) ಮತ್ತು (ಎಫ್) ಖಂಡಗಳ ಮೇರೆಗೆ ನೋಂದಾಯಿಸಲಾದ ಎಲ್ಲಾ ದಸ್ತಾವೇಜುಗಳನ್ನು ನಮೂದಿಸತಕ್ಕದ್ದು.ಈ ಮೇಲ್ಕಂಡ ಯಾವುದಾದರು ಸಬ್‌ರಿಜಿಸ್ಟ್ರಾರ್ ಕಛೇರಿಯೊಂದಿಗೆ ರಿಜಿಸ್ಟಾರ್ ‌ರವರ ಕಛೇರಿಯನ್ನು ವಿಲೀನಗೊಳಿಸಿದ್ದಲ್ಲಿ ಒಂದಕ್ಕಿಂತ ಹೆಚ್ಚು ಸೆಟ್ ಪುಸ್ತಕಗಳನ್ನು ಅಗತ್ಯಪಡಿಸುತ್ತದೆಂದು ಭಾವಿಸತಕ್ಕದ್ದಲ್ಲ.

Related News

spot_img

Revenue Alerts

spot_img

News

spot_img