21.1 C
Bengaluru
Monday, December 23, 2024

ಆಧಾರ್ ಗೆ ಪ್ಯಾನ್ ಕಾರ್ಡ್ ಜೋಡಣೆಗೆ 2023 ಮಾರ್ಚ್ ವರೆಗೆ ಗಡುವು..!

ಬೆಂಗಳೂರು, ಡಿ. 26: ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಆದಾಯ ತೆರೆಗೆ ಇಲಾಖೆ ಗಡುವು ಕೊಟ್ಟಿದೆ. 2023ರ ಮಾರ್ಚ್ 31ರ ಒಳಗೆ ನಿಮ್ಮ ಆಧಾರದ ಕಾರ್ಡ್ ನೊಂದಿಗೆ ಪ್ಯಾನ್ ಕಾಡ್ ಅನ್ನು ಲಿಂಕ್ ಮಾಡದೇ ಹೋದಲ್ಲಿ, ಅಂತಹ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತವೆ. ಈ ಬಗಗೆ ಆದಾಯ ತೆರಿಗೆ ಇಲಾಖೆ ಶನಿವಾರ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೊಂದು ವೇಳೆ ಲಿಂಕ್ ಮಾಡದಿದ್ದಾಗ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಆಗ ಐಟಿ ರಿಟರ್ನ್ಸ್ ಸಲ್ಲಿಸಲು, ಆದಾಯ ವಿವರ ಸಲ್ಲಿಸಲು, 50 ಸಾವಿರಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಎಚ್ಚರಿಕೆ ನೀಡಿದೆ.

ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಖಾರ್ಡ್ ಯಾತಕ್ಕಾಗಿ ಲಿಂಕ್ ಮಾಡಬೇಕು, ಲಿಂಕ್ ಮಾಡುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಆದಾಯ ತರಿಗೆ ಕಾಯ್ದೆ 1961 ರ ಸೆಕ್ಷನ್ 272B ಅಡಿಯಲ್ಲಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದೇ, ನಿಷ್ಕ್ರಿಯಗೊಂಡಿದ್ದರೆ, ಅದನ್ನು ಎಲ್ಲೂ ದಾಖಲೆಯಾಗಿ ಬಳಸಬಾರದು. ಮ್ಯೂಚುವಲ್ ಫಂಡ್ ಇಲ್ಲವೇ ಸ್ಟಾಕ್ ಖಾತೆಗೆ ಪ್ಯಾನ್ ಕಾರ್ಡನ್ನು ಬಳಸಲು ಆಗುವುದಿಲ್ಲ. ಹಾಗೊಂದು ವೇಳೆ ಬಳಸಿದಲ್ಲಿ ಆದಾಯ ತೆರಿಗೆ ಇಲಾಖೆ ಆ ವ್ಯಕ್ತಿಗೆ 10 ಸಾವಿರ ರೂಪಾಯಿ ದಂಡ ವಿಧಿಸುತ್ತದೆ. ಹಾಗಾಗಿ 2023ರ ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಸೂಚಿಸಲಾಗಿದೆ.

ಲಿಂಕ್ ಮಾಡದಿದ್ದರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು:

ಯಾವುದೇ ಬ್ಯಾಂಕ್‌ ಖಾತೆಯಲ್ಲೂ ನೀವು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಠೇವಣಿ ಇಟ್ಟ ಹಣವನ್ನು ಕೂಡ ಹಿಂಪಡೆಯಲು ಆಗುವುದಿಲ್ಲ.

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡ ಬಳಿಕ ನೀವು ಐಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ. ಆಗ ನಿಮ್ಮ ಟಿಡಿಎಸ್ ಕೂಡ ಕೈ ತಪ್ಪಿ ಹೋಗುತ್ತದೆ.5 ಲಕ್ಷ ಮೀರಿದ ಚಿನ್ನಾಭರಣವನ್ನು ಎಲ್ಲೂ ಖರೀದಿಸಲು ಸಾಧ್ಯವಾಗಿವುದಿಲ್ಲ.
ಮ್ಯೂಚುವಲ್ ಫಂಡ್ ಅಥವಾ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಈಗಾಗಲೇ ಹೂಡಿಕೆ ಮಾಡಿದ್ದರೂ ಸಮಸ್ಯೆಗಳಿರಬಹುದು.ಸರ್ಕಾರದ ಯಾವ ಯೋಜನೆಗಳ ಲಾಭವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ.ಯಾವುದೇ ಆಸ್ತಿ ಖರೀದಿ, ಮಾರಾಟ ಮಾಡುವಾಗಲೂ ಪ್ಯಾನ್‌ ಕಾರ್ಡ್‌ ಅವಶ್ಯಕತೆ ಇರುವುದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇನ್ನು ಮನೆಯಲ್ಲೇ ಕುಳಿತು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ..?
ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ಕೊಡಿ. ಬಳಿಕ ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸಹಾಯವಾಗುತ್ತದೆ. ಲಿಂಕ್‌ ಮಾಡಿದ ಬಳಿಕ ನಿಮ್ಮ ಮಾಹಿತಿಯನ್ನು ನಮೂದಿಸಿ. ಹೆಸರು, ಹುಟ್ಟಿದ ದಿನಾಂಕ ಎಲ್ಲವನ್ನೂ ಭರ್ತಿ ಮಾಡಿ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕೇವಲ 1986 ಎಂದು ಬರೆದಿದ್ದಲ್ಲಿ, ಬಾಕ್ಸ್ ಮೇಲೆ ಬಲ ಗುರುತು ಹಾಕಬೇಕು. ನಿಮ್ಮನ್ನು ಪರಿಶೀಲಿಸಲು ಕ್ಯಾಪ್ಚಾ ಕೋಡ್ ಕೇಳಲಾಗಿರುತ್ತದೆ. ಅದನ್ನು ನಮೂದಿಸಿ. ನಂತರ “Link Aadhaar” ಎಂದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಹೀಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಸುಲಭವಾಗಿ ಲಿಂಕ್ ಮಾಡಬಹುದು

Related News

spot_img

Revenue Alerts

spot_img

News

spot_img