ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಜನರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. LIC ತನ್ನ ಗ್ರಾಹಕರ ಅನುಕೊಲಕ್ಕಾಗಿ ಅವರ ಭವಿಷ್ಯದ ಉಪಯೋಗಕ್ಕಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಪರಿಚಯಿಸಿದೆ.LIC ಹೊಸ ಯೋಜನೆಯ ಹೆಸರು ನ್ಯೂ ಎಂಡೋಮೆಂಟ್ ಪ್ಲಾನ್. ಎಲ್ಐಸಿಯ ಹೊಸ ಎಂಡೋಮೆಂಟ್ ಪ್ಲಸ್ ಯೋಜನೆಯು ಯುನಿಟ್-ಲಿಂಕ್ಡ್ ಎಂಡೋಮೆಂಟ್ ಪ್ಲಾನ್ ಆಗಿದ್ದು ಅದು ಪಾಲಿಸಿಯ ಅವಧಿಯಲ್ಲಿ ಹೂಡಿಕೆ-ಕಮ್-ವಿಮಾ ರಕ್ಷಣೆಯನ್ನು ನೀಡುತ್ತದೆ. ಈ ಯೋಜನೆಗೆ ಒಳಪಡುವ ವ್ಯಕ್ತಿಯ ವಯಸ್ಸು ಕನಿಷ್ಠ 8 ವರ್ಷಗಳಿಂದ ಗರಿಷ್ಠ 55 ವರ್ಷಗಳವರೆಗೆ ಇರಬೇಕು. ಆದರೆ, ಈ ಯೋಜನೆಗೆ ಕನಿಷ್ಠ ವಿಮಾ ಮೊತ್ತವು 1 ಲಕ್ಷ ರೂಪಾಯಿ ಆಗಿರಬೇಕು. LICಯ ಯಾವುದೇ ವಿಮಾ ಯೋಜನೆಯಿಂದ ಉತ್ತಮ ಆದಾಯವನ್ನು ಗಳಿಸಲು, ವ್ಯಕ್ತಿಯ ವಯಸ್ಸು ಮತ್ತು ಪಾಲಿಸಿ ಅವಧಿ ಎಷ್ಟು ಎನ್ನುವುದು ಬಹಳ ಮುಖ್ಯವಾಗಿದೆ. ಇದರ ಜೊತೆ ಹೂಡಿಕೆ ಮಾಡುವ ಮೊತ್ತವೂ ಮುಖ್ಯವಾಗಿರುತ್ತದೆ.ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, 35 ವರ್ಷಗಳ ಪಾಲಿಸಿ ಅವಧಿಯನ್ನು ಹೊಂದಿದ್ದು, 9 ಲಕ್ಷದ ವಿಮಾ ಮೊತ್ತವನ್ನು ಆರಿಸಿದರೆ, ಮೊದಲ ವರ್ಷದ ವ್ಯಕ್ತಿಯ ಮಾಸಿಕ ಪ್ರೀಮಿಯಂ 2046 ರೂ. ಆಗಿರುತ್ತದೆ. ಮುಂದಿನ ವರ್ಷದಿಂದ, ಒಬ್ಬ ವ್ಯಕ್ತಿಯು ಈ ಪಾಲಿಸಿಗಾಗಿ ಪ್ರತಿ ತಿಂಗಳು 2002 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 9 ಲಕ್ಷ ರೂ.ಗಳ ವಿಮಾ ಪಾಲಿಸಿಗೆ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ಪಾವತಿಸಬೇಕಾಗುತ್ತದೆ. ಅದರ ರಿಟರ್ನ್ಸ್‌ನಲ್ಲಿ, 35 ವರ್ಷಗಳ ನಂತರ 43,87,500 ರೂ. ಸಿಗುತ್ತದೆ. ವ್ಯಕ್ತಿಯು 35 ವರ್ಷಗಳವರೆಗೆ ಮಾಸಿಕ 2,000 ರೂ ಪ್ರೀಮಿಯಂ ಪಾವತಿಸುವ ಮೂಲಕ 43 ಲಕ್ಷ ರೂ.ಗಿಂತ ಹೆಚ್ಚಿನ ನಿಧಿಯನ್ನು ಪಡೆಯಬಹುದು.