26.7 C
Bengaluru
Sunday, December 22, 2024

ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ಪರಿಚಯಿಸಿದ ಎಲ್ಐಸಿ

ಬೆಂಗಳೂರು, ಮೇ. 06 : ಎಲ್ಐಸಿ ಅಲ್ಲಿ ಸಾಕಷ್ಟು ಯೋಜನೆಗಳು ಗ್ರಾಹಕರಿಗೆ ಅನುಕೂಲಗಳನ್ನು ಮಾಡಿಕೊಟ್ಟಿದ್ದು, ಇದೀಗ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಈದು 50 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸಲಿದೆ. ಈ ಹೊಸ ಯೋಜನೆಯಿಂದ ನಿವೃತ್ತಿ ಆಸುಪಾಸಿನಲ್ಲಿರುವವರಿಗೆ ಬಹಳಷ್ಟು ಅನುಕೂಲಗಳು ಆಗಲಿದೆ. ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ಎಂದು ಈ ಯೋಜನೆಗೆ ಹೆಸರಿಡಲಾಗಿದೆ.

2023ರ ಮೇ 2ರಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಉದ್ಯೋಗದಾತ ಸಂಸ್ಥೆಯೂ ತಮ್ಮ ಉದ್ಯೋಗಿಗಳಿಗೆ ಈ ಯೋಜನೆಯನ್ನು ನೀಡಬಹುದು. ಉದ್ಯೋಗಿಗಳು ನಿವೃತ್ತಿ ಬಳಿಕದ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ. ಪ್ರತಿ ಸದಸ್ಯರಿಗೆ ನಿಗದಿತ ಜೀವ ವಿಮಾ ಪಾವತಿಯನ್ನು ಈ ಯೋಜನೆ ನೀಡುತ್ತದೆ. ಈ ಯೋಜನೆಯೂ ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಗುಂಪು ವಿಮಾ ಸ್ಕೀಮ್ ಆಗಿದೆ.

ಎಲ್ಐಸಿ ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ನಿಂದ ಪ್ರತಿ ಉದ್ಯೋಗಿಯು ಪ್ರಯೋಜನ ಪಡೆಯಬಹುದು. ಸದಸ್ಯರಿಗೆ ನಿಗದಿತ ಜೀವ ವಿಮಾ ಪ್ರಯೋಜನವನ್ನು ನೀಡುತ್ತದೆ. ಈದು ಪ್ರತೀ ಉದ್ಯೋಗಿಗೂ ಸ್ಥಿರ ಲೈಫ್ ಕವರ್ ಪ್ರಯೋಜನವನ್ನು ಕೂಡ ನೀಡುತ್ತದೆ. ಎಲ್ಐಸಿಯ 11 ಗ್ರೂಪ್ ಉತ್ಪನ್ನ ಇದಾಗಿದ್ದು, ಗ್ರೂಪ್ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಆಗಿದೆ. ಉದ್ಯೋಗಿ ನಿವೃತ್ತಿ ಪಡೆಯುವ ಮುನ್ನವೇ ಸೇವೆ ಸಲ್ಲಿಸುತ್ತಿರುವಾಗಲೇ ಮರಣ ಹೊಂದಿದರೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.

ರಾಜೀನಾಮೆ ಅಥವಾ ನಿವೃತ್ತಿ ಯೋಜನೆಯ ನಿಯಮಗಳ ಅನ್ವಯ ನಿವೃತ್ತಿ ಬಳಿಕದ ವೈದ್ಯಕೀಯ ಪ್ರಯೋಜನಗಳನ್ನು ಇದರೊಂದಿಗೇ ನೀಡಲಾಗುತ್ತದೆ. ಗ್ರೂಪ್ ಪಾಲಿಸಿ ಖಾತೆಯಲ್ಲಿರುವ ನಿಧಿ ಲಭ್ಯತೆ ಆಧರಿಸಿ ಈ ಯೋಜನೆ ನಿಯಮಗಳು ಅವಕಾಶ ನೀಡಿದ್ರೆ ವಿಮೆ ಹೊಂದಿರುವ ವ್ಯಕ್ತಿಯ ಕುಟುಂಬ ಸದಸ್ಯರು ನಿವೃತ್ತಿ ಬಳಿಕದ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಈ ಯೋಜನೆ ಪ್ರತಿ ವಿಮೆ ಹೊಂದಿರುವ ವ್ಯಕ್ತಿಗೆ ಸ್ಥಿರ ಲೈಫ್ ಕವರ್ ಬೆನಿಫಿಟ್ ಒದಗಿಸುತ್ತದೆ.

Related News

spot_img

Revenue Alerts

spot_img

News

spot_img