26 C
Bengaluru
Saturday, June 28, 2025

ವರ್ಕ್ ಫ್ರಮ್ ಹೋಂ ಖುಷಿ ಇಮ್ಮಡಿಗೊಳಿಸಲು ಒಳಾಂಗಣ ವಿನ್ಯಾಸ ಹೀಗಿರಲಿ!

ಕೊರೊನಾ ಸಾಂಕ್ರಾಮಿಕದ ನಂತರ ನಮ್ಮೆಲ್ಲರ ಬದುಕು ಬದಲಾಗಿದೆ. ಮನೆ ಕಚೇರಿಯಾಗಿ ಮಾರ್ಪಾಟಾಗಿ ಸಾಕಷ್ಟು ಸಮಯವಾಯ್ತು. ಆದ್ರೆ ನಮ್ಮೆಲ್ಲರಿಗೂ ಈ ಬದಲಾವಣೆ ನಿಧಾನಕ್ಕೆ ಹೊಂದಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಆಫೀಸ್ನ ಕೆಲಸ ಮನೆಯಲ್ಲಿ ಇನ್ನಷ್ಟು ಶಾರ್ಪ್ ಆಗಿ ನಿರ್ವಹಿಸಲು ನಿಮ್ಮ ವರ್ಕಿಂಗ್ ಸ್ಟೇಷನ್ನಲ್ಲಿ ಒಂದಿಷ್ಟು ಬದಲಾವಣೆಯನ್ನು ತನ್ನಿ. ಹಾಗಿದ್ದಲ್ಲಿ ಈ ಐಡಿಯಾಗಳು ನಿಮಗೆ ನೆರವಾಗಬಹುದು.

ವಾಲ್ ಪೇಪರ್ ಅಥವಾ ವಾಲ್ ಪೇಯಿಂಟ್

ನೀವು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಗೋಡೆಯ ಮೇಲಿನ ಬಣ್ಣಕ್ಕೆ ಹೊಸತನ ನೀಡಬಹುದು. ಮನಸ್ಸಿಗೆ ಆಹ್ಲಾದವೆನಿಸುವ ಬಣ್ಣವನ್ನು ಹಚ್ಚಬಹುದು. ಇಲ್ಲವೇ ವಿಭಿನ್ನ ವಿನ್ಯಾಸದ ವಾಲ್ ಪೇಪರ್ಗಳನ್ನು ಕೂದ ಇದಕ್ಕಾಗಿ ಬಳಸಬಹುದು. ನಿಮ್ಮ ಪುಟ್ಟ ಆಫೀಸ್ ವರ್ಕ್ ಸ್ಪೇಸ್ಗೆ ಈ ಸಣ್ಣ ಬದಲಾವಣೆ ದೊಡ್ಡ ಪರಿಣಾಮ ಬೀರುತ್ತದೆ.

ಯಥೇಚ್ಚವಾಗಿ ಸೂರ್ಯನ ಕಿರಣ ಬೀಳುವಂತೆ ವಿನ್ಯಾಸಗೊಳಿಸಿ

ಸೂರ್ಯನ ಕಿರಣ ಇಲ್ಲವೇ ಬೆಳಕು ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಬಿದ್ದರೆ ನಿಮ್ಮ ಮನಸ್ಸು ಹೆಚ್ಚು ಆಕ್ಟೀವ್ ಆಗಿರುತ್ತದೆ. ಈ ಕಾರಣಕ್ಕಾಗಿ ಬೆಳಕು ಚೆನ್ನಾಗಿ ಹರಿಯುವಂತೆ ಸೀಲಿಂಗ್ ಕಿಟಕಿಗಳು, ಸ್ಲೈಡ್ ಮಾಡಬಹುದಾದ ಡೋರ್ಗಳನ್ನು ಅಳವಡಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಅನುಗುಣವಾಗಿ ಗಾಢ ಮತ್ತು ತೆಳು ಬಣ್ಣದ ಕರ್ಟನ್ ಅಳವಡಿಸಿಕೊಳ್ಳಿ.

ಹಸಿರು ಕಂಗೊಳಿಸಲಿ

ದೀರ್ಘಕಾಲ ಕಾಲ ಕೆಲಸ ಮಾಡುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸಲು ನಿಮ್ಮ ಸುತ್ತ ಮುತ್ತಲೂ ಒಳಾಂಗಣದಲ್ಲಿ ಇಡಬಹುದಾದ ಗಿಡಗಳನ್ನು ಇಡಬಹುದು. ಬ್ಯಾಂಬೂ, ಲಕ್ಕಿ ಗಿಡಗಳನ್ನು ಜೋಡಿಸಬಹುದು.

ಸೂಕ್ತ ಫರ್ನೀಚರ್ ಬಳಸಿ

ಬಾಳಿಕೆ ಬರುವಂತಹ ವರ್ಕಿಂಗ್ ಟೇಬಲ್, ಫೈಲ್ಗಳನ್ನು ಇಡಲು ಅನುಕೂಲವಾಗುವಂತಹ ಡ್ರಾಯರ್ಸ್ ಇರಲಿ. ಇನ್ನೂ ಹಾಸಿಗೆ ಮತ್ತು ವಾರ್ಡ್ ರೋಬ್ ಎರಡನ್ನು ಹೊಂದಿರುವ ಸ್ಥಳದ ಕೊರತೆ ನೀಗಿಸುವ ಆಧುನಿಕ ಇಂಟಿರಿಯರ್ ನಿಮ್ಮದಾಗಿರಲಿ.

Related News

spot_img

Revenue Alerts

spot_img

News

spot_img