27.7 C
Bengaluru
Wednesday, July 3, 2024

ಮನೆಯಲ್ಲಿ ಸಾಮಾನ್ಯ ವ್ಯಕ್ತಿ ಎಷ್ಟು ಹಣವನ್ನು ಸಂಗ್ರಹಿಸಿಡಬಹುದು

ಬೆಂಗಳೂರು, ಜ. 16 : ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಣ ಇಟ್ಟುಕೊಳ್ಳುವುದು ಭಾರೀ ಕಷ್ಟವಾಗಿದೆ. ಕಳ್ಳರಿಗಿಂತಲೂ ಜಾರಿ ನಿರ್ದೇಶನಾಲಯಕ್ಕೆ ಉತ್ತರ ಕೊಡಬೇಕಾಗುತ್ತದೆ. ಮನೆಗಳಲ್ಲಿ ಸುಖಾ ಸುಮ್ಮನೆ ಹಣವನ್ನು ಇಟ್ಟುಕೊಳ್ಳುವಂತಿಲ್ಲ. ಅದರಲ್ಲೂ ಮನೆಯಲ್ಲಿರುವ ಹಣಕ್ಕೆ ಸರಿಯಾದ ಲೆಕ್ಕವನ್ನು ತೋರಿಸಬೇಕು. ಆಗೆಲ್ಲಾ ಕಪ್ಪು ಹಣವನ್ನು ಮನೆಗಳಲ್ಲಿ ಇಡುತ್ತಿದ್ದರು. ಈಗ ಸರ್ಕಾರ ನಿಯಮಗಳನ್ನು ಕಠಿಣಗೊಳಿಸಿದ್ದು, ಕಪ್ಪು ಹಣಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕಾಗಿಯೇ ನೋಟ್ ಬ್ಯಾನ್ ಮಾಡಲಾಗಿತ್ತು. ಅಲ್ಲದೇ, ಈಗ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಈ ಹಿಂದೆ ಆದಾಯ ತೆರಿಗೆ, ಇಡಿ, ಸಿಬಿಐನಂತಹ ದೊಡ್ಡ ತನಿಖಾ ಸಂಸ್ಥೆಗಳು ಹಲವೆಡೆ ದಾಳಿ ನಡೆಸಿ ಜನರ ಮನೆಗಳಲ್ಲಿದ್ದ ಅನಾಮಧೇಯ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಂಡಿವೆ. ಯಾವುದೇ ವ್ಯಕ್ತಿ ತನ್ನ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಹಾಗಾದರೆ ಬನ್ನಿ ಮನೆಯಲ್ಲಿ ಎಷ್ಟು ಹಣವನ್ನು ಸಂಗ್ರಹಿಸಿಡಬಹುದು.? ಇದರಿಂದ ಎದುರಿಸಬೇಕಾದ ಕಾನೂನು ಕ್ರಮಗಳೇನು ಎಂದು ತಿಳಿಯೋಣ.

ಸಾಮಾನ್ಯ ವ್ಯಕ್ತಿ ಮನೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಸಂಗ್ರಹಿಸಬಹುದು. ಇದಕ್ಕೆ ಮಿತಿ ಇಲ್ಲ. ಆದರೆ, ಆ ವ್ಯಕ್ತಿಯ ದಿನದ ವಹಿವಾಟು, ಆರ್ಥಿಕ ಸಾಮರ್ಥ್ಯ ಮತ್ತು ಆ ಹಣ ಎಲ್ಲಿಂದ ಬಂತು ಎಂದು ಹೇಳುವುದಕ್ಕೆ ಸಾಕ್ಷಿ ಪುರಾವೆಗಳು ಇರಬೇಕು. ಮನೆಯಲ್ಲಿ ಇರುವ ಪ್ರತೀ ಪೈಸೆಗೂ ಲೆಕ್ಕವಿರಬೇಖು.. ದಾಖಲೆಗಳನ್ನು ಕೊಡುವುದರಲ್ಲಿ ಸೋತರೆ, ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಯ ತರಿಗೆಯ ಪ್ರಕಾರ ಮನೆಯಲ್ಲಿ ಎಷ್ಟು ಹಣವನ್ನು ಬೇಕಿದ್ದರೂ ಇಟ್ಟುಕೊಳ್ಳಬಹುದು. ಆದರೆ ಐಟಿಆರ್‌ ಘೋಷಣೆ ಅತ್ಯಗತ್ಯವಾಗಿದೆ. ಹಣದ ಬಗ್ಗೆ ದಾಖಲೆ ನೀಡದಿದ್ದರೆ, ಹಣವನ್ನು ಆದಾಯ ತೆರಿಗೆ ವಶಪಡಿಸಿಕೊಳ್ಳುತ್ತದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ನಿಯಮಗಳ ಪ್ರಕಾರ, ಒಂದು ಸಲಕ್ಕೆ 50,000ರೂ. ಇಲಲವೇ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಲು ಪ್ರಯಾನ್‌ ಹಾಗೂ ಆಧಾರ್‌ ಕಾರ್ಡ್‌ ಕಡ್ಡಯ. ವಿತ್‌ ಡ್ರಾ ಮಾಡಲು ಕೂಡ ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ತೋರಿಸಬೇಕು. ವಾರ್ಷಿಕವಾಗಿ 20ಲಕ್ಷ ರೂ. ಗಿಂತಲೂ ಅಧಿಕ ಠೇವಣಿಯನ್ನು ಇರಿಸಿದ್ರೆ ಇದಕ್ಕೂ ನೀವು ಕಡ್ಡಾಯವಾಗಿ ಪ್ಯಾನ್ ಹಾಗೂ ಆಧಾರ್ ಕಾರ್ಡ್ ನೀಡಬೇಕು. ವಾರ್ಷಿಕ ನೀವು ಒಂದು ಕೋಟಿಗೂ ಅಧಿಕ ಹಣವನ್ನು ವಿತ್‌ ಡ್ರಾ ಮಾಡಿದರೆ, ಆಗ ಶೇ.2ರಷ್ಟು ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ.

ಅಕ್ರಮ ನಗದು ಪತ್ತೆಯಾದ್ರೆ ಆ ಹಣದ ಶೇ.137ರಷ್ಟ ಅನ್ನು ತೆರಿಗೆಯಾಗಿ ವಿಧಿಸಲಾಗುತ್ತದೆ. ನೀವೇನಾದರೂ 30 ಲಕ್ಷಕ್ಕಿಂತಲೂ ಅಧಿಕ ಮೊತ್ತದ ಆಸ್ತಿ ಖರೀದಿ, ಅಥವಾ ಮಾರಟವನ್ನು ಮಾಡಿದರೆ, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಆಗ ನೀವು ಸರಿಯಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ಮೇಲಿನ ಯಾವುದೇ ವಹಿವಾಟಿನಲ್ಲೂ ದಾಖಲೆ ನೀಡದಿದ್ದರೆ, 20ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ಇನ್ನು ನೀವು 2ಲಕ್ಷ ರೂ.ಗಿಂತಲೂ ಅಧಿಕ ಮೊತ್ತದ ಖರೀದಿ ಮಾಡಿದರೆ, ನಗದು ರೀತಿಯಲ್ಲಿ ಪಾವತಿಸುವಂತಿಲ್ಲ. ಹಾಗೆ ಮಾಡಲು ಇದಕ್ಕೂ ನೀವು ಪ್ಯಾನ್ ಹಾಗೂ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಒಂದು ಸಲಕ್ಕೆ ಒಂದು ಲಕ್ಷ ರೂ. ಗೂ ಮೇಲ್ಪಟ್ಟು ವಹಿವಾಟು ನಡೆಸುವಂತಿಲ್ಲ. ಹಾಗೇನಾದರೂ ಮಾಡಿದೆ, ನೀವು ತನಿಖೆಗೆ ಒಳಪಡುತ್ತೀರಾ. ಇನ್ನು ನೀವು ಒಂದು ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂ.ಕ್ಕಿಂತ ಅಧಿಕ ಹಣವನ್ನು ತೆಗೆದುಕೊಳ್ಳುವಂತಿಲ್ಲ. 20,000ರೂ. ಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ಸಾಲವನ್ನು ಕೂಡ ಮಾಡಬಾರದು. 2,000 ರೂ. ಗಿಂತಲೂ ಹೆಚ್ಚು ಹಣವನ್ನು ದಾನ ಕೂಡ ಮಾಡುವಂತಿಲ್ಲ. ಇದೆಲ್ಲವೂ ತನಿಖೆಗೊಳಪಡುತ್ತವೆ.

Related News

spot_img

Revenue Alerts

spot_img

News

spot_img