#Rental Agreement #Model tenancy Act 2021 #law #facts of Rental Agreement
ಬೆಂಗಳೂರು, ಅ. 30: ಬಾಡಿಗೆ ಕರಾರು ಒಂದು ಲೀಗಲ್ ಡಾಕುಮೆಂಟ್. ಮನೆಯನ್ನು ಬಾಡಿಗೆ ನೀಡುವ ವ್ಯಕ್ತಿ ಹಾಗು ಪಡೆಯುವ ವ್ಯಕ್ತಿಗಳ ನಡುವಿನ ಕರಾರು ಎಂದು ಕರೆಯುತ್ತೇವೆ. ಈ ಬಾಡಿಗೆ ಕರಾರು ಪತ್ರವು ಒಂದು ಮನೆಯ ಬಾಡಿಗೆ ಅವಧಿ, ಷರತ್ತುಗಳು, ಪಾರ್ಟಿಗಳ ಸಹಿ ಹಾಗೂ ಸಾಕ್ಷಿಯನ್ನು ಒಳಗೊಂಡಿರಬೇಕು. ಸಾಮಾನ್ಯವಾಗಿ ಹನ್ನೊಂದು ತಿಂಗಳಿಗೆ ಮಾತ್ರ ಮಾಡಿಸಲಾಗುತ್ತದೆ. ಆದರೆ ಇದನ್ನು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಒಟ್ಟಾರೆಯಾಗಿ ಒಂದು ಮನೆ, ಕಟ್ಟಡವನ್ನು ಬಾಡಿಗೆ ಪಡೆಯುವ ಮುನ್ನ ಅದರ ಕರಾರು ಅಂಶಗಳು ಮತ್ತು ಕಾನೂನು ತಿಳಿಯುವುದು ಅತಿ ಮುಖ್ಯ. ಅದರ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
ಬಾಡಿಗೆ ಕರಾರು: ಬಾಡಿಗೆ ಕರಾರು ಪತ್ರ ಎಂದರೆ ಲೀಗಲ್ ಡಾಕುಮೆಂಟ್. ಇದರಲ್ಲಿ ಬಾಡಿಗೆ ಕೊಡುವ ಮತ್ತು ಪಡೆಯುವ ವ್ಯಕ್ತಿಯ ಸಮ್ಮತಿ ಅತಿಮುಖ್ಯ. ಇದನ್ನು ಮನೆ ಬಾಡಿಗೆ ಕೊಡುವ ಮನೆ ಮಾಲೀಕರ ಸಮ್ಮತಿ ಮೇರೆಗೆ ಮಾಡಿಸಲಾಗುಉತ್ತದೆ. ಬಾಡಿಗೆ ಕರಾರು ಲಿಖಿತವಾಗಿರಬಹುದು, ಅಲಿಖಿತವಾಗಿರಬಹದು. ಸಾಮಾನ್ಯವಾಗಿ ಲಿಖಿತವಾಗಿಯೇ ಬಾಡಿಗೆ ಕರಾರು ಮಾಡಿಸುವುದು ರೂಢಿಯಲ್ಲಿದೆ. ಮನೆ ಬಾಡಿಗೆ ವಿಚಾರದಲ್ಲಿ ಯಾವುದೇ ವಿವಾದ ಉಂಟಾದರೆ ಅದನ್ನು ನ್ಯಾಯ ಸಮ್ಮತವಾಗಿ ಬಗೆ ಹರಿಸಿಕೊಳ್ಳಲು ಬಾಡಿಗೆ ಕರಾರು ಅತಿ ಮುಖ್ಯವಾದುದು. ಬಾಡಿಗೆ ಕರಾರಿನಲ್ಲಿರುವ ಷರತ್ತುಗಳನ್ನು ತಿದ್ದುಪಡಿ ಮಾಡಲು ಇಬ್ಬರುಉ ಪಾರ್ಟಿಗಳ ಸಮ್ಮತಿ ಅತಿ ಮುಖ್ಯ.
Duration of Rental Agreement: ರೆಂಟಲ್ ಅಗ್ರಿಮೆಂಟ್ ಒಂದು ಕಾನೂನು ದಾಖಲೆಯಾಗಿತ್ತು. ಇದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸಾಮಾನ್ಯವಾಗಿ 11 ತಿಂಗಳಿಗೆ ಸೀಮಿತಗೊಳಿಸಿ ಬಾಡಿಗೆ ಕರಾರನ್ನು ನೋಂದಣಿ ಮಾಡಿಸಲಾಗುತ್ತದೆ. ಭಾರತೀಯ ನೋಂದಣಿ ಕಾಯ್ದೆ 1908 ರ ಪ್ರಕಾರ ಹನ್ನೆರಡು ತಿಂಗಳಿಗೆ ಮೇಲ್ಪಟ್ಟ ಬಾಡಿಗೆ ಕರಾರುನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ಅದಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಬೇಕು. ಅದರೆ ಹನ್ನೊಂದು ತಿಂಗಳಿಗೆ ಮಾಡಿಸಿದ್ರೆ ನೋಂದಣಿ ಮಾಡಿಸುವ ಪ್ರಮೇಯ ಬೀಳುವುದಿಲ್ಲ. ಆಗಂತ ಈ 11 ತಿಂಗಳ ಬಾಡಿಗೆ ಕರಾರು ನೋಂದಣಿ ಮಾಡಿಸಿಲ್ಲ ಅಂತ ಕಾನೂನು ಮಾನ್ಯತೆ ಇಲ್ಲ ಅಂತ ಅರ್ಥವಲ್ಲ. ಒಂದು ವೇಳೆ ಪಾರ್ಟಿಗಳು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿದಲ್ಲಿ 12 ತಿಂಗಳಿಗೆ ಮೇಲ್ಪಟ್ಟು ಎಷ್ಟು ತಿಂಗಳಿಗೆ ಬೇಕಾದರೂ ಮಾಡಿಸಬಹುದು.
ಬಾಡಿಗೆ ಕರಾರು ನೋಂದಣಿ ಪ್ರಕ್ರಿಯೆ: ಬಾಡಿಗೆ ಕರಾರು ನೋಂದಣಿ ಕಡ್ಡಾಯವಲ್ಲ. ಆದರೆ, ನೊಂದಣಿಯಾಗದ ದಾಖಲೆಗಳನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ. ಹೀಗಾಗಿ ಬಾಡಿಗೆ ಕರಾರನ್ನು ಸಹ ನೋಂದಣಿ ಮಾಡುವುದು ಒಳಿತು ಎಂಬುದು ಕಾನೂನು ತಜ್ಞರ ಅಭಿಮತ.
ಬಾಡಿಗೆ ಕರಾರನ್ನು ಸಮೀಪದ ಅಥವಾ ವ್ಯಾಪ್ತಿಗೆ ಬರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬಹುದು. ನೋಂದಣಿ ಮುನ್ನ ಬಾಡಿಗೆ ಕರಾರಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಡ್ಡಾಯವಾಗಿ ಪಾವತಿಸಬೇಕು. ಬಾಡಿಗೆ ಕರಾರು ಅಥವಾ ಲೀಸ್ ಕರಾರನ್ನು ಮಾಡಿಕೊಂಡ ದಿನಾಂಕದಿಂದ ನಾಲ್ಕು ತಿಂಗಳ ಒಳಗೆ ನೋಂದಣಿ ಮಾಡಿಸಬೇಕು. ಆನಂತರ ಮಾಡಿಸಲು ಸಾಧ್ಯವಿಲ್ಲ. ಮಾಡಿಸುವುದಿದ್ದರೆ ದಂಡ ಪಾವತಿಸಿ ಜಿಲ್ಲಾ ನೋಂದಣಾಧಿಕಾರಿಗಳಿಂದ ನೋಂದಣಿ ಮಾಡಿಸಲು ಅವಕಾಶವಿದೆ. ಒಂದು ಬಾಡಿಗೆ ಕರಾರು ಅಥವಾ ಲೀಸ್ ಕರಾರು ಅವಧಿ ಮುಗಿದ ಬಳಿಕ ಮತ್ತೊಂದನ್ನು ಹೊಸದಾಗಿ ಮಾಡಿಸಬೇಕು. ಹಳೆಯದ್ದೇ ಕರಾರು ಅನ್ವಯ ಆಗುವುದಿಲ್ಲ. ಬಾಡಿಗೆ ಕರಾರು ನೋಂದಣಿ ವೇಳೆ ಕಡ್ಡಾಯವಾಗಿ ಇಬ್ಬರು ಪಾರ್ಟಿಗಳು ಹಾಗೂ ಇಬ್ಬರು ಸಾಕ್ಷಿಗಳ ಸಮ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಾಜರಾಗಿ ನೋಂದಣಿ ಪ್ರಕ್ರಿಯೆ ಮಾಡಬೇಕು.
Documents for rental agreement : ಬಾಡಿಗೆ ಕರಾರು ಪತ್ರ ನೋಂದಣಿ ಮಾಡಿಸಲು ಈ ಕೆಳಗಿನ ದಾಖಲೆಗಳು ಬೇಕು. ಬಾಡಿಗೆ ಕೊಡುತ್ತಿರುವ ಮನೆ, ಕಟ್ಟಡದ ಮಾಲಿಕತ್ವ ಕುರಿತ ದಾಖಲೆಗಳು ( ಸೇಲ್ ಡೀಡ್, ಖಾತಾ, ತೆರಿಗೆ ಪಾವತಿ ರಿಶೀದಿ ) ಒದಗಿಸಬೇಕು.
*ಆಸ್ತಿಗೆ ಸಂಬಂಧಿಸಿದ ತೆರಿಗೆ ಪಾವತಿ ರಶೀದಿಗಳು.
*ವಿಳಾಸ ಗುರುತಿನ ಚೀಟಿಗಳು( ಬಾಡಿಗೆದಾರ ಮತ್ತು ಮಾಲೀಕನದ್ದು)
ಬಾಡಿಗೆ ಮನೆಯ ಷೆಡೂಲ್ಡ್ ವಿವರ.
ಬಾಡಿಗೆ ಕರಾರಿನ ಕಾನೂನು ಅಂಶಗಳು: ಯಾವುದೇ ಬಾಡಿಗೆ ಮನೆ ಕರಾರು ಮಾಡಿಸಿಕೊಳ್ಳುವಾಗ ಅದರಲ್ಲಿ ವಾಸ ಮಾಡುವ ಬಾಡಿಗೆದಾರರ ವಿವರ, ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ಧಾರಿಯನ್ನು ಬಾಡಿಗೆದಾರನ ಮೇಲೆ ವಹಿಸಬೇಕು. ಒಂದು ವೇಳೆ ಮನೆ ಆಕಸ್ಮಿಕ ಖಾಲಿ ಮಾಡುವಂತಿದ್ದರೆ ಇನ್ನಿತರೆ ವಿಷಯಗಳ ಬಗ್ಗೆ ಬಾಡಿಗೆ ಕರಾರಿನಲ್ಲಿ ಷರತ್ತುಗಳನ್ನು ನಮೂದಿಸಬೇಕು.
ಬಾಡಿಗೆ ಅವಧಿ: ಬಾಡಿಗೆ ಕರಾರಿನಲ್ಲಿ ಮನೆ ಬಾಡಿಗೆ ಅವಧಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಹನ್ನೊಂದು ತಿಂಗಳಿಗೆ ಆಗಿದ್ದರೆ ಅದನ್ನು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಆದರ ಅವಧಿ ಮೇಲ್ಪಟ್ಟಿದ್ದರೆ ನೋಂದಣಿ ಮಾಡಿಸಬೇಕು. ಅವಧಿ ಮುಗಿದ ಬಳಿಕ ಬಾಡಿಗೆದಾರ ಮುಂದುವರೆದಲ್ಲಿ ಆ ಕುರಿತ ಅಂಶಗಳನ್ನು ಕರಾರಿನಲ್ಲಿ ತಪ್ಪದೇ ಉಲ್ಲೇಖಿಸಬೇಕು.
ಬಾಡಿಗೆ ಮೊತ್ತ: ಬಾಡಿಗೆ ಕರಾರಿನಲ್ಲಿ ಮನೆ ಬಾಡಿಗೆಯ ಬಗ್ಗೆ ಕರಾರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಬಾಡಿಗೆ ಪಾವತಿ ವಿಧಾನ, ಮೊತ್ತ, ತಡವಾಗಿ ಪಾವತಿಸಿದರೆ ದಂಡ ಇನ್ನಿತರ ಸಂಗತಿಗಳನ್ನು ಕರಾರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಒಂದು ವೇಳೆ ವಿವಾದ ಉಂಟಾದಲ್ಲಿ ಇಂತಹ ಷರತ್ತುಗಳು ಬಾಡಿಗೆದಾರ ಅಥವಾ ಮಾಲೀಕನ ಹಿತ ಕಾಯಲು ಸಹಾಯವಾಗುತ್ತದೆ. ಮುಂಗಡ ಹಣ ಪಾವತಿ ವಿಚಾರದಲ್ಲಿ ವಿವಾದ ಉಂಟಾದರೆ ಅಂತಹ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಲು ಈ ಕರಾರು ಅನುಕೂಲವಾಗಲಿದೆ.
ನಿರ್ವಹಣಾ ವೆಚ್ಚ : ಮನೆಯ ಬಾಡಿಗೆ ನೀಡಿದಲ್ಲಿ ಅದರ ನಿರ್ವಹಣಾ ವೆಚ್ಚದ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಬೇಕು. ವಿದ್ಯುತ್ ಬಿಲ್, ನೀರಿನ ಬಿಲ್, ಕಟ್ಟಡಕ್ಕೆ ಹಾನಿಯಾಗದಂತೆ ಕಾಪಾಡುವ ಬಗ್ಗೆ ತಗಲುವ ವೆಚ್ಚಗಳನ್ನು ಯಾರು ಭರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಕರಾರಿನಲ್ಲಿ ಹೇಳಿರಬೇಕು.
ಮುಂಗಡ ಭದ್ರತೆ ಹಣ: ಮನೆಯ ಬಾಡಿಗೆ ಕರಾರು ಮಾಡಿಸಿಕೊಂಡಲ್ಲಿ ಮನೆ ಮಾಲೀಕನಿಗೆ ಭದ್ರತೆ ರೂಪದಲ್ಲಿ ಕೊಡುವ ಹಣವನ್ನು ಕರಾರಿನಲ್ಲಿ ಉಲ್ಲೇಖಿಸಬೇಕು. ಇದಕ್ಕೆ ಸಮ್ಮತಿಸಿ ಇಬ್ಬರೂ ಸಹಿ ಮಾಡಿರಬೇಕು. ಇದರಿಂದ ಬಾಡಿಗೆ ಮನೆ ಖಾಲಿ ಮಾಡುವಾಗ ಉಂಟಾಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನೆರವಾಗುತ್ತವೆ.
Terms and conditions: ಬಾಡಿಗೆ ಕರಾರಿನಲ್ಲಿ ಕಡ್ಡಾಯವಾಗಿ ಷರತ್ತುಗಳನ್ನು ವಿಧಿಸಿರಬೇಕು. ಮನೆಗೆ ಸಾಕು ಪ್ರಾಣಿಗಳಿಗೆ ಅವಕಾಶ, ಬಾಡಿಗೆ ಅವಧಿ, ಕಟ್ಟಡ ಸುರಕ್ಷತೆ ಕುರಿತ ಷರತ್ತುಗಳನ್ನು ವಿಧಿಸಬೇಕು.
ಬಾಡಿಗೆ ಕರಾರು ಮರು ನವೀಕರಣ: ಒಂದು ಬಾಡಿಗೆ ಕರಾರು ಅವಧಿ ಮುಗಿದ ಬಳಿಕ ಅದನ್ನು ಹೊಸದಾಗಿ ನವೀಕರಿಸಬೇಕು. ಆದರೆ ಬಾಡಿಗೆ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಮಾಲೀಕನಿಗೆ ತಿಳಿಸಿರಬೇಕು.
ಆಸ್ತಿಗೆ ಹೊಂದಿರುವ ವಸ್ತುಗಳು: ಬಾಡಿಗೆ ಕರಾರಿನಲ್ಲಿ ಒಂದು ಮನೆಗೆ ಸಂಬಂಧಪಟ್ಟಂತೆ, ಆ ಮನೆಯಲ್ಲಿರುವ ಫ್ಯಾನ್, ಟೇಬಲ್, ವಾರ್ಡ್ ರೋಬ್ ಇನ್ನಿತರ ಸೌಕರ್ಯ ಹಾಗೂ ಉಪಕರಣಗಳನ್ನು ವಿವರಿಸಿರಬೇಕು. ಅವನ್ನು ಇರುವ ಸುರಕ್ಷಿತ ಸ್ಥಿತಿಯಲ್ಲಿಯೇ ಮನೆ ಖಾಲಿ ಮಾಡುವಾಗ ಬಾಡಿಗೆದಾರ ಅವನ್ನು ವರ್ಗಾಯಿಸಬೇಕು. ಹೀಗಾಗಿ ಕಡ್ಡಾಯವಾಗಿ ಮನೆಗೆ ಹೊಂದಿಕೊಂಡಿರುವ ವಸ್ತುಗಳನ್ನು ಕರಾರಿನಲ್ಲಿ ಉಲ್ಲೇಖಿಸಿರಬೇಕು.
ಕರಾರು ರದ್ದು ಷರತ್ತುಗಳು: ಒಂದು ವೇಳೆ ಬಾಡಿಗೆ ಕರಾರನ್ನು ರದ್ದು ಪಡಿಸುವ ಸಂದರ್ಭದಲ್ಲಿ ಮಾಲೀಕ ಮತ್ತು ಬಾಡಿಗೆದಾರ ಪಾಲಿಸಬೇಕಾದ ನಿಯಮಗಳನ್ನು ಕಡ್ಡಾಯವಾಗಿ ಕರಾರಿನಲ್ಲಿ ಉಲ್ಲೇಖಿಸಬೇಕು.
ದಿನಾಂಕ ಮತ್ತು ಸಹಿ : ಬಾಡಿಗೆ ಕರಾರು ಪತ್ರದಲ್ಲಿ ಮಾಲೀಕ ಮತ್ತು ಬಾಡಿಗೆದಾರ ಕಡ್ಡಾಯವಾಗಿ ಸಹಿ ಮಾಡಬೇಕು. ಬಾಡಿಗೆ ದಿನಾಂಕವನ್ನು ಕಡ್ಡಾಯವಾಗಿ ಕರಾರಿನಲ್ಲಿ ಉಲ್ಲೇಖಿಸಬೇಕು. ಯಾಕೆಂದರೆ ಭವಿಷ್ಯದಲ್ಲಿ ವಿವಾದ ಉಂಟಾದರೆ, ಕರಾರು ಪತ್ರಕ್ಕೆ ಸಹಿ ಇಲ್ಲದಿದ್ದರೆ ಅಂತಹ ಕರಾರು ಪತ್ರಗಳಿಗೆ ನ್ಯಾಯಾಲಯ ಮಾನ್ಯತೆ ನೀಡುವುದಿಲ್ಲ. ಅಲ್ಲದೇ ಬಾಡಿಗೆ ಕರಾರಿನ ಷರತ್ತುಗಳ ಬಗ್ಗೆ ಮಾಲೀಕ ಮತ್ತು ಬಾಡಿಗೆದಾರ ಓದಿ ತಿಳಿದುಕೊಳ್ಳಬೇಕು.
ಪೊಲೀಸ್ ಪರಿಶೀಲನೆ: ಭದ್ರತೆ ದುಷ್ಟಿಯಿಂದ ಮನೆ ಬಾಡಿಗೆದಾರರನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಬಹುದು. ಬಾಡಿಗೆದಾರ ಹಿಂಬಾಗಿಲು ಮೂಲಕ ಯಾವುದೇ ದೇಶದ್ರೋಹಿ ಕೆಲಸ ಮಾಡುವ ಸಂಭವ ಇರುವುದರಿಂದ ಬಾಡಿಗೆದಾರನ ಬಗ್ಗೆ ಮಾಲೀಕ ಕರಾರು ಒಡಂಬಡಿಕೆಯನ್ನು ಪೊಲೀಸರಿಗೆ ಕೊಟ್ಟು ಬಾಡಿಗೆದಾರನ ಹಿನ್ನೆಲೆ ಪರಿಶೀಲಿಸಬಹುದು.
ಬಾಡಿಗೆ ಕರಾರಿನಲ್ಲಿ ಸಾಮನ್ಯರು ಮಾಡುವ ತಪ್ಪುಗಳು: ಬಾಡಿಗೆದಾರನನನ್ಉ ಖಾಲಿ ಮಾಡಿಸುವ ಷರತ್ತುಗಳನ್ನು ಹಾಕಿರಬಾರದು. ಬಾಡಿಗೆ ಮನೆಯಿಂದ ಬಾಡಿಗೆದಾರನನ್ನು ಓಡಿಸಲು ಕಾಲವಧಿ ನಿಗದಿ ಮಾಡಬಾರದು. ಕಡ್ಡಾಯವಾಗಿ ಬಾಡಿಗೆದಾರನನ್ನು ತೆರವುಗೊಳಿಸಲು ನೋಟಿಸ್ ಅವಧಿ ಉಲ್ಲೇಖಿಸಬೇಕು,
ಬಾಡಿಗೆ ಹಣ, ಪಾವತಿಸುವ ದಿನ, ರಿಪೇರಿ ವೆಚ್ಚಗಳ ಬಗ್ಗೆ ಸರಿಯಾಗಿ ಉಲ್ಲೇಖಿಸಬೇಕು. ಅನಾವಶ್ಯಕ ಅಂಶಗಳನ್ನು ಕರಾರಿನಲ್ಲಿ ಉಲ್ಲೇಖಿಸಬಾರದು.ಮಾಡಲ್ ಟೆನೆನ್ಸಿ ಆಕ್ಟ್ 2021 ರ ಪ್ರಕಾರ ಕೇಂದ್ರ ಸರ್ಕಾರ ಬಾಡಿಗೆ ಕರಾರು ಫಾರ್ಮೆಟ್ ರಚಿಸಿದ್ದು ಅದನ್ನು ಇಲ್ಲಿ ನೀಡಲಾಗಿದೆ.