25.6 C
Bengaluru
Monday, December 23, 2024

Credit card ಬಿಲ್ ಪಾವತಿಸದಿದ್ದರೆ ಏನಾಗುತ್ತದೆ ? ರೀಕವರಿ ಏಜೆಂಟರು ಬಂದ್ರೆ ಏನು ಮಾಡಬೇಕು ಕಾನೂನು ಮಾಹಿತಿ ಓದಿ!

#Credit Card #Credit Card bill Default #RBI, #Law
ಬೆಂಗಳೂರು, ನ. 27: ಭಾರತದಲ್ಲಿ ಸಹ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿಂದೆ ವಿದೇಶಗಳಲ್ಲಿ ಜನರು ಹೆಚ್ಚು ಕ್ರೆಡಿಟ್ ಕಾರ್ಡ್‌ ಬಳಕೆ ಮಾಡುತ್ತಿದ್ದರು. ಮಧ್ಯಮ ವರ್ಗದ ಜನ ತಮ್ಮ ದೈನಂದಿನ ಅಗತ್ಯತೆಗಳನ್ನು ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಪೂರೈಸಿಕೊಳ್ಳುತ್ತಾರೆ. ಒಂದು ವೇಳೆ ಕ್ರೆಡಿಟ್‌ ಕಾರ್ಡ್‌ ಬಳಸಿ ವೆಚ್ಚ ಮಾಡಿದ ಬಳಿಕ ಅದರ ಮೊತ್ತ ಪಾವತಿ ಮಾಡದಿದ್ದರೆ ಏನಾಗುತ್ತದೆ ? ಕ್ರೆಡಿಟ್‌ ಕಾರ್ಡ್ ಬಿಲ್ ಪಾವತಿಸದವರ ವಿರುದ್ಧ ಏನೆಲ್ಲಾ ಕಾನೂನು ಕ್ರಮ ಜರುಗಿಸುತ್ತಾರೆ ಎಂಬುದರ ಸಂಪೂರ್ಣ ಕಾನೂನು ವಿವರ ಹಾಗೂ ಈ ವಿಚಾರದಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪಿನ ವಿವರ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದು ಭಾರತದಲ್ಲಿ ಈಗ ಸರ್ವೆ ಸಾಮಾನ್ಯ. ಕ್ರೆಡಿಟ್ ಕಾರ್ಡ್‌ ನೀಡುವ ನಿಯಮಗಳನ್ನು ಸಡಿಲ ಮಾಡಿ ಬ್ಯಾಂಕುಗಳು ತಮ್ಮ ಮನಸೋ ಇಚ್ಛೆ ಕೊಟ್ಟಿವೆ. ಹೀಗಾಗಿ ಜನರು ಬಡ್ಡಿ ರಹಿತವಾಗಿ ಹಣ ಸಾಲ ಸಿಗುತ್ತದೆ ಎಂಬ ಭಾವನೆಯಲ್ಲಿ ತೆಗೆದುಕೊಂಡು ಬಳಕೆ ಮಾಡುತ್ತಾರೆ. ಹಣ ಜೇಬಲ್ಲಿ ಇದ್ದಷ್ಟೂ ವೆಚ್ಚ. ಅದೇ ರೀತಿ ಕ್ರೆಡಿಟ್ ಕಾರ್ಡ್ ಇದ್ದಷ್ಟೂ ಜನ ಬಳಸುವುದು ಜಾಸ್ತಿ. ಒಮ್ಮೆ ವ್ಯಯಿಸಿ ಪಾವತಿ ಮಾಡಲು ಅಗದಿದ್ದರೆ ಆಗ ಕಷ್ಟಗಳು ಎದುರಾಗುತ್ತವೆ. ಕ್ರೆಡಿಟ್ ಕಾರ್ಡ್‌ ಸಾಲ ವಸೂಲಿಗೆ ಬ್ಯಾಂಕುಗಳು ಒಂದು ಹಾದಿ ಹಿಡಿಯುವುದಿಲ್ಲ. ತೋಳ್ಬಲ- ಕಾನೂನು ಬಲ ಎಲ್ಲವನ್ನೂ ಪ್ರಯೋಗಿಸುತ್ತವೆ.

Crdit card default: ಒಂದಷ್ಟು ಅವಧಿಗೆ ಸಾಲದ ರೂಪದಲ್ಲಿ ಬ್ಯಾಂಕ್‌ ತನ್ನ ಗ್ರಾಹಕರ ಆದಾಯದ ಮೂಲ ನೋಡಿ ಕ್ರೆಡಿಟ್ ಕಾರ್ಡ್‌ ನೀಡುತ್ತದೆ. ಅಲ್ಪಾವಧಿ ( ತಿಂಗಳಿಗೆ ) ಸಾಲ ನೀಡುತ್ತದೆ. ಕಾರ್ಡ್‌ ಬಳಕೆ ಮಾಡಿ ಗ್ರಾಹಕರು ಬ್ಯಾಂಕ್ ನೀಡಿರುವ ಸಾಲದ ಮಿತಿಯನ್ನು ವ್ಯಯಿಸಿ ವಹಿವಾಟು ನಡೆಸಬಹುದು. ನಿಗದಿತ ದಿನಾಂಕದಿಂದ 20 ರಿಂದ 30 ದಿನದ ಒಳಗೆ ಕ್ರೆಡಿಟ್ ಕಾರ್ಡ್‌ ಸಲವನ್ನು ಗ್ರಾಹಕರು ಪಾವತಿಸಬೇಕು. ಸಾಲ ಪಾವತಿಸದಿದ್ದರೆ ಡೀಫಾಲ್ಟ್‌ ಸಮಸ್ಯೆ ಎದುರಾಗುತ್ತದೆ. ಸಾಲದ ಮೊತ್ತ ವಸೂಲಿ ಮಾಡಲು ಬ್ಯಾಂಕ್‌ಗೆ ಹಕ್ಕು ಇರುತ್ತದೆ.

Law and Credit card Bill defalters in India

Late Pament Fee: ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಿಲ್ ನಿಗದಿತ ದಿನಾಂಕದಂದು ಪಾವತಿಸದಿದ್ದರೆ ಮೊದಲು ಬ್ಯಾಂಕುಗಳು ವಿಧಿಸುದು ಲೇಟ್‌ ಪೇಮೆಂಟ್‌ ಚಾರ್ಜ್‌. ಈ ಶುಲ್ಕ ಸಾಲದ ಮೊತ್ತಕ್ಕೆ ಅನುಗುಣವಾಗಿ ವಿಧಿಸಲಾಗುತ್ತದೆ.

ಹೆಚ್ಚುವರಿ ಬಡ್ಡಿ ಶುಲ್ಕ: ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ನಗದು ಪಡೆದುಕೊಂಡರೆ ಶೇ. 12 ರಿಂದ 24 ರಷ್ಟು ಬಡ್ಡಿ ದರ ವಿಧಿಸುತ್ತವೆ. ಒಂದು ವೇಳೆ ಕಾಲಮಿತಿಯಲ್ಲಿಕ್ರೆಡಿಟ್ ಕಾರ್ಡ್‌ ಬಿಲ್ ಪಾವತಿಸದಿದ್ದರೆ ಹೆಚ್ಚುವರಿ ಬಡ್ಡಿಯನ್ನು ಬ್ಯಾಂಕುಗಳು ವಿಧಿಸಿ ವಸೂಲಿ ಮಾಡುತ್ತವೆ. ವಾರ್ಷಿಕ ಶೇ. 40 ಕ್ಕಿಂತಲೂ ಹೆಚ್ಚು ಬಡ್ಡಿ ದರ ವಿಧಿಸುತ್ತವೆ.

Law and Credit card Bill defalters in India 
ಕ್ರೆಡಿಟ್ ಸ್ಕೋರ್‌ : ಬ್ಯಾಂಕಿನಲ್ಲಿ ವಹಿವಾಟು ನಡೆಸುವ ಗ್ರಾಹಕರ ವಹಿವಾಟಿನ ಇತಿಹಾಸವನ್ನು ಸಂಗ್ರಹಿಸುತ್ತವೆ. ಅದರ ಆಧಾರದ ಮೇಲೆಯೇ ವೈಯಕ್ತಿಕ ಸಾಲ, ಗೃಹ ಸಾಲ ಹಾಗೂ ವಾಹನ ಸಾಲ ನೀಡುತ್ತವೆ. ಸಾಲ ನೀಡುವಾಗ ಕ್ರೆಡಿಟ್‌ ಸ್ಕೋರ್‌ ನೋಡುತ್ತವೆ ( CIBIL Score) . ಕ್ರೆಡಿಟ್ ಕಾರ್ಡ್ ಸಾಳ ಬಡ್ಡಿ, ಹೆಚ್ಚುವರಿ ಬಡ್ಡಿ ಪಾವತಿ ಮಾಡದಿದ್ದ ಪಕ್ಷದಲ್ಲಿ ಬ್ಯಾಂಕುಗಳ ಆ ಗ್ರಾಹಕನ ಕ್ರೆಡಿಟ್ ಸ್ಕೋರ್‌ ಕಡಿಮೆ ಮಾಡಿಸುತ್ತವೆ. ಇದು ಭವಿಷ್ಯದಲ್ಲಿ ಗ್ರಾಹಕ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಮಸ್ಯೆ ಎದುರಾಗುತ್ತದೆ.

Blocking of Credit Card: ಕ್ರೆಡಿಟ್ ಕಾರ್ಡ್‌ ಸಾಲ ತೀರಿಸದಿದ್ದ ಪಕ್ಷದಲ್ಲಿ ಬ್ಯಾಂಕುಗಳು ಗ್ರಾಹಕರ ್ರೆಡಿಟ್ ಕಾರ್ಡ್‌ ಬ್ಲಾಕ್ ಮಾಡಿ ಕ್ರಮ ಜರುಗಿಸುತ್ತವೆ. ಕಾರ್ಡ್‌ ಬಳಕೆ ಮಾಡದಂತೆ ಕ್ರಮ ಜರುಗಿಸುತ್ತವೆ.

ಆಸ್ತಿ ಜಪ್ತಿ: ಕ್ರೆಡಿಟ್‌ ಕಾರ್ಡ್‌ ಸಾಲ ತೀರಿಸದಿದ್ದ ಪಕ್ಷದಲ್ಲಿ ಕೆಲವೊಂದು ಪ್ರಕರಣದಲ್ಲಿ ಸಾಲ ಪಡೆದವರ ಹೆಸರಿನಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಿ ಸಾಲ ರೀಕವರಿ ಮಾಡುತ್ತವೆ. ಕ್ರೆಡಿಟ್ ಕಾರ್ಡ್‌ ನೀಡುವಾಗ ವಿಧಿಸುವ ಷರತ್ತುಗಳಲ್ಲಿ ಈ ಅಂಶ ಉಲ್ಲೇಖಿಸಿರುತ್ತಾರೆ. ಕಾರ್ಡ್‌ ಪಡೆಯುವಾಗ ಈ ವಿಚಾರ ಹೇಳಿರುವುದಿಲ್ಲ. ಸಾಲ ಕಟ್ಟದಿದ್ದ ಪಕ್ಷದಲ್ಲಿ ಈ ವಿಚಾರ ಹೇಳಿ ಆಸ್ತಿ ಜಪ್ತಿ ಮಾಡಿಕೊಳ್ಳುತ್ತವೆ.

ಕಾನೂನು ಕ್ರಮ: ಈ ಮೇಲಿನ ಕ್ರಮಗಳಿಂದ ಸಾಲ ವಸೂಲಿ ಮಾಡಲು ಸಾಧ್ಯವಾಗದಿದ್ದರೆ ಬ್ಯಾಂಕುಗಳು ಕ್ರೆಡಿಟ್‌ ಕಾರ್ಡ್‌ ಸಾಲ ರೀಕವರಿಗೆ ಕಾನೂನು ಮೂಲಕ ವಸೂಲಿ ಮಾಡಲು ಮುಂದಾಗುತ್ತವೆ. ಬ್ಯಾಂಕು ಇರುವ ಸಿವಿಲ್ ಕೋರ್ಟ್‌ ವ್ಯಾಪ್ತಿಯಲ್ಲಿ ಕ್ರೆಡಿಟ್ ಕಾರ್ಡ್‌ ಸಾಲ ಕೊಡದವರ ವಿರುದ್ಧ ದಾವೆಗಳನ್ನು ನೀಡುತ್ತವೆ. ವಂಚನೆ ಮಾಡುವ ಉದ್ದೇಶದಿಂದ ಎಂದೇ ದಾವೆ ಹೂಡುತ್ತವೆ. ಆದರೆ ವಂಚಿಸುವ ಉದ್ದೇಶದಿಂದ ಕ್ರೆಡಿಟ್ ಕಾರ್ಡ್‌ ಸಾಲ ಪಾವತಿ ಮಾಡಿಲ್ಲ ಎಂದು ಸಾಬೀತು ಪಡಿಸುವುದು ಬ್ಯಾಂಕುಗಳ ಪಾಲಿಗೆ ತುಂಬಾ ಕಷ್ಟಕರವಾಗುತ್ತದೆ.
ಏಜೆಂಟರ ಮೂಲಕ ರೀಕವರಿ: ಕ್ರೆಡಿಟ್ ಕಾರ್ಡ್‌ ಸಾಲ ವಸೂಲಿಗಾಗಿ ಬ್ಯಾಂಕುಗಳು ರೀಕವರಿ ಏಜೆಂಟ್‌ ಗಳ ಹೆಸರಿನಲ್ಲಿ ಗೂಂಡಾಗಳನ್ನೇ ನೇಮಿಸಿಕೊಂಡಿರುತ್ತವೆ. ರೀಕವರಿಯಾದ ಸಾಲದಲ್ಲಿ ಶೇ. ಇಂತಿಷ್ಟು ಮೊತ್ತವನ್ನು ಪಾವತಿಸುವ ಗುತ್ತಿಗೆ ಆಧಾರದ ಮೇಲೆ ಈ ಕ್ರಮ ಜರುಗಿಸುತ್ತವೆ. ಸಾಲ ನೀಡದಿದ್ದವರನ್ನು ಅಡ್ಡ ಹಾಕಿ ಹೆದರಿಸಿ ವಸೂಲಿ ಮಾಡುವ ಕಾರ್ಯದಲ್ಲಿ ಬ್ಯಾಂಕುಗಳು ತೊಡಗಿವೆ. ಇದು ಮೇಲ್ನೋಟಕ್ಕೆ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬ್ಯಾಂಕ್ ರೀಕವರಿ ಏಜೆಂಟರು ತಮ್ಮ ಗೂಂಡಾಗಿರಿಯಿಂದ ಅನೇಕ ಮುಗ್ಧರಿಂದ ಸಾಲ ವಸೂಲಿ ಮಾಡುವುದು ಸರ್ವೆ ಸಾಮಾನ್ಯವಾಗಿದೆ.

ಕ್ರೆಡಿಟ್ ಕಾರ್ಡ್‌ ಸಾಲ ರೀಕವರಿ ಮತ್ತು ಕಾನೂನು ಅಂಶಗಳು: ಕ್ರೆಡಿಟ್‌ ಕಾರ್ಡ್ ಸಾಲವನ್ನು ಸಹ ಸಾಲ ಎಂದೇ ಪರಿಗಣಿಸಿ,, ಸಾಲ ವಸೂಲಿಗೆ ಬ್ಯಾಂಕುಗಳು ಅನುಸರಿಸುವ ವಿಧಾನವನ್ನೇ ಪಾಲಿಸುತ್ತವೆ. ಚೆಕ್‌ ನೀಡಿ ಸಾಲ ತೀರಿಸಿದ ಸಂದರ್ಭದಲ್ಲಿ ಚೆಕ್‌ ಬೌನ್ಸ್‌ ಆಗಿದ್ದರೆ ಚೆಕ್ Negotiable istruments Act 1881 sec 138 ರ ಅಡಿಯಲ್ಲಿ ಬ್ಯಾಂಕುಗಳು ಕ್ರಿಮಿನಲ್ ದಾವೆ ಹೂಡುತ್ತವೆ. ಎಸ್‌ಬಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಸಾಲ ತೀರಿಸದ 19000 ಗ್ರಾಹಕರ ವಿರುದ್ಧ ದಾವೆ ಹೂಡಿದೆ.

ಆರ್‌ಬಿಐ ಮಾರ್ಗಸೂಚಿ: ಕ್ರೆಡಿಟ್‌ ಕಾರ್ಡ್‌ ಸಾಲ ರೀಕವರಿ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2011 ರಲ್ಲಿ ಮಾಸ್ಟರ್ ಮಾರ್ಗಸೂಚಿಗಳನ್ನು ನೀಡಿದೆ. ಇದರಲ್ಲಿ ಕ್ರೆಡಿಟ್‌ ಕಾರ್ಡ್‌ ಸಾಲ ವಸೂಲಿಯ ನೀತಿ ನಿಯಮಗಳನ್ನು ಉಲ್ಲೇಖಿಸಿದೆ. ಅದರ ಪ್ರಕಾರ ಸಾಲ ತೀರಿಸದ ಗ್ರಾಹಕರ ವಿವರವನ್ನು ಕ್ರೆಇಟ್‌ ಇನ್‌ಫರ್ಮೇಷನ್ ಕಂಪನಿ ( CIBIL ) ನಲ್ಲಿ ನಮೂದಿಸಿ ಗ್ರಾಹಕರನಿಗೆ ಬ್ಯಾಂಕುಗಳಲ್ಲಿ ಸಾಲ ಸಿಗದಂತೆ ಕ್ರಮ ಜರುಗಿಸುತ್ತದೆ.
ಕ್ರೆಡಿಟ್‌ ಇನ್‌ಫರ್ಮೇಷನ್ ಕಂಪನಿ: ಕ್ರೆಡಿಟ್ ಇನ್‌ಫರ್ಮೇಷನ್ ಕಂಪನಿ ಆರ್‌ಬಿಐನಿಂದ ಪರವಾನಗಿ ಪಡೆದಿದೆ. ಇದು ಗ್ರಾಹಕರ ಸಾಲ ಪಡೆದು ತೀರಿಸಿದ ಬಗ್ಗೆ ಮಾಹಿತಿ ನಮೂದಿಸುತ್ತದೆ. ಇದು ವೈಯಕ್ತಿಕವಾಗಿ ವ್ಯಕ್ತಿಗಳ ವಿವರವನ್ನು ನಮೂದಿಸಿ, ಸಾಲ ಮರು ಪಾವತಿ ಮಾಡದಿದ್ದವರ ಸಿಬಿಲ್ ಸ್ಕೋರ್‌ ಕಡಿಮೆ ಮಾಡುತ್ತದೆ. ಈ ಸಂಸ್ಥೆ ನೀಡುವ ಸ್ಕೋರ್ ಆಧರಿಸಿ ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವ ಬಗ್ಗೆ ನೀಡದಿರುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತವೆ. ಬಹುತೇಕರು ಸಾಲ ಪಾವತಿಸದೇ ಸಿಬಿಲ್ ಸ್ಕೋರ್ ಕಡಿಮೆಯಾಗಿ ಸಾಲ ಪಡೆಯಲಾಗದೇ ಪರದಾಡಿರುವ ಪ್ರಸಂಗಗಳು ತಮ್ಮ ಅನುಭವಕ್ಕೆ ಬಂದಿರುತ್ತದೆ ಅಲ್ಲವೇ ?

Credit card Case study: ICICI Bank ಮತ್ತು ಪ್ರಕಾಶ್‌ ಕೌರ್ ಪ್ರಕರಣದಲ್ಲಿ ಅಲಹಬಾದ್ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸಾಲ ಪಾವತಿಸದ ಪ್ರಕಾಶ್‌ ಕೌರ್ ಅವರ ವಾಹನವನ್ನು ಬ್ಯಾಂಕಿನ ಏಜೆಂಟರು ಅಕ್ರಮವಾಗಿ ಜಪ್ತಿ ಮಾಡಿದ್ದರು. ಪ್ರಕಾಶ್‌ ಕೌರ್ ಐಸಿಐಸಿಐ ಬ್ಯಾಂಕಿನಲ್ಲಿ ಸಾಲ ಪಡೆದು ಟ್ರಕ್ ಖರೀದಿ ಮಾಡಿದ್ದರು. ಆದರೆ ತಿಂಗಳ ಕಂತು ಪಾವತಿ ಮಾಡುವಲ್ಲಿ ಸಾಲಗಾರ ವಿಫಲನಾಗಿದ್ದರು. ಮೂರನೇ ವ್ಯಕ್ತಿಗಳನ್ನು ( ರೀಕವರಿ ಏಜೆಂಟರು) ಮೂಲಕ ಸಾಲಗಾರನ ವಾಹನವನ್ನು ಜಪ್ತಿ ಮಾಡಿದ್ದರು. ಇದರಲ್ಲಿ ಬ್ಯಾಂಕ್‌ ಮತ್ತು ರೀಕವರಿ ಏಜೆಂಟರ ವಿರುದ್ಧ ಎಫ್‌ಐಆರ್‌ ದಾಖಲಿಸಿಕ್ಕೆ ಆದೇಶಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು.
ಈ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣ ಇತ್ಯರ್ಥ ಪಡಿಸಲು ನಿರ್ದೇಶಿಸಿದ್ದ ಸುಪ್ರೀಂಕೋರ್ಟ್‌ , ಸಾಲ ತೀರಿಸದ ಗ್ರಾಹಕರ ಮಾನಸಿಕ ಹಿಂಸೆ ನೀಡುವ ರೀಕವರಿ ಏಜೆಂಟರನ್ನು ಕಳಿಸುವಂತಿಲ್ಲ. ಮಿಗಿಲಾಗಿ ಹೆಚ್ಚುವರಿ ಬಡ್ಡಿ ಮಾತ್ರ ವಿಧಿಸಬೇಕು. ಈ ಬಗ್ಗೆ ಆರ್‌ಬಿಐ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿತು.

ಈ ತೀರ್ಪು ಹಾಗೂ ಆರ್‌ಬಿಐ ಮಾರ್ಗಸೂಚಿ ಪ್ರಕಾರ ಕ್ರೆಡಿಟ್ ಕಾರ್ಡ್‌ ಸಾಲ ವನ್ನು ರೀಕವರಿ ಏಜೆಂಟರಿಂದ ವಸೂಲಿ ಮಾಡುವಂತಿಲ್ಲ. ಸಾಲ ನೀಡದಿದ್ದರೆ ಬಡ್ಡಿ ವಿಧಿಸಬಹುದು, ಹೆಚ್ಚುವರಿ ಬಡ್ಡಿ ವಸೂಲಿ ಮಾಡಬಹುದು. ಆದ್ರೆ ಗ್ರಾಹಕರ ವಸ್ತುಗಳನ್ನು ಜಪ್ತಿ ಮಾಡಿ ಮಾನಸಿಕ ಹಿಂಸೆ ನೀಡುವಂತಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಸಾಲದ ವಿಚಾರದಲ್ಲಿ ರೀಕವರಿ ಏಜೆಂಟರು ಬಂದಾಗ ಸುಪ್ರೀಂಕೋರ್ಟ್‌ನ ಈ ತೀರ್ಪು ಅಥವಾ ಆರ್‌ಬಿಐ ಮಾರ್ಗಸೂಚಿ ತಿಳಿಸಿ ಹಿಂಸೆಯಿಂದ ತಪ್ಪಿಸಿಕೊಳ್ಳಬಹುದು.

Related News

spot_img

Revenue Alerts

spot_img

News

spot_img