21.1 C
Bengaluru
Tuesday, July 9, 2024

ಈ ದೀಪಾವಳಿ ಸಮಯದಲ್ಲಿ ವಸತಿ ಘಟಕಗಳ ಆರಂಭದಲ್ಲಿ 10-15% ಏರಿಕೆ

ನವದೆಹಲಿ: ಕಳೆದ ವರ್ಷಕ್ಕಿಂತ ಈ ದೀಪಾವಳಿ ಸಮಯದಲ್ಲಿ ಹೊಸ ವಸತಿ ಘಟಕಗಳ ಆರಂಭವು 10-15% ಹೆಚ್ಚಾಗುವ ನಿರೀಕ್ಷೆಯಿದೆ. ದೇಶದ ಏಳು ನಗರಗಳಲ್ಲಿ ಸುಮಾರು 33,000 ರಿಂದ 35,000 ಘಟಕಗಳನ್ನು ಪ್ರಾರಂಭಿಸಲಾಗುವುದು.

ಒಂದು ವಸತಿ ಘಟಕದ ಸರಾಸರಿ ಗಾತ್ರವು 800 ಚದರ ಅಡಿಗಳಾಗಿದ್ದು, ಒಟ್ಟಾರೆ 26 ರಿಂದ 28 ಮಿಲಿಯನ್ ಚದರ ಅಡಿಗಳಷ್ಟು ವಸತಿ ಜಾಗವನ್ನು ಹಬ್ಬದ ಸಮಯದಲ್ಲಿ ಪ್ರಾರಂಭಿಸಲಾಗುವುದು ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ, ಅಕ್ಟೋಬರ್-ಡಿಸೆಂಬರ್‌ನ ಹಬ್ಬದ ತ್ರೈಮಾಸಿಕದಲ್ಲಿ ಒಟ್ಟು 58,300 ಯುನಿಟ್‌ಗಳನ್ನು ಪ್ರಾರಂಭಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 15 ಮತ್ತು ನವೆಂಬರ್ 15 ರ ನಡುವಿನ ದೀಪಾವಳಿ ಅವಧಿಯಲ್ಲಿ ಅಗ್ರ ಏಳು ನಗರಗಳಲ್ಲಿ ಸುಮಾರು 29,940 ಘಟಕಗಳನ್ನು ಪ್ರಾರಂಭಿಸಲಾಗಿದೆ. ಕಳೆದ ವರ್ಷ ನವೆಂಬರ್ 4 ರಂದು ದೀಪಾವಳಿ ಹಬ್ಬವಿತ್ತು.

ಡಿಸೆಂಬರ್‌ನಲ್ಲಿ ದೇಶದ ಏಳು ನಗರಗಳಲ್ಲಿ ಡೆವಲಪರ್‌ಗಳು 70,000 ಯೂನಿಟ್‌ಗಳನ್ನು ಪ್ರಾರಂಭಿಸುತ್ತಾರೆ. ಸರಾಸರಿ ಯೂನಿಟ್ ಗಾತ್ರ 800 ಚದರ ಅಡಿಯಂತೆ ಸರಿಸುಮಾರು 56 ಮಿಲಿಯನ್ ಚದರ ಅಡಿ ವಸತಿ ಜಾಗವನ್ನು ಪ್ರಾರಂಭಿಸಲಾಗುವುದು.

ಡೆವಲಪರ್‌ಗಳು ದೀಪಾವಳಿಯ ಸಮಯದಲ್ಲಿ ವಸತಿ ಘಟಕಗಳ ಮಾರಾಟ ಹೆಚ್ಚಾಗುವ ಆಶಾವಾದದ ಹೊಂದಿದ್ದಾರೆ. ಏಕೆಂದರೆ, 2022 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಕಂಡು ಬಂದ ಮಾರಾಟದ ಬೆಳವಣಿಗೆಯನ್ನು ಆಧರಿಸಿ ಈ ಡೆವಲಪರ್‌ರಗಳ ನಿರೀಕ್ಷೆಯು ಹೆಚ್ಚಾಗಿದೆ.

“ಈ ವರ್ಷವು ನಿಜವಾಗಿಯೂ ಉತ್ತಮವಾಗಿ ಪ್ರಾರಂಭವಾಗಿದೆ. ನಮ್ಮ ಯೋಜನೆಗಳ ಪ್ರಕಾರ ನಾವು ವಸತಿ ಘಟಕಗಳನ್ನು ಮಾರಾಟ ಮಾಡಿದ್ದೇವೆ. ನಮ್ಮ ಮುಂದಿನ ಹಂತದ ಬೆಳವಣಿಗೆಯನ್ನು ಸಾಧಿಸಲು ತಂಡದಲ್ಲಿ ಉತ್ಸಾಹವು ಹೆಚ್ಚಾಗಿದೆ. ವಿವಿಧ ಭೌಗೋಳಿಕ ಪ್ರದೇಶಗಳಿಂದ ಹೊಸ ವಸತಿ ಘಟಕಗಳ ಪ್ರಾರಂಭವನ್ನು ನೋಡಲು ನಾವು ಕೂಡ ಉತ್ಸಾಹದಿಂದ ಕಾಯುತ್ತಿದ್ದೇವೆ. ಇದು ಮುಂಬರುವ ತ್ರೈಮಾಸಿಕಗಳಲ್ಲಿ ಮಾರಾಟಕ್ಕೆ ಕೊಡುಗೆ ನೀಡಲಿದೆ” ಎಂದು ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಹೇಳಿದ್ದಾರೆ.

ದೀಪಾವಳಿ ಹಬ್ಬ ಮುಗಿದ ಒಂದು ತಿಂಗಳ ನಂತರ ಕಂಪನಿಯು 1.5 ರಿಂದ 2 ಮಿಲಿಯನ್ ಚದರ ಅಡಿಗಳಷ್ಟು ಉತ್ತಮ ವಸತಿ ಜಾಗವನ್ನು ಪ್ರಾರಂಭಿಸಲು ಸಜ್ಜಾಗಿದೆ ಎಂದು ಹಿರನಂದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ಹಿರಾನಂದಾನಿ ತಿಳಿಸಿದ್ದಾರೆ.

ಬೆಂಗಳೂರು ಮೂಲದ ಡೆವಲಪರ್ ಪುರವಂಕರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 793 ಕೋಟಿ ರೂ.ಗಳ ಅತ್ಯಧಿಕ ಮಾರಾಟ ಮೌಲ್ಯವನ್ನು ಸಾಧಿಸಿದ್ದು, “ಕಂಪನಿಯು 15 ಮಿಲಿಯನ್ ಚದರ ಅಡಿಗಳಷ್ಟು ಜಾಗದಲ್ಲಿ ಹೊಸ ಘಟಕಗಳ ಪ್ರಾರಂಭದ ಕೆಲಸದಲ್ಲಿದೆ. ಮತ್ತು ಅದಕ್ಕಾಗಿ ಅಗತ್ಯ ಹೂಡಿಕೆಗಳನ್ನು ಮಾಡುತ್ತಿದೆ” ಎಂದು ಹೇಳಿದೆ.

“ಹಬ್ಬದ ಸಮಯದಲ್ಲಿ ಮನೆಗಳು, ವಾಹನಗಳು ಮತ್ತು ಆಭರಣಗಳಂತಹ ಹೆಚ್ಚಿನ ಮೌಲ್ಯದ ಖರೀದಿಗಳನ್ನು ಮಾಡಲು ಒಳ್ಳೆಯ ಸಮಯವೆಂದು ಪರಿಗಣಿಸುವ ಖರೀದಿದಾರದಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದ ಯಶಸ್ಸು ಮನೆ ಖರೀದಿದಾರರ ಭಾವನೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸಿದೆ. ಹೀಗಾಗಿ ಹಬ್ಬದ ಸಮಯವು ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಆಶಾವಾದ ಮತ್ತು ಭರವಸೆಯ ಸಮಯ” ಎಂದು ಟಾಟಾ ರಿಯಾಲ್ಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (TRIL) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂಜಯ್ ದತ್ ಹೇಳಿದ್ದಾರೆ.

Related News

spot_img

Revenue Alerts

spot_img

News

spot_img