25.5 C
Bengaluru
Thursday, December 19, 2024

Lokayukta Raid: ರೈತನಿಂದ ಲಂಚ ಪಡೆಯುತ್ತಿದ್ದ ಭೂ ದಾಖಲೆ ಅಧೀಕ್ಷಕನ ಬಂಧನ

#lokayukta raid #Land record #suprident #bribe

ಯಾದಗಿರಿ: ರೈತನಿಂದ ಲಂಚ ಪಡೆಯುವ ವೇಳೆ ಭೂ ದಾಖಲೆ(Land record) ಇಲಾಖೆಯ ಸಿಬ್ಬಂದಿ ಲಂಚ(Bribe) ಪಡೆಯುವಾಗ ಶುಕ್ರವಾರ ಲೋಕಾಯುಕ್ತ(Lokayukta ) ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಬಲೆಗೆ ಕೆಡವಿದ್ದಾರೆ.ಯಾದಗಿರಿ ಭೂ ದಾಖಲೆ‌ ಕಚೇರಿ ಜವಾನ ಶರಣು ಹಾಗೂ ಗುರುಮಠಕಲ್‌ ತಾಲ್ಲೂಕು ಭೂ ದಾಖಲೆ‌ ಸೂಪರ್‌ವೈಸರ್ ಶೇಷಪಾಲರೆಡ್ಡಿ,ಲೋಕಾಯುಕ್ತ ಬಲೆಗೆ ಬಿದ್ದವರು.ರೈತ ಮಹೇಂದ್ರ ಈರಪ್ಪ ಪೂಜಾರಿ ಎಲ್ಹೇರಿ‌ ಎಂಬುವರು ದೂರು ಕೊಟ್ಟಿದ್ದರು.ಜಮೀನಿನ ಟಿಪ್ಪಣಿ ತಿದ್ದುಪಡಿ(Amendment of land note) ಸಂಬಂಧ ರೈತನಿಂದ ₹ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಹಾಗೂ ಸಿಬ್ಬಂದಿ, ಮುಂಗಡವಾಗಿ ₹10 ಸಾವಿರ ಹಣ ಪಡೆದಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಹಣ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಎಸ್‌ಪಿ ಅಬ್ದುಲ್ ರೌಫ್ ಕರ್ನೂಲ್ ಲೋಕಾಯುಕ್ತ ಮಾರ್ಗದರ್ಶನದಲ್ಲಿ ಪಿಐ ಅರುಣ ಕುಮಾರ್, ಹಣಮಂತ ಸಣ್ಣಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.

Related News

spot_img

Revenue Alerts

spot_img

News

spot_img