28.2 C
Bengaluru
Wednesday, July 3, 2024

ಭಾರತದ ಹೊಸ ಬಿಲಿಯನೇರ್ ಆದ ಲಲಿತ್ ಖೈತಾನ್…!

80 ನೇ ವಯಸ್ಸಿನಲ್ಲಿ ಲಲಿತ್ ಖೇತಾನ್ ಎಲೈಟ್ ತ್ರೀ-ಕಾಮಾ ಕ್ಲಬ್‌ಗೆ ಸೇರಿದ್ದಾರೆ. ಫೋರ್ಬ್ಸ್ ಪ್ರಕಾರ ದೆಹಲಿ ಮೂಲದ ರಾಡಿಕೊ ಖೈತಾನ್‌ನ ಅಧ್ಯಕ್ಷರು ಈ ವರ್ಷ ತನ್ನ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯ ಷೇರುಗಳು 50% ಕ್ಕಿಂತ ಹೆಚ್ಚಾದ ನಂತರ ಭಾರತದ ಹೊಸ ಬಿಲಿಯನೇರ್ ಆಗಿದ್ದಾರೆ.
ರಾಡಿಕೊ ಖೈತಾನ್ ಕಂಪನಿಯನ್ನು ಮೊದಲು ರಾಂಪುರ್ ಡಿಸ್ಟಿಲರಿ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.

ಅವರ ತಂದೆ ಜಿಎನ್ ಖೈತಾನ್ ಅವರು 1970 ರ ದಶಕದ ಆರಂಭದಲ್ಲಿ ಭಾರೀ ನಷ್ಟದಲ್ಲಿದ್ದ ಈ ಕಂಪನಿಯನ್ನು ಖರೀದಿ ಮಾಡಿದ್ದರು. 1995 ರಲ್ಲಿ ಜಿಎನ್‌ ಖೈತಾನ್ ತನ್ನ ನಾಲ್ಕು ಗಂಡು ಮಕ್ಕಳ ನಡುವೆ ಕುಟುಂಬದ ವ್ಯವಹಾರಗಳನ್ನು ಹಂಚಿದಾಗ ಲಲಿತ್‌ ಖೈತಾನ್‌ ತಮ್ಮ ತಂದೆಯಿಂದ ಡಿಸ್ಟಿಲರಿಯನ್ನು ಪಡೆದುಕೊಂಡಿದ್ದರು.

ಜೀವನಪರ್ಯಂತ ಟೀಟೋಟೇಲರ್ ಆಗಿದ್ರಾ..?

1972 ರಲ್ಲಿ ರಾಮ್‌ಪುರ ಡಿಸ್ಟಿಲರಿ ವ್ಯವಹಾರವನ್ನು 16 ಲಕ್ಷ ರೂಪಾಯಿಗಳಿಗೆ ಜಿಎನ್‌ ಖೈತಾನ್ ಸ್ವಾಧೀನಪಡಿಸಿಕೊಳ್ಳುವವರೆಗೂ ಲಲಿತ್ ಖೈತಾನ್ ಟೀಟೋಟ್ಲರ್ ಆಗಿದ್ದರು. ಅವರ ತಂದೆ ಜಿಎನ್ ಖೈತಾನ್ ಅವರು ಸಾಂಪ್ರದಾಯಿಕ ಮಾರ್ವಾಡಿ ಕುಟುಂಬಕ್ಕೆ ಸೇರಿದ್ದರಿಂದ ಅವರು ಕೂಡ ಜೀವನಪರ್ಯಂತ ಟೀಟೋಟೇಲರ್ ಆಗಿದ್ದರು.

ಅಭಿಷೇಕ್ ಸಹಾಯದಿಂದ ಬ್ರ್ಯಾಂಡೆಡ್ ಪಾನೀಯಗಳನ್ನು ವಿಸ್ತರಿಸಲು ನಿರ್ಧರಿಸಿದ್ರ..!

ರಾಡಿಕೊ ಖೈತಾನ್ ಆರಂಭದಲ್ಲಿ ಬಾಟಲಿಂಗ್ ಪ್ಲಾಂಟ್ ಆಗಿ ಪ್ರಾರಂಭವಾಯಿತು ಮತ್ತು ನಂತರ ಬೃಹತ್ ಆಲ್ಕೋಹಾಲ್ ಘಟಕವನ್ನು ತಯಾರಿಸಿತ್ತು. ಆದರೆ ವ್ಯಾಪಾರವು ಕಷ್ಟಕರವಾದಂತೆ, ಲಲಿತ್ ಖೈತಾನ್ ತನ್ನ ಮಗ ಅಭಿಷೇಕ್ ಸಹಾಯದಿಂದ ಬ್ರ್ಯಾಂಡೆಡ್ ಪಾನೀಯಗಳನ್ನು ವಿಸ್ತರಿಸಲು ನಿರ್ಧರಿಸಿದರು. “ಒಂದೋ ದಿವಾಳಿಯಾಗಲಿ ಅಥವಾ ನಮ್ಮದೇ ಬ್ರಾಂಡ್‌ ರಚನೆಯಾಗಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಆಗ ನಾನು ನಮ್ಮದೇ ಬ್ರ್ಯಾಂಡ್ ಆರಂಭಿಸಲು ಕರೆ ತೆಗೆದುಕೊಂಡೆ” ಎಂದು ಅಭಿಷೇಕ್‌ ಖೈತಾನ್ ಫಾರ್ಚೂನ್‌ಗೆ ತಿಳಿಸಿದ್ದರು.

ಇದರಿಂದಾಗಿ 8 PM ವಿಸ್ಕಿಯನ್ನು ಆಗಸ್ಟ್ 1998 ರಲ್ಲಿ ಪ್ರಾರಂಭಿಸಲಾಯಿತು. ಇಂದು ಅತಿದೊಡ್ಡ ತಯಾರಕರಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಈ ಕಂಪನಿಯೂ ಒಂದಾಗಿದೆ. 85 ಕ್ಕೂ ಹೆಚ್ಚು ದೇಶಗಳಲ್ಲಿ ಬ್ರ್ಯಾಂಡ್ ಗಳು ಲಭ್ಯವಿದೆ. ಕಂಪನಿಯ ಪ್ರೀಮಿಯಂ ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ತಂತ್ರವು ಫೋರ್ಬ್ಸ್‌ನ ಪ್ರಕಾರ ಶ್ರೀಮಂತ ಲಾಭಾಂಶವನ್ನು ನೀಡಿದೆ.

Related News

spot_img

Revenue Alerts

spot_img

News

spot_img