23.5 C
Bengaluru
Monday, November 18, 2024

KYC ಅಪೂರ್ಣವಾಗಿ FasTag ನಿಷ್ಕ್ರಿಯ;ಜನವರಿ 31 ಡೆಡ್‌ಲೈನ್

#Fasttags #inactive #January 31 #deadline
ಬೆಂಗಳೂರು;ಟೋಲ್‌ ಪಾವತಿಸಲು ಫಾಸ್ಟ್ಯಾಗ್ ಬಹಳ ಮುಖ್ಯ.KYC ಅಪೂರ್ಣವಾಗಿದ್ದರೆ ಜನವರಿ 31 ರ ನಂತರ ಫಾಸ್ಟ್ರಾಗ್‌ನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಂದು ವಾಹನ ಒಂದು ಫಾಸ್ಟ್ಯಾಗ್ ಅಭಿಯಾನದ ಅಡಿಯಲ್ಲಿ ಉತ್ತಮ ಅನುಭವವನ್ನು ಉತ್ತೇಜಿಸಲು NHAI ಈ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದೇ ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಹೊಂದಿರುವವರ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು NHAT ಹೇಳಿದೆ. ಟೋಲ್ ಅನ್ನು ನಗದು ರೂಪದಲ್ಲಿ ಪಾವತಿಸಲು ಡಬಲ್ ಶುಲ್ಕವನ್ನು ವಿಧಿಸಲಾಗುತ್ತದೆ.ಒಂದು ವೇಳೆ ನಿಮ್ಮ ವಾಹನದ ಫಾಸ್ಟ್‌ ಟ್ಯಾಗ್‌ನ ಕೆವೈಸಿ(KYC) ಮಾಡಿಸದೆ ಅದು ಜನವರಿ 31ರ ಬಳಿಕ ರದ್ದಾದರೆ ಟೋಲ್ ಬೂತ್‌ಗಳಲ್ಲಿ ಶುಲ್ಕ ಪಾವತಿ ಮಾಡುವಾಗ ತೊಂದರೆ ಎದುರಾಗಲಿದೆ.ಫಾಸ್ಟ್ಯಾಗ್‌ನ KYC ಯನ್ನು ಜನವರಿ 31 ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲವಾದರೆ ಜೇಬಿನ ಮೇಲಿನ ದುಪ್ಪಟ್ಟು ಹೊರೆ ಬೀಳುವುದು. ಯಾಕೆಂದರೆ ಟೋಲ್(Toll) ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸಿದರೆ, ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಾಹನ ಚಾಲಕರು, ಫಾಸ್ಟ್‌ ಟ್ಯಾಗ್ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್‌ ಸಂಪರ್ಕಿಸಿ ತಮ್ಮ ಪಾಸ್ಟ್‌ ಟ್ಯಾಗ್‌ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ(National Highway) ಇರುವ ಟೋಲ್ ಬೂತ್‌ಗಳಲ್ಲೂ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಬಳಸುವವರು ಅನೇಕರಿದ್ದಾರೆ.ಆದರೆ, ಈ ರೀತಿ ಮಾಡುವುದು ತಪ್ಪು ಎಂದು NHAI ಘೋಷಿಸಿದೆ. ಪ್ರತಿ ವಾಹನಕ್ಕೂ Fastag ತೆಗೆದುಕೊಳ್ಳಬೇಕು. RBI ಮಾರ್ಗಸೂಚಿಗಳ ಅಡಿಯಲ್ಲಿ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು NHAI ಹೇಳಿದೆ. ಇತ್ತೀಚಿನ ಫಾಸ್ಟ್‌ ಟ್ಯಾಗ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಫಾಸ್ಟ್‌ ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು ಅಥವಾ ಆಯಾ ವಿತರಕ ಬ್ಯಾಂಕ್‌ಗಳ ಟೋಲ್-ಫ್ರೀ(Tollfree) ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬಹುದು.

Related News

spot_img

Revenue Alerts

spot_img

News

spot_img