ಬೆಂಗಳೂರು, ಮಾ. 18 : ಮಳೆ ನೀರು ಚರಂಡಿ ಅನ್ನು ಆಕ್ರಮಿಸಿದ ಅಪಾರ್ಟ್ಮೆಂಟ್ ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ. 87.18 ಲಕ್ಷ ರೂಪಾಯಿಯನ್ನು ದಂಡ ಕಟ್ಟುವಂತೆ ಸೂಚನೆ ನೀಡಿದೆ. ಬೆಂಗಳೂರಿನ ಕುಂಬೇನ ಅಗ್ರಹಾರ ಗ್ರಾಮದ ಎಸ್ ವಿ ಎಲಿಗಂಟ್ ಅಪಾರ್ಟ್ ಮೆಂಟ್ ನಿಯಮವನ್ನು ಮೀರಿ ಕಟ್ಟಡ ನಿರ್ಮಿಸಿದೆ.
ಎಸ್‌ಡಬ್ಲ್ಯೂಡಿ ಬಫರ್ ವಲಯದಲ್ಲಿ ಒತ್ತುವರಿ ಮಾಡಿದ್ದು, ಈಜುಕೊಳ, ಸ್ನಾನ ಗೃಹ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ದಂಡವನ್ನು ವಿಧಿಸಲಾಗಿದೆ ಎಂದು ಕೆಎಸ್‌ಪಿಸಿಬಿ ಪತ್ರದಲ್ಲಿ ತಿಳಿಸಿದೆ. ಈ ಬಗ್ಗೆ ಮಹದೇವಪುರ ಪರಿಸರ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾರ್ಗಸೂಚಿಗಳ ಪ್ರಕಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಮಾಲಿನ್ಯಕಾರರು ಷರತ್ತುಗಳ ಬಗ್ಗೆ ಒಪ್ಪಿಗೆ ನೀಡಿ ಬಳಿಕ ನಿಯಮವನ್ನು ನಿಯಂತ್ರಣ ಮಾಡಿದ್ದಾರೆ. ಅಲ್ಲದೇ ಯಾವುದೇ ವಿಸರ್ಜನೆಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಸಂಸ್ಕರಿಸಿದ ಹಾಗೂ ಸಂಸ್ಕರಿಸದ ತ್ಯಾಜ್ಯ ನೀರನ್ನು ಅಂತರ್ಜಲಕ್ಕೆ ಹರಿಸುವುದು ಕಾನೂನು ಬಾಹಿರ.
ಅಪಾರ್ಟ್ ಮೆಂಟ್ ಅನ್ನು ನಿರ್ಮಾಣ ಮಾಡಿರುವ ವೆಂಕಟೇಶ್ವರ ಬಿಲ್ಡರ್ಸ್ ನಿಯಮವನ್ನು ಮೀರಿದೆ. ಆಗಸ್ಟ್ 29, 2018 ರಂದು ಸ್ಥಾಪನೆಗೆ ಒಪ್ಪಿಗೆಯಲ್ಲಿ ನೀಡಿರುವ ನಿರ್ದೇಶಗಳನ್ನು ಪಾಲಿಸಿಲ್ಲ. CFE ಯಾವುದೇ ಕೆರೆ ಮತ್ತು ಮಳೆನೀರಿನ ಒಳಚರಂಡಿ ಕಡೆಗೆ ಬಫರ್ ವಲಯವನ್ನು ಸೇರಿಸುವ ನಿರ್ದೇಶನವನ್ನು ಒಳಗೊಂಡಿತ್ತು ಎಂದು ಕೆಎಸ್ ಪಿಸಿಬಿ ಹೇಳಿದೆ.
ಈ ಬಗ್ಗೆ ಕಾರ್ಯಕರ್ತ ಪರಮೇಶ್ ವಿ ಅವರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ಆಧಾರದ ಮೇಲೆ ಪ್ರಕರಣವನ್ನು ಎನ್ ಜಿಟಿ ಕೈಗೆತ್ತಿಕೊಂಡಿತ್ತು. ಎನ್ ಜಿಟಿ ನಿರ್ದೇಶನದಂತೆ ಈಗ ಕೆಎಸ್ ಪಿಸಿಬಿ ಪೊಲ್ಯೂಟರ್ಸ್ ಪೇಸ್ ಕಾಯ್ದೆಯನ್ನು ಅನ್ವಯಿಸಿ ಕಳೆದ ವರ್ಷ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿತ್ತು.