ಬೆಂಗಳೂರು ಜೂನ್ 26: ಕರ್ನಾಟಕ ರಾಜ್ಯದ ಜನೆತೆಗೆ ಹೊಸದಾಗಿ ಏನಾದರು ಕೊಡುವ ಸಲುವಾಗಿ, ಕಂದಾಯ ಇಲಾಖೆಯು ಇತ್ತೀಚಿಗಷ್ಟೆ ಜನಪರಗೊಳಿಸಿದ್ದ ಉಪನೋಂದಣಿ ಕಛೇರಿಯಲ್ಲಿ ಬಳಸುವ ಕಾವೇರಿ 2.0 ತಂತ್ರಾಂಶದ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದ ಹೊತ್ತಲ್ಲಿ, ಅದರ ಬಗ್ಗೆ ಸೂಕ್ತ ಮಾಹಿತಿ ನೀಡುವ ಸಲುವಾಗಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ಕಾವೇರಿ 2.0 ತಂತ್ರಾಂಶವು ಜನಪರವಾಗಿದ್ದು, ಜನರ ಕೈಯಲ್ಲೇ ರಿಜಿಸ್ಟ್ರೇಷನ್ ಮಾಡಿಸುವ ಒಂದು ವಿಭಿನ್ನ ಯೋಜನೆಯಾಗಿದೆ.
ಎಷ್ಟೇ ದಾಖಲೆಗಳು ಬಂದ್ರು ರಿಜಿಸ್ಟ್ರೇಷನ್ಸ್ ಮಾಡುವ ಕೆಪ್ಯಾಸಿಟಿಯನ್ನು ಕಾವೇರಿ 2.0 ತಂತ್ರಾಂಶದ ಮೂಲಕ ಹೆಚ್ಚಿಸಲಾಗಿದೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ
ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶದ ಮೂಲಕ ಒಂದೇ ದಿನಕ್ಕೆ 143 ರಿಜಿಸ್ಟ್ರೇಷನ್ಸ್ ಮಾಡಿ , ನಮ್ಮ ಇಲಾಖೆಯ ಮತ್ತು ತಂತ್ರಾಂಶದ ಕಾರ್ಯತಾಂತ್ರಿಕೆಯನ್ನು ಎತ್ತಿ ತೋರಿಸಿದೆ, ಮತ್ತು ದೊಡ್ಡ ಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ 123 ಡಾಕ್ಯುಮೆಂಟ್ಸ್ ಅನ್ನು ರಿಜಿಸ್ಟ್ರೇಷನ್ ಮಾಡುವುದರ ಮೂಲಕ ವಾಡಿಕೆಗಿಂತ ಕಾವೇರಿ 2.0 ತಂತ್ರಾಂಶ ಬಂದ ಮೇಲೆಯೇ ರಿಜಿಸ್ಟ್ರೇಷನ್ ಸಂಖ್ಯೆ ಹೆಚ್ಚಾಗಿದೆ ಎಂದ ಕಂದಾಯ ಸಚಿವ ಕೃಷ್ಣ ಭೈರೇಗೌಡರು.
ಜನರಿಗೆ ರಿಜಿಸ್ಟ್ರೇಷನ್ಸ್ ಅನ್ನು ಸುಲಭವಾಗಿ,ಸುಲಲಿತವಾಗಿ ಮಾಡುವ ಉದ್ದೇಶವೆ ಈ ಕಾವೇರಿ 2.0 ತಂತ್ರಾಂಶದ ಮೊದಲ ಗುರಿಯಾಗಿದ್ದು, ಪೇಮೆಂಟ್ ,J-Slip ನಂತಹ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಂದಾಯ ಇಲಾಖೆಯ ಆದಾಯ ಕಳೆದ ವರ್ಷಕ್ಕಿಂತ ಹೆಚ್ಚಳ:– ಆದಾಯದ ಬಗ್ಗೆ ಮಾತನಾಡಿದ ಅವರು ಕಳೆದ ಭಾರಿಗಿಂತ ಈ ಭಾರಿ ಆದಾಯದಲ್ಲಿ ಹೆಚ್ಚಾಗಿದೆ ಎಂದು ತಿಳಿಸಿದರು.
ಮೇ 2022:- 1550 cr
ಮೇ 2023:- 1630 cr
ಜೂನ್ 2022:721 cr
ಜೂನ್ 2023:800 cr
ಈ ಬಾರಿ ಮೇನಲ್ಲಿ ಚುನಾವಣೆಯಿದ್ದರು ಆದಾಯಕ್ಕೆ ಯಾವುದೇ ಕೊರೆತೆಯಾಗಿಲ್ಲ, ಇದೆಕೆಲ್ಲಾ ಕಾರಣ ಕಾವೇರಿ 2.0 ತಂತ್ರಾಂಶ ಎಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ.