ಬೆಂಗಳೂರು, ಮೇ. 04 : ಈಗ ಹಣ ಉಳಿತಾಯ ಮಾಡುವ ಮಾರ್ಗವೂ ಹೆಚ್ಚಾಗಿದೆ. ಇಟ್ಟ ಪುಟ್ಟ ಹಣಕ್ಕೂ ಬಡ್ಡಿ ಬರುತ್ತದೆ. ಬ್ಯಾಂಕ್ ನಲ್ಲಿ ಹನ ಇಡುವುದರಿಂದ ಹೆಚ್ಚು ಲಾಬವಿದೆಯೇ ಹೊರತು ನಷ್ಟವಂತೂ ಆಗುವುದಿಲ್ಲ. ಸೇಫ್ ಆಗಿ ಹಣ ಬ್ಯಾಂಕಿನಲ್ಲಿರುತ್ತದೆ. ಆತಂಕ ಪಡುವಷ್ಟಿರುವುದೇ ಇಲ್ಲ. ಇನ್ನು ಒಬ್ಬ ವ್ಯಕ್ತಿ ಎಷ್ಟು ಸೇವಿಂಗ್ಸ್ ಅಕೌಂಟ್ ಅನ್ನು ತೆರೆಯಬಹುದು. ಒಂದು ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟು ಹಣವನ್ನು ಠೇವಣಿ ಮಾಡಬಹುದು. ಬ್ಯಾಂಕ್ ನಲ್ಲಿ ಹಣ ವಿಟ್ಟರೆ ಶುಲ್ಕ ಕಟ್ಟಬೇಕಾ.
ಭಾರತದಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಯಾವುದೇ ಮಿತಿ ಇಲ್ಲ. ಒಬ್ಬ ವ್ಯಕ್ತಿ ಎಷ್ಟು ಖಾತೆಯನ್ನು ಬೇಕಿದ್ದರೂ ತೆರೆಯಬಹುದು. ವಿವಿಧ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯಬಹುದು. ಬ್ಯಾಂಕ್ ಗೆ ಹೋಗಿ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ನೀಡಿದರೆ, ಖಾತೆಯನ್ನು ತೆರೆಯಲಾಗುತ್ತದೆ. ಈಗಂತೂ ಎಲ್ಲವೂ ಆನ್ ಲೈನ್ ನಲ್ಲೇ ತೆರೆಯಬಹುದಾಗಿದೆ. ಇನ್ನು ಹಣಕಾಸು ಸಲಹೆಗಾರರ ಪ್ರಕಾರ ಒಬ್ಬ ವ್ಯಕ್ತಿ ಕೇವಲ 3 ಉಳಿತಾಯ ಖಾತೆಯನ್ನು ಮಾತ್ರವೇ ತೆರೆಯಬೇಕು. ಅದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ತೆರೆದರೆ ತೊಂದರೆಯಾಗಬಹುದು ಎಂದು ಹೇಳಲಾಗಿದೆ.
ಇನ್ನು ಮನೆಯಲ್ಲಿ ಜಂಟಿ ಖಾತೆಯನ್ನು ಸಹ ತೆರೆಯಬಹುದು. ಪತಿ-ಪತ್ನಿ ಇಬ್ಬರೂ ಸೇರಿ ಜಂಟಿ ಖಾತೆಯನ್ನು ತೆರೆಯಬಹುದು. ಅಂತೆಯೇ ವಯಕ್ತಿಕ ಖಾತೆಯನ್ನು ಕೂಡ ತೆರೆಯಬಹುದು. ಇನ್ನು ಮಕ್ಕಳ ಹೆಸರಲ್ಲೂ ಕೂಡ ಪೋಷಕರು ಜಂಟಿ ಖಾತೆಯನ್ನು ತೆರೆಯುವ ಅವಕಾಶವಿದೆ. ಮಕ್ಕಳು ಪ್ರೌಢಾವಸ್ಥೇಘೇ ಭಮದ ಬಳಿಕ ಅದು ಆಟೋಮೆಟಿಕ್ ಆಗಿ ವಯಕ್ತಿಕ ಖಾತೆಯಾಗಿ ಬದಲಾಗುತ್ತದೆ. ಶಾಶ್ವತ ಆದಾಯಕ್ಕೆ ಬ್ಯಾಂಕ್ ಅಕೌಂಟ್ ತೆರೆದರೆ ಒಳ್ಲೆಯದು.
ಇನ್ನು ಭಾರತದಲ್ಲಿ ಒಬ್ಬ ವ್ಯಕ್ತಿ 10 ಸಾವಿರ ರೂಪಾಯಿಯವರೆಗೂ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಬಹುದು. ಹಿರಿಯ ನಾಗರಿಕರು 50 ಸಾವಿರ ರೂಪಾಯಿವರೆಗೂ ಹಣಕ್ಕೆ ಬಡ್ಡಿ ವಿಧಿಸುವುದಿಲ್ಲ. ಇದಕ್ಕೂ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇನ್ನು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡುವುದಕ್ಕೆ ಬ್ಯಾಂಕ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಇನ್ನು ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದರೆ ಅದಕ್ಕೆ ಬ್ಯಾಂಕ್ ಬಡ್ಡಿಯನ್ನು ನೀಡುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಖಾತೆಗೆ ಜಮಾ ಆಗುತ್ತದೆ.