26.9 C
Bengaluru
Friday, July 5, 2024

ಕಾವೇರಿ 2.0 ನಲ್ಲಿ DTD ದಸ್ತಾವೇಜುಗಳ ಡೇಟಾ ನಮೂದು ಮಾಡುವುದು ಹೇಗೆ ಗೊತ್ತಾ!

ಬೆಂಗಳೂರು ಜೂನ್ 25: ಕಂದಾಯ ಇಲಾಖೆಯು ದಸ್ತಾವೇಜುಗಳ ನೋಂದಣಿ ಸರಳವಾಗಿಡುವುದಕ್ಕಾಗಿ ಕಾವೇರಿ 2.0 ತಂತ್ರಾಶವನ್ನು ಜಾರಿಗೆ ತಂದಿದ್ದು ಅದರ ಕುರಿತಾಗಿ ಒಂದೊಂದೇ ವಿಷಯಗಳು ಜನರಿಗೆ ತಿಳಿಸುವ ಒಂದು ವಿಭಿನ್ನ ಕ್ರಮ ನಿಮಗಾಗಿ

1.ಕಾವೇರಿ 2.0 link ನ ಮೇಲೆ ಕ್ಲಿಕ್ ಮಾಡಿ ಕಾವೇರಿ 2.0 ಮುಖ ಪುಟ ತೆರೆಯುತ್ತದೆ.

2. Start new Application ಮೇಲೆ ಕ್ಲಿಕ್ ಮಾಡಿ.

3.Document Registration ಮೇಲೆ ಕ್ಲಿಕ್ ಮಾಡಿ ಕೆಳಗೆ ಬರುವ Continue Button ಮೇಲೆ ಕ್ಲಿಕ್ ಮಾಡಿ.

4. Select the Nature of Document as “Deposit of Title Deed” and Select Article as “ಕೊಟ್ಟಿರುವ ಆರ್ಟಿಕಲ್ ಅನ್ನು” ಸೆಲೆಕ್ಟ್ ಮಾಡಿ
ನಂತರ Sub Article Select ಮಾಡುವ ಬಗ್ಗೆ
(i) ನೀವು ಬ್ಯಾಂಕಿನಿಂದ ಪಡೆಯುತ್ತಿರುವ ಸಾಲದ ಮೊಬಲಗು ಹತ್ತು ಲಕ್ಷಕಿಂತ ಜಾಸ್ತಿ ಇದ್ದರೆ Article 6(1-ii) ಸೆಲೆಕ್ಟ್ ಮಾಡಿ.
(ii)ನೀವು ಬ್ಯಾಂಕಿನಿಂದ ಪಡೆಯುತ್ತಿರುವ ಸಾಲದ ಮೊಬಲಗು ಹತ್ತು ಲಕ್ಷಕಿಂತ ಕಡಿಮೆ ಇದ್ದರೆ Article 6(1-i) ಸೆಲೆಕ್ಟ್ ಮಾಡಿ.

5. ನೀವು DTD ಮಾಡುತ್ತಿರುವುದು ಯಾವ ಮಾದರಿ ಎಂಬುದನ್ನು ಸೆಲೆಕ್ಟ್ ಮಾಡಿ
(i)Agriculture (ii)Non-Agriculture

6. ನಿಮ್ಮ ಸ್ವತ್ತು ಯಾವ ವ್ಯಾಪ್ತಿಗೆ ಬರಲಿದೆ ಎಂಬುದನ್ನು ಸೆಲೆಕ್ಟ್ ಮಾಡಿ

(i) ಇ-ಸ್ವತ್ತು : ನಿಮ್ಮ ಸ್ವತ್ತು ಗ್ರಾಮ ಪಂಚಾಯಿತಿ(RDPR Dept) ವ್ಯಾಪ್ತಿಗೆ ಬಂದರೆ ಇದನ್ನು ಸೆಲೆಕ್ಟ್ ಮಾಡಿ.
(ii) Others: ಗ್ರಾಮ ಪಂಚಾಯಿತಿ ಬಿಟ್ಟು ಬೇರೆ ವ್ಯಾಪ್ತಿಗೆ ಬಂದರೆ ಇದನ್ನು ಸೆಲೆಕ್ಟ್ ಮಾಡಿ.

ನಾವೀಗ ಗ್ರಾಮ ಪಂಚಾಯಿತಿ(RDPR Dept) ವ್ಯಾಪ್ತಿಗೆ ಬರುವ ಸ್ವತ್ತನ್ನು ನಮೂದಿಸೋಣ

7. ಈ ಕೆಳಕಂಡ ದಾಖಲೆಗಳನ್ನು ನಮೂದು ಮಾಡು
ಜಿಲ್ಲೆ: ತಾಲೂಕು: ಹೋಬಳಿ: ಗ್ರಾಮ: Zone: RDPR ರೋಡ್: PID ಸಂಖ್ಯೆ:

8. Search ಬಟನ್ ಅನ್ನು ಕ್ಲಿಕ್ ಮಾಡಿ PID ge ಸಂಬಂಧಿಸಿದ ವಿಷಯಗಳು ದೊರೆಯಲಿವೆ.

9.Site/ಸ್ವತ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು ಎಂಟರ್ ಮಾಡಿ select and Continue ಮೇಲೆ ಕ್ಲಿಕ್ ಮಾಡಿ, ಸ್ವತ್ತಿಗೆ ಸಂಬಂಧಪಟ್ಟ ಸಂಕ್ಷಿಪ್ತ ಮಾಹಿತಿ ನಿಮಗೆ ಸಿಗುತ್ತದೆ. ನಂತರ Save Property and Continue Button ಮೇಲೆ ಕ್ಲಿಕ್ ಮಾಡಿ.

10. ನೀವು ನಮೂದಿಸಿರುವ ದತ್ತಾಂಶವು RDPR ನಿಂದ ಕಾವೇರಿ ದತ್ತಾಂಶಕ್ಕೆ Import ಆಗಿದೆ.

11. ನೀವು ಎಷ್ಟು Extend ಅನ್ನು ಅಡಮಾನ ಮಾಡುತ್ತಿದ್ದೀರ ಎಂಬುದನ್ನು ನಮೂದು ಮಾಡಬೇಕು. ಮತ್ತು Description ಅಲ್ಲಿ ಸ್ವತ್ತಿಗೆ ಸಂಬಂಧಪಟ್ಟ ವಿವರವನ್ನು ನಮೂದಿಸಬೇಕು. ಈ ವಿವರಗಳನ್ನು ಪೂರ್ಣ ಪ್ರಮಾಣದಲ್ಲಿ ನಮೂದು ಮಾಡಬೇಕಾಗುತ್ತದೆ ಕಾರಣ ಋಣಭಾರ ಪತ್ರ(EC)ದಲ್ಲಿ ಇವೆಲ್ಲಾ ನಮೂದಾಗುತ್ತವೆ. Save and Continue Button ಮೇಲೆ ಕ್ಲಿಕ್ ಮಾಡಿ.

12. ಪಾರ್ಟಿ information ಭರ್ತಿ ಮಾಡುವುದರ ಬಗ್ಗೆ.
(i) Executant -1 :- RDPR ಮೂಲಕ ಸ್ವತ್ತಿನ ಮಾಲೀಕರ ಹೆಸರು ಸ್ವಯಂ ದಾಖಲಾಗಿರುತ್ತದೆ. ಜೊತೆಗೆ ಅವರ ಹೆಸರು ವಿಳಾಸ ಐಡಿ ಪ್ರೂಫ್ ಅನ್ನು ನಮೂದು ಮಾಡಿ. ಕ್ಲಿಕ್ on Save Executant -1 and Move on

(ii) Executant -2:- ನಾವು ಬ್ಯಾಂಕಿನ ವಿವರಗಳನ್ನು ಇಲ್ಲಿ ನಮೂದು ಮಾಡಬೇಕಾಗುತ್ತದೆ.
ಬ್ಯಾಂಕಿನವರಿಗೆ ಹಾಜರಾತಿ exception ಇರುವುದರಿಂದ ಇಲ್ಲಿ ನಾವು (Excempted from Personal appearance from section 88) ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ನಂತರ ಬ್ಯಾಂಕಿನವರು ಕೊಟ್ಟಿರುವ ಲೆಟರ್ ಅನ್ನು ಸ್ಕ್ಯಾನ್ ಮಾಡಿ 5MB ಗೆ ಮೀರದಂತೆ ಸ್ಕಾನ್ ಮಾಡಿ ಉಪಲೋಡ್ ಮಾಡಬೇಕಾಗುತ್ತದೆ. ನಂತರ ಆ ಲೆಟರ್ ನಂಬರ್ ನಮೂದಿಸಿ.
ನಂತರ ಬ್ಯಾಂಕಿನ ಪರವಾಗಿ ಇರುವ Authorised dignitories ರವರ ವಿವರಗಳನ್ನು ನಮೂದು ಮಾಡಿ. Save Executant-2 ಮೇಲೆ ಕ್ಲಿಕ್ ಮಾಡಿ.

Move to Presenter ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಯಾರು ಬರೆದು ಕೊಡುತ್ತಿದ್ದಾರೆ ಅವರ ಬಗ್ಗೆ ವಿವರ ದೊರೆಯಲಿದೆ. ಅವರನ್ನೆ ಸೆಲೆಕ್ಟ್ ಮಾಡಿ Make presenter ಮೇಲೆ ಕ್ಲಿಕ್ ಮಾಡಿ.

(iii) Identifier- 1&2: ನಂತರ ನಾವು ಇಬ್ಬರು ಗುರುತಿಸುವವರನ್ನ ಆಯ್ಕೆ ಮಾಡಬೇಕಾಗುತ್ತದೆ. ಅವರ ವಿವರಗಳನ್ನು ಇಲ್ಲಿ ನಮೂದಿಸಿ.

13.ಮಾರ್ಕೆಟ್ ವಾಲ್ಯುವೇಷನ್ ಇದೆಯೋ ಇಲ್ಲವೋ ಎಂಬುದನ್ನ ಈ ಪೇಜ್ ನಿಮಗೆ ತಿಳಿಸಲಿದೆ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿದರೆ

14.ನೀವು ಬ್ಯಾಂಕಿನಲ್ಲಿ ತೆಗೆದುಕೊಳ್ಳಲಿರುವ ಮೊತ್ತವನ್ನು ನಮೂದಿಸಬೇಕು. ಎಷ್ಟು ಪೇಜ್ ಗಳಿವೆ ಎಂಬುದನ್ನು ಸೆಲೆಕ್ಟ್ ಮಾಡಿ, ಕಾಲ್ಕುಲೇಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಎಷ್ಟು ಮೊತ್ತವನ್ನು ಕಟ್ಟಬೇಕು ಎಂಬುದನ್ನು ಅದು ತೋರಿಸುತ್ತದೆ. ಸೇವ್ ಅಂಡ್ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.

15.ನಂತರ ನಿಮ್ಮ ಸಂಪೂರ್ಣ ವಿವರ ನಿಮ್ಮ ಮುಂದೆ ಬರಲಿದೆ, ಅದನ್ನು ಸರಿಯಾಗಿ ಇದೆಯಾ ಎಂದು ಚೆಕ್ ಮಾಡಿ ನಂತರ ನೀವು ಸಲ್ಲಿಸಬೇಕಾದ ಡೀಡ್ ಡಾಕ್ಯುಮೆಂಟ್ ಮತ್ತು ಅನೆಕ್ಷರ್ (ಖಾತಾಪತ್ರ,ಆಧಾರ್ ಕಾರ್ಡ್) ಅನ್ನು ಉಪಲೋಡ್ ಮಾಡಿ.

16. Execution Date ಅನ್ನು ಸೆಲೆಕ್ಟ್ ಮಾಡಿ

17. ಸಬ್ ರಿಜಿಸ್ಟ್ರಾರ್ ಕಛೇರಿಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿಗೆ ನೋಂದಣಿ ಪೂರ್ವ DTD ಯ ಕೆಲಸ ಮುಗಿದಂತೆ.

Related News

spot_img

Revenue Alerts

spot_img

News

spot_img