26.7 C
Bengaluru
Sunday, December 22, 2024

ಬ್ಯಾಂಕ್ ವಿರುದ್ಧ ದೂರು ನೀಡಬೇಕು ಆದರೆ ಹೇಗೆ ಎಂದು ಗೊತ್ತಿಲ್ವಾ..? ಈ ಸುದ್ದಿ ನೋಡಿ..

ಬೆಂಗಳೂರು, ಏ. 05 : ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ವಿರುದ್ಧ ದೂರು ಸಲ್ಲಿಸಬೇಕೇ..? ಆದರೆ ಎಲ್ಲಿ ದೂರು ನೀಡುವುದು..? ಹೇಗೆ ನೀಡೋದು ಎಂಬ ಬಗ್ಗೆ ನಿಮಗೆ ಮಾಹಿತಿ ಗೊತ್ತೊಲ್ವಾ..? ಹಾಗದರೆ, ಈ ಲೇಖನವನ್ನು ಸಂಪೂರ್ಣವಾಗಿ ಓದಿ.. ಇದರಲ್ಲಿ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳ ವಿರುದ್ಧ ದೂರು ನೀಡುವುದು ಹೇಗೆ ಎಂದು ತಿಳಿಸಿದ್ದೇವೆ.

ಗ್ರಾಹಕರು ಯಾವುದೇ ಬ್ಯಾಂಖ್‌ ವಿರುದ್ಧ ದೂರು ನೀಡಬೇಕೆಂದರೆ ಅವಕಾಶವಿದೆ. ಆದರೆ, ಈ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ ಅಷ್ಟೇ. ಯಾವುದೇ ಬ್ಯಾಂಕ್, ಎನ್ ಬಿಎಫ್ ಸಿ ಅಥವಾ ಪಾವತಿ ವ್ಯವಸ್ಥೆ ಸಂಸ್ಥೆಗಳ ವಿರುದ್ಧ ಆರ್ ಬಿಐ- ಇಂಟಿಗ್ರೇಟೆಡ್ ಒಂಬುಡ್ಸ್ ಮನ್ ಯೋಜನೆ ಅಡಿಯಲ್ಲಿ ದೂರು ಸಲ್ಲಿಸಬಹುದು. https://cms.rbi.org.in ನಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 14440 ಸಂಖ್ಯೆಗೆ ಕೂಡ ಕರೆ ಮಾಡಬಹುದು.

ಬ್ಯಾಮಕ್‌ ವಿರುದ್ಧ ದೂರು ದಾಖಲಿಸುವುದು ಹೇಗೆ?
ಆರ್ ಬಿಐ ದೂರು ನಿರ್ವಹಣಾ ವ್ಯವಸ್ಥೆಯಲ್ಲಿ ಗ್ರಾಹಕರು ದೂರು ದಾಖಲಿಸಬಹುದು. ಮೊದಲು https://cms.rbi.org.in ವೆಬ್ ಸೈಟ್ ಗೆ ಭೇಟಿ ಕೊಡಿ. ಇದರಲ್ಲಿ file a complaint ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ Captcha code ಬರುತ್ತದೆ. ಅದನ್ನು ನಮೂದಿಸಿ. ದೂರುದಾರರು ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ Get OTP ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್‌ ಗೆ ಬರುವ OTP ಅನ್ನು ನಮೂದಿಸಬೇಕು.

ಇ-ಮೇಲ್ ಸೇರಿದಂತೆ ಇತರ ಹೆಚ್ಚುವರಿ ಮಾಹಿತಿಗಳನ್ನು ಕೂಡ ಇದರಲ್ಲಿ ಭರ್ತಿ ಮಾಡಬೇಕು. ದೂರಿನ ವರ್ಗವನ್ನು ಡ್ರಾಪ್ ಡೌನ್ ನಿಂದ ಆಯ್ಕೆ ಮಾಡಿಕೊಳ್ಳಿ. ಐಾವ ಅಥವಾ ಎನ್ ಬಿಎಫ್ ಸಿ ವಿರುದ್ಧ ದೂರು ನೀಡಬೇಕು ಎಂದುಕೊಂಡಿದ್ದೀರೋ ಅದರ ಮಾಹಿತಿಗಳನ್ನು ಕೂಡ ನಮೂದಿಸಿ. ಪ್ರಶ್ನೆಯ ಆಧಾರದಲ್ಲಿ ರೇಡಿಯೋ ಬಟನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ Next ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸಂಬಂಧಪಟ್ಟ ಸಂಸ್ಥೆಗೆ ನೀವು ಈಗಾಗಲೇ ದೂರು ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ Yes ಅಥವಾ No ಎಂದು ಆಯ್ಕೆಯನ್ನು ಆರಿಸಿ. ನೀವು ದೂರು ನೀಡುತ್ತಿರುವ ದಿನಾಂಕವನ್ನು ನಮೂದಿಸಿ.

ಬಳಿಕ ನಿಮ್ಮ ಮೊಬೈಲ್ ಅಥವಾ ಸಿಸ್ಟ್ಂ ನಲ್ಲಿರುವ ಫೈಲ್ ಅಪ್ಲೋಡ್ ಮಾಡಿ. ವಹಿವಾಟಿನ ಮೊತ್ತ ಹಾಗೂ ದಿನಾಂಕದ ಜೊತೆಗೆ ಸಮಸ್ಯೆಯ ಮಾಹಿತಿಗಳನ್ನು ಸೇರಿಸಿ ಅದಕ್ಕೆ ಸಂಬಂಧಿಸಿದ ಬಟನ್ ಆಯ್ಕೆ ಮಾಡಿ. ನಿಮ್ಮ ವಹಿವಾಟನ್ನು ಬೆಂಬಲಿಸುವ ಯಾವುದೇ ದಾಖಲೆಗಳಿದ್ದರೆ ಅಪ್ಲೋಡ್ ಮಾಡಿ. ನಂತರ Authorisation ಮೇಲೆ ಕ್ಲಿಕ್ ಮಾಡಿ. ಕೊನೆಯಲ್ಲಿ declaration ಟಿಕ್ ಮಾಡಿ. ಆಗ ನಿಮಗೆ Review and Submit ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ. ಎಲ್ಲಾ ಮುಗಿದ ಬಳಿಕ ನಿಮ್ಮ ದೂರಿನ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಿ. ಬೇಕಿದ್ದರೆ, ಪ್ರಿಂಟೌಟ್‌ ಅನ್ನು ತೆಗೆದುಕೊಳ್ಳಬಹುದು

Related News

spot_img

Revenue Alerts

spot_img

News

spot_img