ಬೆಂಗಳೂರು, ಮೇ. 18 : ನಗರಗಳಲ್ಲಿ ಅತಿ ಹೆಚ್ಚು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿದ್ದರೆ, ಬ್ಯಾಚ್ಯುಲರ್ಸ್ ಗಳು ಪಿಜಿಗಳಲ್ಲಿ ತಂಗುವ ಅವಕಾಶವಿದೆ. ಆದರೆ ವಿವಾಹಿತರು, ಕೆಲಸ ಹರಸಿ ಬಂದು ಲಕ್ಷಾಂತರ ಮಂದಿಗೆ ಬಾಡಿಗೆ ಮನೆಗಳೇ ಸೂಕ್ತ. ಹೀಗಿರುವಾಗ ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಬಾಡಿಗೆ ಮನೆಗಳು ಇವೆ. ಆದರೆ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಹಲವರಿಗೆ ಇದರ ಹಕ್ಕು ಗಳು ಕೊಂಚವೂ ತಿಳಿದಿರುವುದಿಲ್ಲ. ಈ ಲೇಖನದಲ್ಲಿ ಬಾಡಿಗೆ ಮನೆಯವರು ತಿಳಿದಿರಬೇಕಾದ ಕೆಲ ನಿಯಮಗಳ ಬಗ್ಗೆ ತಿಳಿಯೋಣ.
ಬಾಡಿಗೆ ಮನೆಯಲ್ಲಿ ವಾಸ ಮಾಡುವ ಅನೇಕರಿಗೆ ಮನೆ ಮಾಲೀಕರಿಂದ ಕೆಲ ಕಿರಿಕಿರಿಗಳು ಪದೇ ಪದೇ ಆಗುತ್ತಿರುತ್ತದೆ. ಇದ್ದಕ್ಕಿದ್ದ ಹಾಗೆ ಬಾಡಿಗೆಯನ್ನು ಹೆಚ್ಚಿಸುತ್ತಾರೆ. ಕೆಲವೊಮ್ಮೆ ಬೇಕಂತಲೇ ಬಾಡಿಗೆ ಮನೆಗಳಿಗೆ ನೆಂಟರು, ಸ್ನೇಹಿತರು ಬರಕೂಡದು ಒಂದು ತಾಕೀತು ಮಾಡುತ್ತಾರೆ. ಏಕಾಏಕಿ ಮನೆ ಖಾಲಿ ಮಾಡುವಂತೆ ಹೇಲುತ್ತಾರೆ. ನಿತ್ಯ ಮನೆಗೆ ಬಂದು ಕಿರಿ ಕಿರಿ ಮಾಡುತ್ತಾರೆ. ಬಾಡಿಗೆ ಮನೆಗೆ ಯಾಕಾದರೂ ಬಂದೆವೋ. ನಮಗೆ ಇಷ್ಟು ಬಾಡಿಗೆ ಕೊಟ್ಟರೂ ಪ್ರೈವೆಸಿಯೇ ಇಲ್ಲ ಎಂದು ಹಲವರು ನೊಂದುಕೊಳ್ಳುತ್ತಾರೆ.
ಆದರೆ, ಕಾನೂನಿನ ಪ್ರಕಾರ ಬಾಡಿಗೆ ಮನೆಯವರಿಗೆ ಕೆಲ ಹಕ್ಕು ಗಳನ್ನು ನೀಡಲಾಗಿದೆ ಅದರಂತೆ ಅವರಿಗೆ ತಾವಿರುವ ಮನೆಯಲ್ಲಿ ಸಮಸ್ಯೆ ಆದರೆ ನ್ಯಾಯ ಕೇಳುವ ಹಕ್ಕಿದೆ. ಹೌದು. ಮನೆ ಮಾಲೀಕರಿಂದ ರಕ್ಷಿಸಿಕೊಳ್ಳಲು ಕೆಲ ನಿಯಮಗಳ ಬಗ್ಗೆ ನೀವು ತಿಳಿದರಲೇ ಬೇಕು. ಒಮ್ಮೆ ನೀವು ಬಾಡಿಗೆ ಮನೆಗೆ ಬಂದು ಕಾನೂನಿನ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಂಡ ಬಳಿಕ ಮನೆಯ ಮಾಲೀಕರು ಯಾವಾಗ ಎಂದರೆ ಆಗ ಮನೆಯ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ.
ಅಷ್ಟೇ ಅಲ್ಲ, ನಿಮ್ಮ ಮನೆಗೆ ಬಂದು ಹೋಗುವವರನ್ನು ತಡೆಯುವ ಹಕ್ಕೂ ಅವರಗೆ ಇರುವುದಿಲ್ಲ. ಹಾಗೇನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನೀವು ಮನೆಗೆ ಬರುವ ಮುನ್ನವೇ ತಿಳಿಸಿ, ಒಪ್ಪಂದದಲ್ಲಿ ನಮೂದಿಸಬೇಕು. ಇನ್ನು ಮನೆ ಮಾಲೀಕರು ತಮ್ಮ ಮನೆ ಎಂಬ ಕಾರಣಕ್ಕೆ ಒಮ್ಮೆ ಬಾಡಿಗೆಗೆ ಕೊಟ್ಟ ನಂತರ ಯಾವಾಗ ಎಂದರೆ ಆವಾಗ ಮನೆಗೆ ಬರುವಂತಿಲ್ಲ. ನಿಮ್ಮ ಮನೆಗೆ ಬರುವ ಮುನ್ನ ಪರ್ಮಿಷನ್ ಅನ್ನು ಕೇಳಿ, ನಿಮ್ಮ ಒಪ್ಪಿಗೆಯನ್ನು ಪಡೆದು ನಂತರವಷ್ಟೇ ಬರುವ ಅವಕಾಶವಿದೆ.
ಇನ್ನು ಬಾಡಿಗೆ ಮನೆಯಲ್ಲಿ ಯಾವುದಾದರೂ ರಿಪೇರಿಗಳಿದ್ದರೆ, ಅದನ್ನು ಮನೆ ಮಾಲೀಕರೇ ಮಾಡಿಸಬೇಕು. ಸಣ್ಣ ಪುಟ್ಟ ರಿಪೇರಿಗಳಿಗೆ ಮಾತ್ರವೇ ನೀವು ಮಾಡಿಸಬಹುದು. ಇನ್ನು ಮನೆಯ ಅಗ್ರಿಮೆಂಟ್ ನ ಒರಿಜಿನಲ್ ಕಾಪಿ ಅನ್ನು ಮಾಲೀಕರು ಇಟ್ಟುಕೊಂಡಿರುತ್ತಾರೆ. ಅದರ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಸೂಕ್ತ. ನಿಮಗೆ ಮಾಲೀಕರಿಂದ ತೋಮದರೆ ಎನಿಸಿದಾಗ, ಸ್ಥಳೀಯ ಪ್ರಾಧಿಕಾರಕ್ಕೆ ತಿಳಿಸಬಹುದು. ಆಗ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಅನ್ನು ಬಗೆ ಹರಿಸುತ್ತಾರೆ.