21.1 C
Bengaluru
Monday, July 8, 2024

ಏನಿದು ಹಳೆಯ ಎನ್‌ʼಪಿಎಸ್‌ ಹಾಗೂ ಹೊಸ ಪಿಂಚಣಿ ಯೋಜನೆ : ಹೋರಾಟಕ್ಕೆ ಕಾರಣವೇನು..?

ಬೆಂಗಳೂರು, ಡಿ. 22: ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕಳೆದು ಹಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ. ಹಳೆಯ ಮತ್ತು ಹೊಸ ಪಿಂಚಣಿ ಯೋಜನೆಯಲ್ಲಿನ ವ್ಯಾತ್ಯಾಸಗಳೇನು ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ..
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ(ರಿ) ಹಳೆಯ ಪಿಂಚಣಿ ಯೋಜನೆ ಮತ್ತು ಒಪಿಎಸ್‌ ನಡುವಿನ ವ್ಯತ್ಯಾಸದ ಬಗ್ಗೆ ವಿವರವನ್ನು ನೀಡಿದ್ದಾರೆ. ಮೊದಲು ಹಳೆಯ ಪಿಂಚಣಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಹೋರಾಟಗಾರರ ಶತಪ್ರಯತ್ನದಿಂದ ಆದ ಬದಲಾವಣೆಗಳನ್ನು ವಿವರಿಸಲಾಗಿದೆ.

ಹಳೆಯ ಪಿಂಚಣಿ ಪದ್ಧತಿಯಲ್ಲಿ ಏನಿದೆ..?

ವಂತಿಕೆ ಕಟಾವಣೆ: ಹಳೆಯ ಪಿಂಚಣಿ ಪದ್ಧತಿಯಲ್ಲಿ ನೌಕರರ ವೇತನದಿಂದ ಯಾವುದೇ ಕಟಾವಣೆ ಇರುವುದಿಲ್ಲ.
ಜಿ.ಪಿ.ಎಸ್: ಜಿ.ಪಿ.ಎಫ್ ವಂತಿಕೆ, ಓಪಿಎಸ್ ನಲ್ಲಿ ಜಿ.ಪಿ.ಎಫ್ ನಿಧಿಗೆ ನೌಕರರು ವಂತಿಗೆಯನ್ನು ಕಟಾಯಿಸಿ ನಿಯಮಾನುಸಾರ ಸರ್ಕಾರದಿಂದ ಉಳಿತಾಯ ಮೊತ್ತಕ್ಕೆ ಬಡ್ಡಿಯನ್ನು ನಿರ್ಧರಿಸಿ ನೀಡಲಾಗುತ್ತಿತ್ತು. ಅಗತ್ಯ ಸಂದರ್ಭದಲ್ಲಿ ಜೆ.ಪಿ.ಎಫ್ ಆಡ್‌ವಾನ್ಸ್ ಮತ್ತು ವಿತ್ ಡ್ರಾ ಗೆ ಅವಕಾಶವಿತ್ತು.

ಡಿ.ಸಿ.ಆರ್.ಟಿ: ನಿವೃತ್ತಿ ಹೊಂದಿದ್ದವರಿಗೆ ನಿವೃತ್ತಿ ಉಪಧನ ಹಾಗೂ ಮರಣ ಹೊಂದಿದ ನೌಕರರ ಮರಣ ಉಪಧನವನ್ನು ನೌಕರರ ನಾಮ ನಿರ್ದೇಶಿತರಿಗೆ ನೀಡಲಾಗುವ ವ್ಯವಸ್ಥೆ ಜಾರಿಯಲ್ಲಿದೆ.
ಪರಿವರ್ತಿತ ಪಿಂಚಣಿ ಮೊತ್ತ: ಒಪಿಎಸ್ ನಲ್ಲಿ ನೌಕರನ ನಿವೃತ್ತಿ ಸಂದರ್ಭದಲ್ಲಿ ಪರಿವರ್ತಿತ ಪಿಂಚಣಿ ಮೊತ್ತವನ್ನು ನೀಡಲಾಗುತ್ತಿತ್ತು.

ನಿವೃತ್ತಿ ವೇತನ: ಓ.ಪಿ.ಎಸ್ ನೌಕರರು ನಿವೃತ್ತಿಯಾದ ಸಂದರ್ಭದಲ್ಲಿ ಅವರ ಸೇವಾವಧಿ ಮತ್ತು ಅಂತಿಮ ವೇತನಕ್ಕನುಗುಣವಾಗಿ ಗೌರವಯುತವಾದ ನಿವೃತ್ತಿ ವೇತನವನ್ನು ಪಡೆಯಲಾಗುತ್ತಿತ್ತು. ನೌಕರರಿಗೆ ವೇತನ ಪರಿಷ್ಕರಣೆಯಾದಂತೆ ಮತ್ತು ತುಟಿಭತ್ಯೆ ಪರಿಷ್ಠರಣೆಯಾದಂತೆ ಇದೇ ಸೌಲಭ್ಯಗಳು ಪಿಂಚಣಿದಾರರಿಗೂ ಅನ್ಯಾಯವಾಗುತ್ತಿತ್ತು.

ಸ್ವಯಂ ನಿವೃತ್ತಿ ಪಡೆದಾಗ ನಿವೃತ್ತಿ ವೇತನ: ಓ.ಪಿ.ಎಸ್ ನಲ್ಲಿ ಸ್ವಯಂ ನಿವೃತ್ತಿ ಪಡೆದ ನೌಕರರು ಪಿಂಚಣಿ ಅರ್ಹದಾಯಕ ಸೇವೆ ಸಲ್ಲಿಸಿದ್ದಲ್ಲಿ ಅವರಿಗೆ ಅವರ ಅರ್ಹ ಸೇವೆ ಹಾಗೂ ಅಂತಿಮ ವೇತನಕ್ಕನುಗುಣವಾಗಿ ನಿವೃತ್ತಿ ವೇತನ ಪರಿವರ್ತಿತ ಪಿಂಚಣಿ ಮೌಲ್ಯ ಹಾಗೂ ಡಿಸಿಆರ್‌ಜಿ ಮೊತ್ತ ಅವರಿಗೆ ಲಭಿಸಿ ಗೌರವಯುತ ಜೀವನ ನಡೆಸಲು ಸಹಕಾರಿಯಾಗಿತ್ತು.

ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸಂದರ್ಭ: ಈ ಸಂದರ್ಭದಲ್ಲಿ ಹಂಪಿಯಲ್ಲಿ ಅವರ ಸೇವಾವಧಿ ಮತ್ತು ವೇತನಕ್ಕನುಗುಣವಾಗಿ ಕುಟುಂಬ ಪಿಂಚಣಿ ಹಾಗೂ ಡಿ.ಸಿ.ಆರ್.ಜೆ ಮೊತ್ತವನ್ನು ನೀಡಲಾಗುತ್ತಿತ್ತು.
ನಿವೃತ್ತಿ ಹೊಂದಿ ನಂತರ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬ ಪಿಂಚಣಿ ಪಾವತಿ: ಹಳೆಯ ಪಿಂಚಣಿ ಪದ್ದತಿಯಲ್ಲಿ ನಿವೃತ್ತಿ ಹೊಂದಿದ ನೌಕರರು ಪಡೆದ ಪಿಂಚಣಿ ಆದೇಶದ ಪ್ರತಿಯಲ್ಲಿ ನೌಕರರ ನಿವೃತ್ತಿ ನಂತರ ಮರಣ ಹೊಂದಿದ ಸಂದರ್ಭದಲ್ಲಿ ಅವರ ಪತ್ನಿ/ಪತಿಗೆ ಸಿಗುವ ಕುಟುಂಬ ಪಿಂಚಣಿ ಮೊತ್ತವನ್ನು ನಮೂದಿಸಲಾಗುತ್ತದೆ.

ಸದರಿ ಪಿಂಚಣಿಯೂ ಸಹ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ತುಟಿಭತ್ಯೆ ಹೆಚ್ಚಳದ ಅನುಕೂಲತೆ ಹೊಂದಿರುತ್ತದೆ. ಒಂದು ವೇಳೆ ಪತಿ, ಪತ್ನಿಯು ಮರಣ ಹೊಂದಿದ್ದಲ್ಲಿ ಮಗಳು 21 ವರ್ಷ ಆಗುವರೆಗೆ ಮಗ 18 ವರ್ಷವಾಗುವರೆಗೆ ಹಾಗೂ ದಿವ್ಯಾಂಗ ಮಕ್ಕಳಿದ್ದಲ್ಲಿ ಅವರ/ ಅವಳ ಜೀವನ ಪರ್ಯಂತ ಕುಟುಂಬ ಪಿಂಚಣಿಯನ್ನು ನೌಕರನ ಕುಟುಂಬವು ಪಡೆಯುತ್ತಿತ್ತು.

 

ಎನ್.ಪಿ.ಎಸ್ ನೌಕರರ ಸಂಘದ ಅವಿರತ ಹೋರಾಟದಿಂದ ಆಗಿರುವ ಬದಲಾವಣಿಗಳು ಯಾವುವು..?

ಪ್ರಸ್ತುತ ನೌಕರರ ವೇತನದಲ್ಲಿ ಕಟ್ಟಾಯಿಸಿಟ್ಟಿದ್ದ ವಂತಿಗೆ ಶೇ 10 (ಮೂಲವೇತನ + ಹುಟ್ಟಿ ಭತ್ಯೆ)ಯನ್ನು ಕಟಾಯಿಸುವುದನ್ನು ಮುಂದುವರೆಸಲಾಗುತ್ತಿದೆ. ಆದರೆ ಎನ್.ಪಿ.ಎಸ್ ನೌಕರರ ಸಂಘದ ಹೋರಾಟದ ಫಲವಾಗಿ ಸರ್ಕಾರವು ಆದೇಶ ಸಂಖ್ಯೆ: ಎಫ್‌ಡಿ 37 ಪಿಇಎಸ್ 2019 ರನ್ವಯ ತನ್ನ ವಂತಿಗೆಯನ್ನು ಶೇ.14% ಗೆ ಹೆಚ್ಚಿಸಲಾಗಿದೆ.

ಜಿಪಿಎಫ್: NPS ಯೋಜನೆ ರದ್ದುಗೊಳಿಸಿ, OPS ಜಾರಿಗೊಳಿಸುವುದು ಸಂಘದ ಗುರಿಯಾಗಿರುವುದರಿಂದ OPS ಜಾರಿಯಿಂದ GPF ಸೌಲಭ್ಯವು ಪುನಃ ಪ್ರತಿಷ್ಠಾಪನೆಗೊಳ್ಳಲಿದೆ. ಡಿ.ಸಿ.ಆರ್.ಜಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೋರಾಟದ ಫಲವಾಗಿ ದಿನಾಂಕ:01.04.2006 ರಿಂದ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ದಿನಾಂಕ:01.04.2018 ರಿಂದ ಜಾರಿಗೆ ಬರುವಂತೆ ಮರಣ ಮತ್ತು ನಿವೃತ್ತಿ ಉಪಧಾನವನ್ನು ಜಾರಿಗೊಳಿಸಲಾಗಿತ್ತು.

ಮತ್ತೊಮ್ಮೆ ಸಂಘವು ಸದರಿ ಆದೇಶವನ್ನು ದಿನಾಂಕ:01.04.2006 ರಿಂದ ಪೂರ್ವಾನ್ವಯಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್/149/2022, ದಿನಾಂಕ:19.10.2022 ರನ್ವಯ ಜಾರಿಗೆ ಬರುವಂತೆ ವಿಸ್ತರಿಸಿ ಆದೇಶಿಸಲಾಗಿದೆ.
ಪರಿವರ್ತಿತ ಪಿಂಚಣಿ ಮೊತ್ತ: ಎಸ್.ಪಿ.ಎಸ್. ಯೋಜನೆ ರದ್ದುಗೊಳಿಸಿ ಓಪಿ.ಎಸ್ ಜಾರಿಗೊಳಿಸುವುದು ಸಂಘದ ಒತ್ತಾಸೆಯಾಗಿರುವುದರಿಂದ ಓಪಿಎಸ್ ಜಾರಿಯಿಂದ ಪರಿವರ್ತಿತ ಪಿಂಚಣೆ ಮೊತ್ತವು ನೌಕರರಿಗೆ ಲಭಿಸುವುದು.

ನಿವೃತ್ತಿ ವೇತನ: ನಿವೃತ್ತಿ ವೇತನವನ್ನು ಪುನರ್ ಪ್ರತಿಷ್ಠಾಪಿಸಿ ನಿವೃತ್ತಿರಿಗೆ ಗೌರವಯುತ ಹಾಗೂ ಅರ್ಹ ನಿವೃತ್ತಿ ವೇತನವನ್ನು ಪಡೆಯುವಂತೆ ಮಾಡುವುದು ಎನ್.ಪಿ.ಎಸ್ ನೌಕರರ ಸಂಘದ ಗುರಿಯಾಗಿರುತ್ತದೆ.
ಸ್ವಯಂ ನಿವೃತ್ತಿ ಪಡೆದಾಗ ನಿವೃತ್ತಿ ವೇತನ: ಹಳೆ ಪಿಂಚಣೆ ಪದ್ಧತಿಯನ್ನು ಪುನರ್ ಪ್ರತಿಷ್ಠಾಪಿಸುವದರಿಂದ ಮಾತ್ರವೇ ಸ್ವಯಂ ನಿವೃತ್ತಿ ಪಡೆದ ನೌಕರರು ಅರ್ಹ ಮತ್ತು ಗೌರವಯುತವಾದ ಪಿಂಚಣಿ ಪಡೆಯುವ ಅವಕಾಶವಾಗುತ್ತದೆ.

ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸಂದರ್ಭ: ಎನ್‌ಪಿಎಸ್ ನೌಕರರ ಸಂಘದ ಅವಿರತ ಹೋರಾಟ ಹಾಗೂ ಒತ್ತಾಸೆಯ ಫಲವಾಗಿ ಸರ್ಕಾರಿ ಆದೇಶ ಸಂಖ್ಯೆ: ಸಇಕ/34/ 2018(ಭಾ) ಬೆಂಗಳೂರು 19/08/2021 ರಂದು 01/04/2018 ರಿಂದ ಅನ್ವಯವಾಗುವಂತೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ನೌಕರರ ನಾಮ ನಿರ್ದೇಶಿತರಿಗೆ ನಿವೃತ್ತಿ ಉಪದಾನ ಮರಣ ಉಪದಾನ ಕುಟುಂಬ ಪಿಂಚಣಿಯಲ್ಲಿ ಸೌಲಭ್ಯವನ್ನು ಜಾರಿಗೊಳಿಸಲಾಯಿತು.

ಮುಂದೆ ಸರ್ಕಾರದ ಆದೇಶ ಸಂಖ್ಯೆ ಆಇ- ಪಿಇಎನ್/149/2022, ದಿ:-19/10/2022 ರ ಆದೇಶದನ್ವಯ ಈ ಸೌಲಭ್ಯವನ್ನು 01/04/2006ರಿಂದ ಜಾರಿಗೆ ಬರುವಂತೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ. ಸಂಘದ ಅಂತಿಮ ಗುರಿ ಒಪಿಎಸ್‌ ಮರು ಪ್ರತಿಸ್ಥಾಪನೆ ಇದರೊಂದಿಗೆ ನಿವೃತ್ತಿ ಹೊಂದಿ ನಿಧನರಾದ ನೌಕರರ ಕುಟುಂಬಕ್ಕೆ ಪಿಂಚಣಿ ವ್ಯಾಪ್ತಿ ವಿಸ್ತಾರಗೊಂಡು ಅವಲಂಬಿತತರು ಗೌರವಯುತ ಜೀವನ ನಡೆಸುವುದು ಸಾಧ್ಯವಾಗುತ್ತದೆ.

Related News

spot_img

Revenue Alerts

spot_img

News

spot_img