25.8 C
Bengaluru
Friday, November 22, 2024

ಕೆಂಪೇಗೌಡ ಬಡಾವಣೆ ನಿರ್ಮಾಣ ಕಾರ್ಯದಲ್ಲಿ ವಿಳಂಬ

ಬೆಂಗಳೂರು, ಜು. 19 : ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದ ಕಾರ್ಯ ಚುರುಕುಗೊಳ್ಳುವ ಸಾಧ್ಯತೆಯೇ ಕಾಣುತ್ತಿಲ್ಲ. ಈ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ದೊರೆ 14ವರ್ಷಗಳೇ ಕಳೆದಿದೆ. ಇನ್ನೂ ಕೂಡ 4,043 ಎಕರೆ ಜಮೀನನ ಪೈಕಿ 1656 ಎಕರೆ ಭೂಮಿಯನ್ನು ಇನ್ನೂ ಸ್ವಾಧಿನ ಪಡಿಸಿಕೊಂಡಿಲ್ಲ. ಮಂದಗತಿಯಲ್ಲಿ ಬಡಾವಣೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಿವೇಶನ ಹಂಚಿಕೆದಾರರು ಆತಂಕ ಪಡುವಂತಹ ಸ್ಥಿತಿ ಎದುರಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೆಂಪೇಗೌಡ ಬಡಾವಣೆಗೆ ನಾಲ್ಕು ಗ್ರಾಮಗಳು ಸೇರ್ಪಡೆಯಾಗಿವೆ. ಸೀಗೆಹಳ್ಳಿ, ಕನ್ನಲ್ಲಿ, ಕೊಡಿಗೇಹಳ್ಳಿ, ಮಂಗನಹಳ್ಳಿ ಸೇರಿಕೊಂಡಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯಲ್ಲಿ 8 ಗ್ರಾಮಗಳು ಸೇರಿವೆ. ಅವುಗಲೆಂದರೆ, ಕೊಮ್ಮಘಟ್ಟ, ಭೀಮನಕುಪ್ಪೆ-ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂದ್ರ ಕೊಮ್ಮಘಟ್ಟ, ಕೃಷ್ಣಸಾಗರ, ಚಲ್ಲಘಟ್ಟ ಗ್ರಾಮಗಳಿವೆ.

ಒಟ್ಟಾಗಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 4,043 ಎಕರೆ ಜಮೀನನ್ನು ಒಳಪಡಿಸಲಾಗಿದೆ. ಇದರಲ್ಲಿ ಸದ್ಯ 2,694 ಎಕರೆಯಷ್ಟು ಜಮೀನು ಅನ್ನು ಮಾತ್ರವೇ ಸ್ವಾಧೀನ ಪಡಿಸಿಕೊಂಡಿದ್ದು, ಇದನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿದೆ. ಇದರಲ್ಲಿ 2,217 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿಐನ್ನು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ. ಉಳಿದಿರುವ 167 ಎಕರೆಯಲ್ಲಿ ಬಡಾವಣೆಯ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

2014ರಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಟೆಂಡರ್ ಕರೆದಿತ್ತು. ಸಂಸ್ಥೆಯೊಂದಕ್ಕೆ ಇದರ ಗುತ್ತಿಗೆಯನ್ನು ನೀಡಿತ್ತು. ಆದರೆ, ಜಮೀನನ್ನು ಹಂತ ಹಂತವಾಗಿ ಸ್ವಾಧೀನಪಡಿಸಿಕೊಂಡ ಬಿಡಿಎ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುವಾಗ ತಡವಾಯ್ತು, ಇದರಿಂದಾಗಿ ಗುತ್ತಿಗೆದಾರರು ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡಲು ಶುರು ಮಾಡಿದರು. ಇಂದಿಗೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ಒಳಚರಂಡಿ, ಕುಡಿಯುವ ನೀರಿನ ಕೊಳವೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ.

Related News

spot_img

Revenue Alerts

spot_img

News

spot_img