22.9 C
Bengaluru
Friday, July 5, 2024

ಕಾವೇರಿ 2.0 ತಂತ್ರಾಂಶದಲ್ಲಿ ದೋಷ : ತೊಂದರೆಗೆ ಸಿಲುಕಿದ ಸಾರ್ವಜನಿಕರು, ಸರ್ಕಾರಕ್ಕೆ ನಷ್ಟ

ಬೆಂಗಳೂರು, ಆ. 11 : ಈಗ ರಾಜ್ಯದ ಹಲವು ನೋಂದಣಿ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಲಾಗಿದೆ. ಇದರಿಂದ ಆಸ್ತಿ ನೋಂದಣಿ ಕೆಲಸಗಳು ಸುಲಭವಾಗುತ್ತದೆ. ಮೊದಲಿನಂತೆ ಗಂಟೆ ಗಟ್ಟಲೆ ಉಪನೋಂದಣಿ ಕಚೇರಿಗಳಲ್ಲಿ ಕಾಯುವ ಅಗತ್ಯವಿಲ್ಲ. ಆದರೆ, ತುಮಕೂರಿನ ಕಚೇರಿಯಲ್ಲಿ ತಾಂತ್ರಿಕ ದೋಷವುಂಟಾಗಿದ್ದು, ಆಸ್ತಿಗಳ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಈ ಬಗ್ಗೆ ಇದರಿಂದಾಗಿ ಜನರು ಆಕ್ರೋಶಗೊಂಡು ಕೆಲವೆಡೆ ಕಚೇರಿಗಳಲ್ಲಿ ಗಲಾಟೆ ಮಾಡಿದ್ದಾರೆ.

ತಾಂತ್ರಿಕ ತೊಂದರೆಯಿಂದ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತುಮಕೂರು ಉಪ ನೋಂದಣಿ ಅಧಿಕಾರಿಗಳು ವಿನಂತಿ ಮಾಡಿದ್ದಾರೆ. ತುಮಕೂರಿನಲ್ಲಷ್ಟೇ ಅಲ್ಲದೇ, ರಾಜ್ಯದ ಇತರೆ ಉಪನೋಂದಣಿ ಕಚೇರಿಗಳಲ್ಲೂ ಇದೇ ಘಟನೆ ನಡೆದಿದೆ. ರಾಜ್ಯಾದ್ಯಂತ ಕಾವೇತಿ 2.0 ತಾಂತ್ರಿಕ ದೋಷದಿಂದ ಸಮಸ್ಯೆ ಎದುರಾದರೂ ಕೂಡ ಕೆಲವಡೆ ಸಾರ್ವಜನಿಕರು ಕಚೇರಿಗಳ ಮೇಲೆ ಮುಗಿಬಿದ್ದಿದ್ದಾರೆ. ಕಾವೇರಿ 2.0 ತಂತ್ರಾಂಶ ವೈಫಲ್ಯದಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದ್ದು, ಇದರಿಂದ ಸರ್ಕಾರಕ್ಕೆ ಬರಬೇಕಿದ್ದ ಆದಾಯಕ್ಕೂ ಕುತ್ತು ಬಂದಿದೆ.

ಸರ್ಕಾರಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ಆದಾಯದ ನಷ್ಟ ಉಂಟಾಗಿದೆ. ಸರ್ಕಾರಕ್ಕೆ ನೋಂದಣಿ ಕಾರ್ಯದಿಂದ 25 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಟಾರ್ಗೆಟ್ ನೀಡಲಾಗಿತ್ತು. ಜೊತೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಈವರೆಗೂ ಕೇವಲ 3 ಸಾವಿರ ಕೋಟಿ ಸಂಗ್ರಹವಾಗಿದೆ. ಉಳಿದ ಮೊತ್ತವನ್ನು ಇನ್ನು ಬಾಕಿ ಉಳಿದಿರುವ 7 ತಿಂಗಳಿನಲ್ಲಿ ಸಂಗ್ರಹಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ದುರಾದೃಷ್ಟವಶಾತ್ ಕಾವೇರಿ 2.0 ತಂತ್ರಾಂಶದ ಉಸ್ತುವಾರಿ ಆಗಿರುವ ಎಐಜಿಅರ್ ಎಚ್. ಎಲ್ ಪ್ರಭಾಕರ್ ಅವರು ಕೂಡ ರಜೆಯಲ್ಲಿದ್ದಾರೆ. ಇಂತಹ ಸಂಧರ್ಭದಲ್ಲೇ ತಂತ್ರಾಂಶವೂ ಕೈಕೊಟ್ಟಿದೆ. ರಾಜ್ಜ್ಯಾದಂತ ಈಗಾಗಲೇ ಕಾವೇರಿ 2.0 ತಂತ್ರಾಂಶವನ್ನು ರಾಜ್ಯದ ಎಲ್ಲಾ ಕಡೆಗಳಲ್ಲೂ ಅಳವಡಿಸಲಾಗಿದೆ. ಒಂದೇ ಬಾರಿಗೆ ಎಲ್ಲಾ ನೋಂದಣಿ ಕಚೇರಿಗಳಲ್ಲಿ ತಂತ್ರಾಂಶ ಕೈ ಕೊಟ್ಟಿರುವುದು ಸಾರ್ವಜನಿಕರಿಗೆ ಹಾಗೂ ನೌಕರರಿಗೂ ತೊಂದರೆ ಎದುರಿಸುವಂತಾಗಿದೆ.

Related News

spot_img

Revenue Alerts

spot_img

News

spot_img