25.1 C
Bengaluru
Thursday, November 21, 2024

ಕರ್ನಾಟಕದಲ್ಲಿ ಏಪ್ರಿಲ್‌ 26, ಮೇ 7 ರಂದು 2 ಹಂತದಲ್ಲಿ ಮತದಾನ

ಬೆಂಗಳೂರು;2024ರ ಲೋಕಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗದ (Election Commission of India) ರಾಜೀವ್‌ ಕುಮಾರ್‌ ಅವರು ಚುನಾವಣಾ ದಿನಾಂಕಗಳನ್ನು (Voting Dates) ಪ್ರಕಟಿಸಿದರು.ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.ಕರ್ನಾಟಕದಲ್ಲಿ 2 ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತವು ಏ.26ರಂದು ರಾಜ್ಯದ ದಕ್ಷಿಣ ಭಾಗದಲ್ಲಿ ಮತದಾನ ನಡೆದರೆ, ಮೇ 7ರಂದು ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

 

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು

ಬೆಂಗಳೂರು ಕೇಂದ್ರ

ದಕ್ಷಿಣ ಕನ್ನಡ

ಚಿತ್ರದುರ್ಗ

ಉಡುಪಿ-ಚಿಕ್ಕಮಗಳೂರು

ದಕ್ಷಿಣ ಕನ್ನಡ

ಹಾಸನ

ತುಮಕೂರು

ಚಿಕ್ಕಬಳ್ಳಾಪುರ

ಕೋಲಾರ

ಮಂಡ್ಯ

ಮೈಸೂರು-ಕೊಡಗು

ಚಾಮರಾಜನಗರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಎರಡನೇ ಹಂತದ ಮತದಾನದ ವಿವರ ಹೀಗಿದೆ

ಚುನಾವಣೆ ಘೋಷಣೆ: ಮಾರ್ಚ್‌ 16

ಗಜೆಟ್‌ ನೋಟಿಫಿಕೇಶನ್‌: ಮಾರ್ಚ್‌ 28

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್‌ 04

ನಾಮಪತ್ರ ಪರಿಶೀಲನೆ: ಏಪ್ರಿಲ್‌ 05

ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್‌ 08

ಮತದಾನದ ದಿನಾಂಕ: ಏಪ್ರಿಲ್‌ 26, ಶುಕ್ರವಾರ

 

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು 

ಹಾವೇರಿ-ಗದಗ

ಬಳ್ಳಾರಿ

ಬೆಳಗಾವಿ

ಚಿಕ್ಕೋಡಿ

ಕಲಬುರಗಿ

ಬೀದರ್​

ಹುಬ್ಬಳಿ – ಧಾರವಾಡ

ಕೊಪ್ಪಳ

ರಾಯಚೂರು

ಉತ್ತರ ಕನ್ನಡ

ದಾವಣಗೆರೆ

ಶಿವಮೊಗ್ಗ

ಬಾಗಲಕೋಟೆ

ವಿಜಯಪುರ

Related News

spot_img

Revenue Alerts

spot_img

News

spot_img