22.4 C
Bengaluru
Thursday, October 31, 2024

ಜನರ ಹೀರುವ 51 ಕರ್ನಾಟಕ ಟೋಲ್ ರೋಡ್ ಅಸಲಿ ಪಟ್ಟಿ ನೋಡಿ! ಟೋಲ್ ಕಟ್ಟದ ರಾಜಕಾರಣಿಗಳು ಹೋರಾಟ ಮಾಡುತ್ತಿರುದ್ಯಾಕೆ ?

ಬೆಂಗಳೂರು: ಪ್ರಜಾತಂತ್ರದಲ್ಲಿ ಆಹಾರ, ಸಾರಿಗೆ, ಶಿಕ್ಷಣವನ್ನು ಒದಗಿಸುವುದೇ ಸರ್ಕಾರದ ಮೂಲ ಉದ್ದೇಶ. ಆದ್ರೆ ನಮ್ಮ ದೇಶದಲ್ಲಿ ರಸ್ತೆ ಸೌಕರ್ಯದ ಹೆಸರಿನಲ್ಲಿ ಬಡವರ ರಕ್ತ ಹೀರಲಾಗುತ್ತಿದೆ.

ದಶಕಗಳ ಹಿಂದೆ ನಿರ್ಮಿಸಿದ್ದ ರಸ್ತೆಗಳಿಗೆ ‘ತೇಪೆ’ ಹಾಕಿ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬೆಂಗಳೂರು- ಮೈಸೂರು ಆರು ಪಥ ರಸ್ತೆಗೆ ವಿಧಿಸಿರುವ ಟೋಲ್ ಶುಲ್ಕ ನೋಡಿ ಸಾರ್ವಜನಿಕರು ಎಕ್ಸ್‌ಪ್ರೆಸ್ ವೇ ಸಹವಾಸವನ್ನೇ ಬಿಟ್ಟಿದ್ದಾರೆ. ಜೀವನದಲ್ಲಿ ಐದು ಪೈಸೆ ಟೊಲ್ ಕಟ್ಟದೆ ವಿನಾಯಿತಿ ಪಡೆದಿರುವ ‘ಜನ ಪ್ರತಿನಿಧಿಗಳು’ ಟೋಲ್ ಶುಲ್ಕ ದುಬಾರಿ ಅಂತ ಡೊಂಗಿ ಪ್ರತಿಭಟನೆ ಮಾಡಿದ್ದಾರೆ. ಈ ಜನ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ನ್ಯಾಯಾಧೀಶರಿಗೆ ( ಉಳ್ಳವರಿಗೆ ) ಟೋಲ್ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ. ಕೇವಲ ಖಾಸಗಿ ವ್ಯಕ್ತಿಗಳು ( ಬಡವರು) ಮಾತ್ರ ತಮ್ಮ ವಾಹನಗಳಿಗೆ ಟೋಲ್ ಕಟ್ಟುವ ವ್ಯವಸ್ಥೆ ನಮ್ಮಲ್ಲಿರುವುದು!

ಇನ್ನು ಟೋಲ್ ಶುಲ್ಕದ ಹೆಸರಿನಲ್ಲಿ ಬೆಂಗಳೂರು- ಮೈಸೂರು ಎಕ್ಸ್ಪ್ರಪ್ರೆಸ್ ವೇ ನಲ್ಲಿ ಮಾತ್ರ ಸುಲಿಗೆ ಮಾಡುತ್ತಿಲ್ಲ. ಆ ವಿಚಾರಕ್ಕೆ ಬಂದರೆ ಕರ್ನಾಟಕದ ಹೆದ್ದಾರಿಗಳನ್ನು ಟೋಲ್ ಸುಲಿಗೆಗೆ ಗುತ್ತಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಬರೋಬ್ಬರಿ 51 ಟೋಲ್ ವಸೂಲಿ ರಾಷ್ಟ್ರೀಯ ಹೆದ್ದಾರಿಗಳಿವೆ. ಇನ್ನು ಬೆಂಗಳೂರಿನಲ್ಲಿ ಕಿ.ಮೀ. 6 ರೂಪಾಯಿ ಟೋಲ್ ಶುಲ್ಕ ವಿಧಿಸಿ ಮುಂಡ ಮೋಚುತ್ತಿರುವ ನೈಸ್ ರಸ್ತೆ ಇದಕ್ಕೆ ಸೇರ್ಪಡೆಯಾಗಿಲ್ಲ!

ಒಂದು ವಾಹನ ಖರೀದಿ ಮಾಡಿದ ಕೂಡಲೇ ಲಕ್ಷ ಲಕ್ಷ ರಸ್ತೆ ತೆರಿಗೆಯನ್ನು ಸಾರಿಗೆ ಇಲಾಖೆ ವಸೂಲಿ ಮಾಡುತ್ತದೆ. ಆದ್ರು ಈ ಟೋಲ್ ಯಾಕೆ ಕಟ್ಟಬೇಕು ಎನ್ನುವ ಮೂಲ ಪ್ರಶ್ನೆ ಮುಂದಿಟ್ಟುಕೊಂಡು ಟೋಲ್ ಶುಲ್ಕ ವಸೂಲಿ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಪ್ರಶ್ನೆ ಮಾಡಬೇಕಾದ ರಾಜಕಾರಣಿಗಳು ಎಂದಾದರೂ ಟೋಲ್ ಕಟ್ಟಿದ್ದರೇ ತಾನೇ ? ಇನ್ನು ನ್ಯಾಯಾಧೀಶರಿಗೆ, ಪೊಲೀಸರಿಗೆ, ಉನ್ನತ ಅಧಿಕಾರಿಗಳಿಗೆ ಗುರುತಿನ ಚೀಟಿ ತೋರಿಸಿ ಟೋಲ್ ಶುಲ್ಕ ವಿಲ್ಲದೇ ಐಶರಾಮಿ ಕಾರುಗಳಲ್ಲಿ ಉಚಿತವಾಗಿ ಓಡಾಡುತ್ತಾರೆ. ಜೀವನದಲ್ಲಿ ಸಾಲ ಮಾಡಿ ರಸ್ತೆ ತೆರಿಗೆ ಪಾವತಿಸಿ ಖರೀದಿಸಿದರು ಮಾತ್ರ ವಿಧಿಸಿದಷ್ಟು ಶುಲ್ಕ ಪಾವತಿಸಿ ಸಂಚರಿಸಬೇಕು ? ಲಕ್ಷ ಲಕ್ಷ ವಾಹನಗಳಿಂದ ವಸೂಲಿಯಾಗುವ ರೋಡ್ ಟ್ಯಾಕ್ಸ್ ಎಲ್ಲಿ ಹೋಗುತ್ತಿದೆ ?

Karna

ರಾಜ್ಯದಲ್ಲಿ ಇದೇ ರೀತಿ ಎಲ್ಲಾ ರಸ್ತೆಗಳನ್ನು ಟೋಲ್ ರಸ್ತೆಗಳನ್ನಾಗಿ ಮಾರ್ಪಡಿಸಿದ್ರೆ ಭವಿಷ್ಯದಲ್ಲಿ ಯಾರು ವಾಹನ ಇಟ್ಟುಕೊಂಡು ಓಡಾಡದ ದುಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ. ಮೂರು ಲಕ್ಷ ಕೋಟಿ ಬಜೆಟ್ ಮಂಡಿಸುವ ಕರ್ನಾಟಕ ಸರ್ಕಾರ ಇಲಾಖೆಗಳಗೆ ಹತ್ತು ಸಾವಿರ ಕೋಟಿ, ಇಪ್ಪತ್ತು ಸಾವಿರ ಕೋಟಿ ಅನುದಾನ ನೀಡುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ಈ ಸ್ಕೀಮ್ ಗಳನ್ನು ಕೊಟ್ಟರೂ ಜನರಂತೂ ಉದ್ದಾರ ಅಗಿಲ್ಲ. ಸಾವಿರಾರು ಕೋಟಿಗಳನ್ನು ನೀರು, ಆಹಾರ, ಶಿಕ್ಷಣ, ರಸ್ತೆ ನಿರ್ಮಾಣದಂತಹ ಮೂಲ ಸೌಕರ್ಯ ಕಲ್ಪಿಸಬಹುದಿತ್ತಲ್ಲವೇ ?

ಎರಡು ಸಾವಿರ ಕೋಟಿ ರೂ. ಮೂರು ಸಾವಿರ ಕೋಟಿ ರೂ.ನಂತಹ ರಸ್ತೆ ನಿರ್ಮಾಣ ಯೋಜನೆಗಳಿಗೆ ಸರ್ಕಾರ ಹಣ ನೀಡದೇ ಖಾಸಗಿ ಕಂಪನಿಗಳಿಗೆ ರಸ್ತೆ ಅಭಿವೃದ್ಧಿ ಗುತ್ತಿಗೆ ನೀಡುತ್ತಿವೆ. ಇರುವ ರಸ್ತೆ ಅಭಿವೃದ್ಧಿ ಪಡಿಸಿ ಟೋಲ್ ವಸೂಲಿಗೆ ಮೂವತ್ತು ವರ್ಷ ಗುತ್ತಿಗೆ ನೀಡಲಾಗುತ್ತಿದೆ. ಇದರ ಜತೆಗೆ ಮೂರ್ನಾಲ್ಕು ವರ್ಷಕ್ಕೊಂದು ಸಲ ಟೋಲ್ ದರ ಹೆಚ್ಚಳ ಮಾಡಿ ಜನರ ಮೇಲೆ ಬರೆ ಎಳೆಯಲಾಗುತ್ತಿದೆ. ರಸ್ತೆ ಅಭಿವೃದ್ಧಿ ಪಡಿಸುವ ಕಂಪನಿಗಳು ಹೂಡಿದ ಬಂಡವಾಳದ ಹತ್ತು ಪಟ್ಟು ಹಣ ವಸೂಲಿ ಮಾಡುತ್ತಿವೆ. ಇದರ ವಿರುದ್ಧ ಜನ ಸಾಮಾನ್ಯರು ಕೂಡ ದ್ವನಿಯೆತ್ತುತ್ತಿಲ್ಲ. ಹೋರಾಟಗಳನ್ನು ಮಾಡಿಲ್ಲ. ಇದರ ಪರಿಣಾಮ ಕರ್ನಾಟಕದ ಜನರು ವಾಹನ ಹೊರಗೆ ತೆಗೆದರೆ ಟೋಲ್ ಕಟ್ಟಿ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅದೇ ರಾಜಕಾರಣಿಗಳು ಬಡಿಗಾಸು ಕೊಟ್ಟು ಹೋರಾಟ ಮಾಡಿ ಅಂದ್ರೆ ಸಾಕು ಟೋಂಕ ಕಟ್ಟಿ ಬೀದಿಗೆ ಇಳಿಯುತ್ತಾರೆ. ರಾಜ್ಯದಲ್ಲಿ ಟೋಲ್ ರಸ್ತೆಗಳ ನಿರ್ಮಾಣ ವೆಚ್ಚ, ಅವು ವಿಧಿಸುತ್ತಿರುವ ಶುಲ್ಕದ ಬಗ್ಗೆ ಅಧ್ಯಯನ ನಡೆಸಿ ಸುಲಿಗೆ ಮಾಡುತ್ತಿರುವ ಬಗ್ಗೆ ಒಬ್ಬರೂ ಚಕಾರ ಎತ್ತುತ್ತಿಲ್ಲ. ಇದು ಜನ ಸಾಮಾನ್ಯರು ಮಾಡುತ್ತಿರುವ ದೊಡ್ಡ ತಪ್ಪು. ಜನ ತಂತ್ರಕ್ಕಿಂತಲೂ, ನ್ಯಾಯಕ್ಕಿಂತಲೂ ಟೋಲ್ ಗಳು, ಟೋಲ್ ಕಂಪನಿಗಳು, ಟೋಲ್ ಶುಲ್ಕ ದೊಡ್ಡದೇ ಎಂಬ ಅಲೋಚನೆ ಮಾಡಿ ಜನ ಸಾಮಾನ್ಯರು ಅಡಳಿತ ಸರ್ಕಾರಗಳನ್ನು ಪ್ರಶ್ನಿಸಿದ್ರೆ ಬಹುಶಃ ಒಂದೇ ದಿನ ಟೋಲ್ ಬೂತ್ ಗಳು ಕಣ್ಮರೆಯಾಗಬಹುದು ಅಲ್ಲವೇ ?

ದೇಶದಲ್ಲಿ 851 ಟೋಲ್ ಪ್ಲಾಜಾಗಳು:

ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ 851 ಟೋಲ್ ಪ್ಲಾಜಾಗಳಿವೆ ಎಂದು ಅಂದಾಜಿಸಲಾಗಿದೆ. ಇನ್ನೆರಡು ವರ್ಷದಲ್ಲಿ ಇವು ದುಪ್ಪಟ್ಟು ಅಗಬಹುದು. ಇನ್ನು ರಾಜ್ಯ ಹೆದ್ದಾರಿಗಳ ಟೋಲ್ ಗಳ ಲೆಕ್ಕ ಅದೆಷ್ಟು ಇದೆಯೋ ದೇವರೆ ಬಲ್ಲ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ 51 ಟೋಲ್ ಬೂತ್‌ ಗಳಿವೆ ಎಂದು ವರದಿಗಳು ಹೇಳುತ್ತವೆ. ಜನರು ದುಡಿದ ಹಣದಲ್ಲಿ ಶೇ. ಅರ್ಧದಷ್ಟು ಮೊತ್ತ ಸಾರಿಗೆ ಸೌಲಭ್ಯಕ್ಕಾಗಿಯೇ ವ್ಯಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಹೆಚ್ಚಳವಾಗುತ್ತಿರುವ ಇಂಧನ ದರದ ಜತೆಗೆ ಟೋಲ್ ಶುಲ್ಕಗಳು ಸಹ ಜನ ಸಾಮಾನ್ಯರ ರಕ್ತ ಹೀರುತ್ತಿವೆ.

ಮತ್ತೆ ಟೋಲ್ ಶುಲ್ಕ ಹೆಚ್ಚಳ: ಏಪ್ರಿಲ್ 1 ರಿಂದ, ಭಾರತದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸುವುದು ಹೆಚ್ಚು ದುಬಾರಿಯಾಗಲಿದೆಯಂತೆ. ಏಕೆಂದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ತೆರಿಗೆಯನ್ನು 5% ರಿಂದ 10% ರಷ್ಟು ಹೆಚ್ಚಿಸಲು ಯೋಜಿಸುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಪ್ರಸ್ತಾವಿತ ಸುಂಕ ಪರಿಷ್ಕರಣೆಯು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ವಾರ್ಷಿಕ ವ್ಯವಹಾರವಾಗಿದೆ. ಪರಿಷ್ಕೃತ ಟೋಲ್ ದರಗಳನ್ನು ಮಾರ್ಚ್ 25 ರೊಳಗೆ ರಸ್ತೆ ಮತ್ತು ಸಾರಿಗೆ ಸಚಿವಾಲಯಕ್ಕೆ ಕಳುಹಿಸಲಾಗುವುದು, ನಂತರ ಅವುಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಹೀಗಾಗಿ ಟೋಲ್ ಶುಲ್ಕ ಮತ್ತಷ್ಟ ಹೆಚ್ಚಾಗಬಹುದು.

2022 ರಲ್ಲಿ ಟೋಲ್ ತೆರಿಗೆ ಶ್ರೇಣಿಯನ್ನು 10% ಮತ್ತು 15% ವರೆಗೆ ಹೆಚ್ಚಿಸಲಾಯಿತು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸುಂಕದ ಬೆಲೆಗಳನ್ನು ರೂ 10 ಮತ್ತು ರೂ 60 ರಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ, ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ತೆರಿಗೆ ಪ್ರತಿ ಕಿಲೋಮೀಟರ್‌ಗೆ ರೂ 2.19 ಆಗಿದೆ. ಆದಾಗ್ಯೂ, ಎಕ್ಸ್‌ಪ್ರೆಸ್‌ವೇಯಲ್ಲಿ ವೇಗವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಪ್ರಸ್ತುತ ದಿನಕ್ಕೆ 20,000 ರಷ್ಟಿದ್ದು, ಮುಂದಿನ ಆರು ತಿಂಗಳಲ್ಲಿ ಈ ಸಂಖ್ಯೆ 50,000 ರಿಂದ 60,000 ಕ್ಕೆ ಏರುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ರಾ. ಹೆದ್ದಾರಿ ಟೋಲ್ ಕೇಂದ್ರಗಳ ಪಟ್ಟಿ:

Sr.NO      ರಾಜ್ಯ      ಎನ್.ಎಚ್.ನಂ.      ಟೋ ಜಹೆಸರು     ಒಟ್ಟು ದೂರ           ಎಲ್ಲಿಂದ – ಎಲ್ಲಿಗೆ

1          ಕರ್ನಾಟಕ       7         ಅತ್ತಿಬೆಲೆ (BETL)ಕಿ.ಮೀ.     32.700          ಸಿಲ್ಕ್ಬೋರ್ಡ್ಜಂಕ್ಷನ್ –                                                                                                              ಹೊಸೂರು

2        ಕರ್ನಾಟಕ       7        ಬಾಗೇಪಲ್ಲಿ ಕಿ.ಮೀ.           464.774        ಎಪಿ/ ಕರ್ನಾಟಕಗಡಿ –                                                                    ದೇವನಹಳ್ಳಿ (ಕಿಮೀ 462.164 ರಿಂದಕಿಮೀ 533.619)

3       ಕರ್ನಾಟಕ     4      ಬೆಂಗಳೂರು ನೆಲಮಂಗಲ      ಕಿ.ಮೀ.14.855     ಬೆಂಗಳೂರು ನೆಲಮಂಗಲ

4        ಕರ್ನಾಟಕ  48     ಬಂಕಾಪುರ                      ಕಿ.ಮೀ. 352.550    ಕರ್ನಾಟಕ ರಾಜ್ಯದಲ್ಲಿ NHDP ಹಂತ V ಅಡಿಯಲ್ಲಿ  NH48 (ಹಳೆಯ NH4) ನ ಹಾವೇರಿ ಹುಬ್ಬಳ್ಳಿ ವಿಭಾಗ 340 ರಿಂದ Km 403.400 ಗೆ ಆರು ಲೇನಿಂಗ್ ಬಲವರ್ಧನೆ.

5    ಕರ್ನಾಟಕ    NH 66    ಬೇಲೆಕೇರಿಕಿ.ಮೀ.         131.200  93.700  ಕಿಮೀವರೆಗೆ ವಿಸ್ತರಿಸುತ್ತದೆ. 283.300

6     ಕರ್ನಾಟಕ    73    ಬ್ರಹ್ಮರಕೋಟ್ಲು ಕಿ.ಮೀ. 331.290    ಬಿ.ಸಿ.ರೋಡ್ – ಪಡೀಲ್ಮತ್ತುಪಡೀಲ್ಬೈ ಪಾಸ್

7     ಕರ್ನಾಟಕ    4     ಚಳಗೇರಿ        ಕಿ.ಮೀ. 288.200         ಹದಡಿ – ದೇವಗಿರಿ

8      ಕರ್ನಾಟಕ    75  ದೊಡ್ಡಕರೇನಹಳ್ಳಿ ಕಿ.ಮೀ. 32.600    ನೆಲಮಂಗಲ -ದೇವಿಹಳ್ಳಿ

9     ಕರ್ನಾಟಕ    44   ಎಲೆಕ್ಟ್ರಾನಿಕ್ಸಿಟಿ  ಕಿ.ಮೀ. 18.000  ಸಿಲ್ಕ್ಬೋರ್ಡ್ಜಂಕ್ಷನ್ – ಹೊಸೂರು

10     ಕರ್ನಾಟಕ     4       ಗಬ್ಬೂರ್ (MoRTH)ಕಿ.ಮೀ. 408.000    ಹುಬ್ಬಳ್ಳಿ-ಧಾರವಾಡ

11      ಕರ್ನಾಟಕ    75     ಗದ್ದೂರು ಕಿ.ಮೀ.217.450   ಮುಳಬಾಗಲು-ಎಪಿ/ಕೆಎನ್‌ಟಿಗಡಿ

12      ಕರ್ನಾಟಕ    48        ಗುಯಿಲಾಲು ಕಿ. ಮೀ.172.770      ತುಮಕೂರು – ಚಿತ್ರದುರ್ಗ

13      ಕರ್ನಾಟಕ     66             ಗುಂಡ್ಮಿಕಿ .ಮೀ.300.480         ಕುಂದಾಪುರ – ಸುರತ್ಕಲ್

14      ಕರ್ನಾಟಕ    NH67        ಹಳ್ಳಿಗುಡಿ    ಕಿ.ಮೀ. 220.160  ಹುಬ್ಬಳ್ಳಿ    ಹೊಸಪೇಟೆವಿಭಾಗ

15     ಕರ್ನಾಟಕ    NH218 (ಹೊಸ NH50)        ಹರ್ವಾಲ್       ಕಿಮೀ ನಲ್ಲಿ. 303.400     ಹರ್ವಾಲ್ ವಿಲೇಜ್ ತಾ.ಜೇವರ್ಗಿ ಜಿಲ್ಲೆಕಲಬುರಗಿ) ಬಿಜಾಪುರ ಗುಲಬರ್ಗಾ ಹುಮ್ನಾಬಾದ್

16   ಕರ್ನಾಟಕ     4    ಹತ್ತರಗಿ        ಕಿಮೀ 537.770          ಹತ್ತರಗಿ – ಹಿರೇಬಾಗೇವಾಡಿ

17      ಕರ್ನಾಟಕ   66     ಹಜಮಾಡಿ          347.180          ಕುಂದಾಪುರ-ಸೂರತ್ಕಲ್

18      ಕರ್ನಾಟಕ  48          ಹೆಬ್ಬಾಳು        ಕಿ.ಮೀ.237.650     ದೊಡ್ಡಸಿದ್ದವನಹಳ್ಳಿ-ಹಡದಿ

19     ಕರ್ನಾಟಕ    66      ಹೆಜಮಾಡಿ         ಕಿ.ಮೀ.347.180       ಕುಂದಾಪುರಸುರತ್ಕಲ್ವಿಭಾಗದ 6 ಲೇ  ನ್‌. ಕಿ.ಮೀ.283.300 ರಿಂದ    ಕಿಮೀ.358.080  ಮಹಾವೀರ್ NH66 ರ Km.3.700 ರಿಂದ Km.17.200 ವರೆಗೆ ತಲಪಾಡಿ ಭಾಗ ವೃತ್ತ

20   ಕರ್ನಾಟಕ    4      ಹಿರೆಬಾಗೆವಾಡಿ      ಕಿ.ಮೀ.482.600        ಬೆಳಗಾವಿ – ಧಾರವಾಡ

21     ಕರ್ನಾಟಕ      150A      ಹಿರೆಹಳ್ಳಿ      ಕಿ.ಮೀ.341.300        ಬೈರಾಪುರ  – ಚಳ್ಳೇಕೆರೆ

22      ಕರ್ನಾಟಕ      13       ಹಿಟ್ನಾಳು,     ಕಿ..ಮೀ.288.000    ಹುನಗುಂದ – ಹೊಸಪೇಟೆ

23    ಕರ್ನಾಟಕ      NH 66 old NH 17    ಹೊಳೆಗಡ್ಡೆ       ಕಿ.ಮೀ.182.

24      ಕರ್ನಾಟಕ      75      ಹೊಸಕೋಟೆ    ಕಿ.ಮೀ.307. 700     ಬೆಂಗಳೂರು-ಕೋಲಾರ- ಮುಳಬಾಗಲು

25     ಕರ್ನಾಟಕ       212(New 766)   ಕೆ.ಎನ್.ಹಂಡಿ     ಕಿ.ಮೀ.200.400      ಕೇರಳಗಡಿ- ಕೊಳ್ಳೇಗಾಲ

26    ಕರ್ನಾಟಕ   65(old 9) ಕಂಕೋಲೆ     ಕಿ.ಮೀ.464.600     ಸಂಗಾರೆಡ್ಡಿಗೆ MH – KNT ಗಡಿ

27       ಕರ್ನಾಟಕ     212(New 766)   ಕನ್ನೆಗಾಲ         ಕಿ.ಮೀ.144.130     ಕೇರಳಗಡಿ – ಕೊಳ್ಳೇಗಾಲ

28     ಕರ್ನಾಟಕ       NH218(New NH50)       ಕನ್ನೊಳ್ಳಿ    ಕಿ.ಮೀ.241.100(ತಾತ್ಕಾಲಿಕವಾಗಿ Km.240.100 ನಲ್ಲಿದೆ) ಕನ್ನೊಳ್ಳಿಗ್ರಾಮ ಸಿಂದಗಿ ) ಬಿಜಾಪುರ ಗುಲ್ಬರ್ಗಾ

29     ಕರ್ನಾಟಕ     75       ಕರಿಬೈಲು       (ಬೆಳ್ಳೂರುಕ್ರಾಸ್) ಕಿ.ಮೀ.101.250  ನೆಲಮಂಗಲ ಜಂಕ್ಷನ್ – ದೇವಿಹಳ್ಳಿ

30  ಕರ್ನಾಟಕ       48      ಕರಿಜೀವನಹಳ್ಳಿ     ಕಿ.ಮೀ.104.530      ತುಮಕೂರು – ಚಿತ್ರದುರ್ಗ  ಬೈಪಾಸ್

31    ಕರ್ನಾಟಕ  50ಕಸಬಾ(ಬಿಜಾಪುರ)    ಕಿ.ಮೀ.103.888        ಬಿಜಾಪುರ-ಹುನಗುಂದ

32      ಕರ್ನಾಟಕ       4  ಕ್ಯಾತ್ಸಂದ್ರ/ತುಮಕೂರು/ ಕಿ.ಮೀ.61.500      ನೆಲಮಂಗಲ-ತುಮಕೂರು

33     ಕರ್ನಾಟಕ      75     ಕಿರಿಸಾವೆ    ಕಿ.ಮೀ.119.100          ಹಾಸನ-ದೇವಿಹಳ್ಳಿ

34         ಕರ್ನಾಟಕ      4     ಕೊಗ್ನೋಳಿ       ಕಿ .ಮೀ.591.240       ಮಹಾರಾಷ್ಟ್ರಗಡಿ- ಬೆಳಗಾವಿ

35         ಕರ್ನಾಟಕ     65(Old 9) ಮಂಗಳಗಿ  ಕಿ.ಮೀ.407.500  MH KNT ಗಡಿ – ಸಂಗಾರೆಡ್ಡಿವರೆಗೆ

36      ಕರ್ನಾಟಕ 75     ಮುಳಬಾಗಿಲು      ಕಿ.ಮೀ.246/750       ಮುಳಬಾಗಿಲು-ಕೋಲಾರ-

37         ಕರ್ನಾಟಕ       50      ನಗರಹಳ್ಳ     ಕಿ.ಮೀ.165.650           ಬಿಜಾಪುರ-ಹುನಗುಂದ

38      ಕರ್ನಾಟಕ       NH67(Old NH 63)    ನಲವಾಡಿ     ಕಿ.ಮೀ.161.2004  ಹುಬ್ಬಳ್ಳಿ- ಹೊಸಪೇಟೆ

39     ಕರ್ನಾಟಕ      NH44         ನರೇಂದ್ರ(ಮೋರ್ಥ್ )ಧಾರವಾಡ ಹತ್ತಿರ      ಬೆಂಗಳೂರು- ಪುಣೆಮಾರ್ಗ

40        ಕರ್ನಾಟಕ        4(OLD 7)      ನವಯುಗದೇವನಹಳ್ಳಿ/ಸಾದಹಳ್ಳಿ/ಕಿ.ಮೀ.538.0ದೇವನಹಳ್ಳಿ-ಬೆಂಗಳೂರು

41 ಕರ್ನಾಟಕ       NH48(Old NH 4)    ನೆಲಮಂಗಲ-ತುಮಕೂರು/ಕುಲುಮೆಪಾಳ್ಯ ಕಿ.ಮೀ.30.000                                                                                                 ನೆಲಮಂಗಲ-ತುಮಕೂರು

42        ಕರ್ನಾಟಕ       13       ಶಹಾಪುರ್          ಕಿ.ಮೀ.283.500          ಹುನಗುಂದ-ಹೊಸಪೇಟೆ

43           ಕರ್ನಾಟಕ        75      ಶಾಂತಿಗ್ರಾಮ         ಕಿ.ಮೀ.169.350         ಹಾಸನ- ದೇವಿಹಳ್ಳಿ

44        ಕರ್ನಾಟಕ       NH 66  old NH 17   ಶಿರೂರ್      ಕಿ.ಮೀ. .239.640         ಶಿರೂರ್

45   ಕರ್ನಾಟಕ    66  ಸುರತ್ಕಲ್ – ಕಿ.ಮೀ 358.042 ಸುರತ್ಕಲ್ – ನಂತೂರು ಮತ್ತು

46      ಕರ್ನಾಟಕ     66     ತಲಪಾಡಿ     ಕಿ.ಮೀ.16.600     ಕುಂದಾಪುರ- ಸುರತ್ಕಲ್

47    ಕರ್ನಾಟಕ       NH50(Old NH13)    ತಿಮ್ಮಲಾಪುರ     ಕಿ.ಮೀ.59.924     ಬೆಂಗಳೂರು-ನೆಲಮಂಗಲ

48        ಕರ್ನಾಟಕ   4       ಬೆಂಗಳೂರುಕಡೆಗೆ ಕಿ.ಮೀ.26.075       ಬೆಂಗಳೂರು-ನೆಲಮಂಗಲ

49         ಕರ್ನಾಟಕ       4        ನೆಲಮಂಗಲಕಡೆಗೆ   ಕಿ.ಮೀ.14.875       ಹುನಗುಂದ-ಹೊಸಪೇಟೆ

50       ಕರ್ನಾಟಕ       13   ವನಗಿರಿ          ಕಿ.ಮೀ.        229.061     ಕೇರಳಗಡಿ- ಕೊಳ್ಳೇಗಾಲ

51     ಕರ್ನಾಟಕ         212(New 766)       ಯೆದ್ದೋರ್ಕಿ.ಮೀ.236.550ಆರೂರು-ಕೇರಳ/ತಮಿಳುನಾಡುಗಡಿ

Related News

spot_img

Revenue Alerts

spot_img

News

spot_img