21.1 C
Bengaluru
Monday, July 8, 2024

ದಾಖಲೆಗಳ ನೋಂದಣಿ ವೇಳೆ ಮುದ್ರಾಂಕ ಶುಲ್ಕ ಯಾರು ಕಟ್ಟಬೇಕು?

ದಾಖಲೆಗಳನ್ನು ಬರೆದಾಗ ಕಾನೂನು ಪ್ರಕಾರ ಕಡ್ಡಾಯವಾಗಿ ಮುದ್ರಾಂಕ ಶುಲ್ಕ ಕಟ್ಟಲೇಬೇಕು. ಮುದ್ರಾಂಕ ಕಾಯ್ದೆ ಪ್ರಕಾರ ಯಾವುದೇ ಲಿಖಿತ ಪತ್ರಗಳಿಗೆ ಮುದ್ರಾಂಕ ಶುಲ್ಕ ಜನ ಸಾಮಾನ್ಯರು ಪಾವತಿಸಬೇಕು.

ಎಲ್ಲಾ ಲಿಖಿತ ಪತ್ರಗಳು ದಾಖಲೆಗಳು ಆಗುತ್ತವೆ. ಆದರೆ ಎಲ್ಲಾ ದಾಖಲೆ ಪತ್ರಗಳು ಲಿಖಿತ ಪತ್ರಗಳು ಆಗುವುದಿಲ್ಲ ( All instruments are documents. But all documents are not instruments, Karnataka stamps act ). ಅಂದರೆ, ಇಲ್ಲಿ ಕವಿಯೊಬ್ಬ ಕವನ ಬರೆದರೆ ಅದೊಂದು ಲಿಖಿತ ದಾಖಲೆ. ಅದಕ್ಕೆ ಮುದ್ರಾಂಕ ಶುಲ್ಕ ಪಾವತಿ ಮಾಡುವ ಪ್ರಮೇಯ ಇರುವುದಿಲ್ಲ. ಅದೇ ಕವಿಯೊಬ್ಬ ತನ್ನ ಕವನವನ್ನು ಮುದ್ರಣ ಮಾಡಿ ಮಾರಾಟ ಮಾಡಲು ಪ್ರಕಾಶಕರೊಂದಿಗೆ ಒಡಂಬಡಿಕೆ ಮಾಡಿಕೊಂಡ ಪಕ್ಷದಲ್ಲಿ ಅದು ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಇನ್‌ಸ್ಟ್ರೂಮೆಂಟ್ (ಸುಂಕ ಪಾವತಿಸಲು ಅರ್ಹವಾದ ಲಿಖಿತ ದಾಖಲೆ) ಆಗಲಿದೆ. ಅದಕ್ಕೆ ಮುದ್ರಾಂಕ ಶಲ್ಕ ಪಾವತಿಸಬೇಕಾಗುತ್ತದೆ. ಇದು ನಮ್ಮ ಮುದ್ರಾಂಕ ಕಾಯ್ದೆಯ ಮೂಲ ತಾತ್ಪರ್ಯ.

ಯಾವುದೇ ಇನ್‌ಸ್ಟ್ರೂಮೆಂಟ್ಸ್‌ಗಳು ಬರೆದು ಸಹಿ ಮಾಡಿದ ತಕ್ಷಣ ಮುದ್ರಾಂಕ ಶುಲ್ಕಕ್ಕೆ ಅರ್ಹತೆ ಪಡೆಯುತ್ತವೆ. ಆದರೆ, ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂಬ ನಿಯಮವಿಲ್ಲ. ಉದಾಹರಣೆಗೆ ಮನೆ ಬಾಡಿಗೆ ಪಡೆಯುವ 11 ತಿಂಗಳ ಕರಾರು ಪತ್ರಕ್ಕೆ ಕೊಡುವರು, ಪಡೆಯುವರು ಸಹಿ ಮಾಡಿದ ತಕ್ಷಣ ಮುದ್ರಾಂಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದರೆ ನೊಂದಣಿ ಕಡ್ಡಾಯವಾಗಿರುವುದಿಲ್ಲ. ( ಭಾರತೀಯ ನೋಂದಣಿ ಕಾಯ್ದೆ 1908 ರ ಕಲಂ 18 ) ಅದೇ ಹನ್ನೊಂದು ತಿಂಗಳ ನಂತರದ ಬಾಡಿಗೆ ಕರಾರು ಸಂಬಂಧಪಟ್ಟ ವ್ಯಕ್ತಿಗಳು ಸಹಿ ಮಾಡಿದ ಬಳಿಕ ಕಡ್ಡಾಯವಾಗಿ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಬೇಕಾಗುತ್ತದೆ ಎಂದು ಭಾರತೀಯ ನೋಂದಣಿ ಕಾಯ್ದೆ ಕಲಂ 17 ಹೇಳುತ್ತದೆ.

ಇದೇ ಪ್ರಕಾರ ಈ ಕೆಳಕಂಡ ದಾಖಲೆಗಳಿಗೆ ಮುದ್ರಾಂಕ ಶುಲ್ಕ ಯಾರು ಕೊಡಬೇಕು ಎಂಬುದನ್ನು ಕರ್ನಾಟಕ ಮುದ್ರಾಂಕ ಕಾಯ್ದೆ 1957 ಹೇಳುತ್ತದೆ. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 30(A) ಪ್ರಾಕಾರ ಯಾವ ವ್ಯಕ್ತಿಯು ಹಣ ಸೆಳೆಯುತ್ತಾನೆ, ಯಾರು ಪತ್ರ ಬರೆಯುತ್ತಾರೆ, ಅವನು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು. ಕರ್ನಾಟಕ ಮುದ್ರಾಂಕ ಕಾಯ್ದೆ ಅಡಿಯಲ್ಲಿ ಈ ಕೆಳಗೆ ಕೊಟ್ಟಿರುವ ಕಲಂವಾರು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡುವ ಬಗ್ಗೆ ವಿವರ ನೀಡಲಾಗಿದೆ.

ಕರ್ನಾಟಕ ಮುದ್ರಾಂಕ ಕಾಯ್ದೆ ದಾಖಲಾತಿ ಸ್ವರೂಪ
ಆರ್ಟಿಕಲ್ 02 : ಆಡಳಿತ ಸಂಬಂಧ ಬಾಂಡ್: ಉದಾಹರಣೆಗೆ, ಕಂಪನಿಗಳು ಆಡಳಿತ ಉದ್ದೇಶಕ್ಕೆ ಮಾಡಿಸಿರುವ ಬಾಂಡ್.
ಆರ್ಟಿಕಲ್ 06: ಹಕ್ಕುಪತ್ರಗಳ ಒತ್ತೆ ,ಪಾನ್ ಅಥವಾ ಒತ್ತೆ
ಆರ್ಟಿಕಲ್ 12: ಯಾವುದೇ ರೀತಿಯ ಬಾಂಡ್ ಗಳು
ಆರ್ಟಿಕಲ್ 13: ಬಾಟಮರೀ ಬಾಂಡ್ :
ಅರ್ಟಿಕಲ್ 23 : ಕಸ್ಟಮ್ಸ್ ಮತ್ತು ಎಕ್ಸೈಸ್ ಬಾಂಡ್
ಆರ್ಟಿಕಲ್ 27: ಫರ್ದರ್ ಚಾರ್ಜ್
ಆರ್ಟಿಕಲ್ 29: ಇಂಡಮನೇಟ್ರಿ ಬಾಂಡ್
ಆರ್ಟಿಕಲ್ 34: ಮಾರ್ಟ್ ಗೇಜ್ ಡೀಡ್ ( ಭೋಗ್ಯ ಅಧಾರ ಪತ್ರಗಳು)
ಆರ್ಟಿಕಲ್ 45 : ಹಕ್ಕು ಬಿಡುಗಡೆ ಪತ್ರ
ಆರ್ಟಿಕಲ್ 46 : ರೆಸ್ಪಾಂಡೆನ್ಸಿಯಾ ಬಾಂಡ್
ಆರ್ಟಿಕಲ್ 47 : ಸೆಕ್ಯುರಿಟಿ ಬಾಂಡ್
ಆರ್ಟಿಕಲ್ 48 : ಸೆಟ್ಲಮೆಂಟ್ ಡೀಡ್ ( ವ್ಯವಸ್ಥಾ ಪತ್ರ )
ಆರ್ಟಿಕಲ್ 52 (A) : ಡಿಬೆಂಚರುಗಳ ವರ್ಗಾವಣೆ, ಮಾರ್ಕೆಟೆಬಲ್ ಸೆಕ್ಯುರಿಟಿ,
ಆರ್ಟಿಕಲ್ 52 (B) : ಟ್ರಾನ್ಸಫರ್ ಆಫ್ ಇಂಟ್ರೆಸ್ಟ್ ಸೆಕ್ಯುರೂಡ್ ಬೈ ಬಾಂಡ್ ( ಭದ್ರತಾ ಬಾಂಡ್ ಗಳ ಭದ್ರತೆ ವರ್ಗಾಯಿಸುವುದು) ಭೋಗ್ಯ ಮತ್ತು ಆಧಾರ ಪತ್ರ ಅಥವಾ ವಿಮಾ ಪತ್ರ.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (B) ಪ್ರಕಾರ: ಕನ್ವೇಯನ್ಸ್ ( ವರ್ಗಾವಣೆ), ಸೇಲ್ ( ಕ್ರಯಪತ್ರ) , ಲೀಸ್ ಅಥವಾ ಅಗ್ರಿಮೆಂಟ್, ( ಭೋಗ್ಯದ ಕರಾರು) ಇದರಲ್ಲಿ ಪತ್ರ ಬರೆಸಿಕೊಳ್ಳುವರು ಮುಂದ್ರಾಂಕ ಶುಲ್ಕವನ್ನು ಪಾವತಿಸಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (C) ಪ್ರಕಾರ : ಒಂದು ವೇಳೆ ಬಾಡಿಗೆ ಪತ್ರದ/ ಕೌಂಟರ್ ಪಾರ್ಟ್, ಬರೆದುಕೊಡುವರು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (C) ಉಪ ಕಲಂ (a) ಪ್ರಕಾರ: ಪವರ್ ಆಫ್ ಅಟಾರ್ನಿ ( ಮೌಕ್ತಾರ ನಾಮ) ಮಾಡಿಸಿದಾಗ, ಪವರ್ ಆಫ್ ಅಟಾರ್ನಿ ಮಾಡಿದ ವ್ಯಕ್ತಿಯು ಮುದ್ರಾಂಕ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (d) ಪ್ರಕಾರ: ಅದಲು ಬದಲು ಪತ್ರ ಮಾಡುವಾಗ ಬರೆಸಿಕೊಡುವರು ಹಾಗೂ ಬರೆಸಿಕೊಟ್ಟವರು ಇಬ್ಬರೂ ಸಮನಾಗಿ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (D) (d) ವಕೀಲರು ಬಾರ್ ಕೌನ್ಸಿಲ್ ನಲ್ಲಿ ನೊಂದಾಯಿಸುವ ಸಮಯದಲ್ಲಿ ಸಂಬಂಧಪಟ್ಟ ಮುದ್ರಾಂಕ ಶುಲ್ಕವನ್ನು ಯಾರು ನೊಂದಾಯಿಸಿಕೊಳ್ಳುತ್ತಾರೋ ಅವರೇ ( ವಕೀಲರು) ಕಟ್ಟಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (E) ಪ್ರಕಾರ, ಕ್ರಯದ ಪ್ರಮಾಣ ಪತ್ರವನ್ನು, ಖರೀದಿದಾರರು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು.

* ಕರ್ನಾಟಕ ಮುದ್ರಾಂಕ ಕಾಯ್ದೆ 1957 ಕಲಂ 30 (F) ಪ್ರಕಾರ: ವಿಭಾಗ ಪತ್ರಗಳಿಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಗಳಿಗೆ ವರ್ಗಾವಣೆಯಾಗಿರುವ ವಸ್ತುಗಳಿಗೆ ಅನುಗುಣವಾಗಿ ತಮ್ಮ ಭಾಗಕ್ಕೆ ಬಂದ ವಸ್ತು/ ಆಸ್ತಿಗಳಿಗೆ ಅವರೇ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು.

Related News

spot_img

Revenue Alerts

spot_img

News

spot_img