ಬೆಂಗಳೂರು, ಸೆ. 12: ರಿಯಲ್ ಎಸ್ಟೇಟ್ ಉದ್ಯಮದ ವಂಚನೆ, ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ ನ್ಯಾಯ ಒದಗಿಸಿಕೊಡುವ ಸಂಬಂಧ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸೆ. 12 ರಿಂದ ಎರಡು ತಿಂಗಳ ಲೋಕ್ ಅದಾಲತ್ ಆಯೋಜಿಸಿದೆ.
ಬೆಂಗಳೂರಿನ ಯುಟಿಲಿಟಿ ಬಿಲ್ಡಿಂಗ್ ನಲ್ಲಿರುವ ರೇರಾ ಕಚೆರಿಯಲ್ಲಿ ಲೋಕ್ ಅದಾಲತ್ ನಡೆಯಲಿದೆ. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳು, ವಂಚನೆ, ಮೋಸ, ಪ್ಲಾಟ್ ಅಥವಾ ನಿವೇಶನ ಕೊಡದೇ ಮೋಸ ಮಾಡಿರುವುದು, ಪ್ಲಾಟ್ ಸ್ವಾಧೀನಕ್ಕೆ ನೀಡದೆ ವಿಳಂಬ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಸಾರ್ವಜನಿಕರು ಕರ್ನಾಟಕ ರೇರಾದಲ್ಲಿ ದೂರು ನೀಡಬಹುದು.
ಸುದೀರ್ಘ ಲೋಕ್ ಅದಾಲತ್ ನಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವಿಕರಿಸಲಾಗುತ್ತದೆ. ನಿವೇಶನ ಕೊಡದೆ ಮೋಸ ಮಾಡಿದ್ದರೆ, ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಅಕ್ರಮ ಲೇಔಟ್ ನಿರ್ಮಾಣ ಮಾಡಿದ್ದರೆ, ಅಗ್ರಿಮೆಂಟ್ ಪ್ರಕಾರ ಕಾಲಮಿತಿಯಲ್ಲಿ ನಿವೇಶನ ಅಥವಾ ಪ್ಲಾಟ್ ಕೊಡದೆ ಇದ್ದರೆ, ಅಥವಾ ದಾಖಲೆಗಳಲ್ಲಿ ಮೋಸ ಮಾಡಿದ್ದರೆ, ಯಾವುದೇ ಸಮಸ್ಯೆಯಿದ್ದರೂ ಸಾರ್ವಜನಿಕರು ಕರ್ನಾಟಕ ನಿಯಂತ್ರಣ ಪ್ರಾಧಿಕಾರ ಅಯೋಜಸಿರುವ ಲೋಕ್ ಅದಾಲತ್‌ನಲ್ಲಿ ದೂರು ಸಲ್ಲಿಸಬಹುದು.
ಸಾರ್ವಜನಿಕರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಾಗುತ್ತದೆ. ನ. 12 ರಂದು ದೂರುಗಳಿಗೆ ಸಂಬಂಧಿಸಿದಂತೆ ರೇರಾ ಪ್ರಾಧಿಕಾರ ತೀರ್ಪುಗಳನ್ನು ಪ್ರಕಟಿಸಲಿದೆ. ಮೋಸ ಹೋಗಿದ್ದರೆ, ಬಡ್ಡಿ ಸಮೇತ ಪರಿಹಾರ ಪಡೆಯಲು ರೇರಾದಲ್ಲಿ ಅವಕಾಶವಿದೆ.
ಲೋಕ ಅದಾಲತ್ ಗೆ ಸಲ್ಲಿಸುವ ದೂರುಗಳ ಸಂಬಂಧ ದೂರುದಾರರು ಮತ್ತು ಪಾರ್ಟಿಗಳನ್ನು ಕರೆಸಿ ರಾಜೀ ಸಂಧಾನ ಮಾಡಿಸಲಾಗುತ್ತದೆ. ಯಾವುದೇ ವೆಚ್ಚ ಇಲ್ಲದೇ ಲೋಕ ಅದಾಲತ್ ನಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕಳ್ಳಲು ಅವಕಾಶವಿದೆ. ಮುಂದಿನ ಎರಡು ತಿಂಗಳ ಕಾಲ ಮಧ್ಯಾಹ್ನ 2.30 ರಿಂದ ಸಂಜೆ 5.30 ರ ವರೆಗೆ ಸಂಧಾನ ಸಭೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080 – 22249798, 22249799 ,41624455,